ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ಕೇಂದ್ರ ರೈಲ್ವೆ ಬಜೆಟ್ ಮಂಡನೆ

By Staff
|
Google Oneindia Kannada News

Mamata Banerjee
ನವದೆಹಲಿ, ಜು. 1 : ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯುಪಿಎ ಸರಕಾರ ತನ್ನ ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಲು ಸಕಲ ಸಿದ್ಧತೆ ನಡೆಸಿದೆ. ಗುರುವಾರ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ರೈಲ್ವೆ ಬಜೆಟ್ ಅನ್ನು ಮಂಡಿಸಲಿದ್ದಾರೆ.

ಜನಸಾಮಾನ್ಯರಿಗೆ ಅನುಕೂಲವಾಗುವ ಬಜೆಟ್ ಮಂಡಿಸುವ ಎಲ್ಲ ಮುನ್ಸೂಚನೆಗಳನ್ನು ನೀಡಿರುವ ಸಚಿವೆ ಮಮತಾ ಬ್ಯಾನರ್ಜಿ ಅವರು, ಮುಖ್ಯವಾಗಿ ಪ್ಯಾಸೆಂಜರ್ ಪ್ರಯಾಣದರ ಇಳಿಕೆ, ಸಾಗಾಣಿಕೆ ದರ, ಪ್ರಯಾಣಿಕರ ಸುರಕ್ಷತೆ ಮತ್ತು ರೈಲ್ವೆಯಲ್ಲಿ ವ್ಯಾಪಾರ ಮಾಡುತ್ತಿರುವ ದಿನಸಿ ವ್ಯಾಪಾರಿಗಳ ಹಿತ ಕಾಪಾಡಲು ಮುಂದಾಗಿದ್ದು, ಕೇವಲ 20 ರುಪಾಯಿ ದರದಲ್ಲಿ ಮಾಸಿಕ ಪಾಸ್ ನೀಡಲು ಚಿಂತನೆ ನಡೆಸಲಾಗಿದೆ.

ರೈಲ್ವೆ ಸ್ಟೇಷನ್ ನಲ್ಲಿ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟ. ಜನಸಾಮಾನ್ಯರಿಗೆ ಅನುಕೂಲವಾಗಲು ಇನ್ನಷ್ಟು ಪ್ಯಾಸೆಂಜರ್ ರೈಲುಗಳು ಸಂಚಾರಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಸ್ವಕ್ಷೇತ್ರ ರಾಯ್ ಬರೇಲಿಯಲ್ಲಿ ರೈಲ್ವೆ ಕೋಚಿಂಗ್ ಕಾರ್ಖಾನೆ. ಪಶ್ಚಿಮ ಬಂಗಾಲಕ್ಕೆ ಹೆಚ್ಚು ಆಧ್ಯತೆ ನೀಡುವ ಸಾಧ್ಯತೆ ಇದ್ದು, ಕೊಲ್ಕತ್ತಾ ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ರೈಲ್ವೆ ನಿಲ್ದಾಣವಾಗಿ ಅಭಿವೃದ್ಧಿಪಡಿಸಬಹುದು.

ಜಮ್ಮು ಕಾಶ್ಮೀರದ ಕಾತ್ರಾ ಮತ್ತು ಖಾಜೀಗುಂಡ ವಿಭಾಗದ ಅಭಿವೃದ್ಧಿ ಕುರಿತು ಬಜೆಟ್ ನಲ್ಲಿ ಸೇರಿಸುವ ಸಾಧ್ಯತೆ ಇದೆ. ಲಾಲು ಪ್ರಸಾದ್ ಯಾದವ್ ಆರಂಭಿಸಿರುವ ಗರೀಭ್ ರಥ ಯೋಜನೆಯನ್ನು ಮುಂದುವರೆಸುವುದು. ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಕೆ, ಬಾಂಬ್ ನಿಷ್ಕ್ರಿಯ ದಳ ರಚನೆ, ಆರ್ ಪಿಎಫ್ ಬಳಕೆ, ಹೊಸ ಮಾರ್ಗಗಳು, ಹೊಸ ರೈಲ್ವೆಗಳ ಓಡಾಟಗಳು ಬಟೆಜ್ ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X