ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರ ಮಾರ್ಗಕ್ಕೆ ರಾಜೀವ ಗಾಂಧಿ ಹೆಸರು ?

By Staff
|
Google Oneindia Kannada News

Sharad Pawar
ಮುಂಬೈ, ಜು. 1 : ದೇಶದ ಬಹುತೇಕ ಪ್ರಮುಖ ಯೋಜನೆಗಳು, ಕಟ್ಟಡಗಳು, ಆಣೆಕಟ್ಟುಗಳು, ವಿಮಾನ ನಿಲ್ದಾಣಗಳು, ಕಾರ್ಖಾನೆಗಳು ಸೇರಿದಂತೆ ಪ್ರಮುಖ ಎನಿಸಿರುವ ಎಲ್ಲ ಯೋಜನೆಗಳಿಗೂ ಗಾಂಧಿ ಮನೆತನದವರ ಹೆಸರಿಟ್ಟಿರುವುದು ಗೊತ್ತಿರುವ ಸಂಗತಿ. ಆದರೆ, ಇದೀಗ ದೇಶದ ಪ್ರಥಮ ಬಾಂದ್ರಾ-ವೊರ್ಲಿ ಸಮುದ್ರ ಮಾರ್ಗಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.

ದೇಶದ ಮೊದಲ ಸಮುದ್ರ ಮಾರ್ಗಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಈಗಾಗಲೇ ಘೋಷಿಸಿದ್ದಾರೆ. ಸರಕಾರದ ಕ್ರಮಕ್ಕೆ ಅಲ್ಲಿನ ವಿರೋಧ ಪಕ್ಷಗಳು ತೀವ್ರ ಬೇಸರ ವ್ಯಕ್ತಪಡಿಸಿವೆ. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕೂಡಾ ಸರಕಾರದೊಂದಿಗೆ ಧ್ವನಿಗೂಡಿಸಿದ್ದು ವಿಶೇಷವಾಗಿದೆ.


ಮಂಗಳವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶರದ್ ಪವಾರ್, ರಾಜೀವ್ ಗಾಂಧಿ ಭಾರತದ ದೊಡ್ಡ ಆಸ್ತಿ. ಅಲ್ಲದೇ ಅವರು ಹುಟ್ಟಿರುವುದು ಕೂಡಾ ಮುಂಬೈಯಲ್ಲಿ. ಈ ನೆಲದ ಮಗನಾಗಿರುವ ಅವರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅಂತಹ ಮಹನೀಯರ ಹೆಸರನ್ನು ದೇಶದ ಪ್ರಥಮ ಸಮುದ್ರ ಮಾರ್ಗಕ್ಕೆ ಇಟ್ಟರೆ ಅದಕ್ಕೊಂದು ಗೌರವ ಬರಲಿದೆ ಎಂದು ಅವರ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ವೊರ್ಲಿಯ ರಂಗ ಶಾರದಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭದಲ್ಲಿ ಶರದ್ ಪವಾರ್ ಅವರು ದೇಶದ ಸಮುದ್ರ ಮಾರ್ಗಕ್ಕೆ ರಾಜೀವ್ ಗಾಂಧಿ ಹೆಸರಡಿಬೇಕು ಎಂದು ಪ್ರಸ್ತಾಪ ಮಾಡುತ್ತಿದ್ದಂತೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಸಮುದ್ರ ಮಾರ್ಗಕ್ಕೆ ರಾಜೀವ್ ಗಾಂಧಿ ಹೆಸರಿಡಲು ಸರಕಾರದ ಸಮ್ಮತಿಯಿದೆ ಎಂದು ಹೇಳಿದರು. ಸಮುದ್ರವನ್ನು ಯುಪಿಎ ಚೇರ್ ಮನ್ ಸೋನಿಯಾ ಗಾಂಧಿ ಉದ್ಘಾಟಿಸಿದರು.

ಅರೇಬಿಯನ್ ಸಮುದ್ರಕ್ಕೆ ಸೇತುವೆ ಕಟ್ಟಲಾಗಿದ್ದು, ವೊರ್ಲಿ ಮತ್ತು ಬಾಂದ್ರಾಗಳನ್ನು ಸಂಪರ್ಕನಾಡಿ ಕಾರ್ಯನಿರ್ವಹಿಸಲಿದೆ. ಈ ಮಾರ್ಗಕ್ಕೆ ಸುಮಾರು 1,634 ಕೋಟಿ ರುಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಈ ರಸ್ತೆ ಮೂಲಕ ದಿನಕ್ಕೆ ಒಂದೂವರೆ ಲಕ್ಷ ವಾಹನಗಳು ಸಂಚರಿಸುತ್ತವೆ ಎಂದು ಅಂದಾಜಿಸಲಾಗಿದೆ. ಸಂಚಾರಕ್ಕೆ ಚಿಕ್ಕ ವಾಹನ 50 ಹಾಗೂ ದೊಡ್ಡ ವಾಹನಗಳಿಗೆ 100 ರುಪಾಯಿ ಟೋಲ್ ನಿಗದಿಪಡಿಸಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X