ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂರ್ಗ್ ಸೇರಿ ಹೊಸ ರಾಜ್ಯಗಳ ಸ್ಥಾಪನೆಗೆ ಆಗ್ರಹ

By Staff
|
Google Oneindia Kannada News

Govt gets demand for creation of 10 new states
ನವದೆಹಲಿ, ಜೂ. 29: ಹೊಸದಾಗಿ ಸುಮಾರು 10 ರಾಜ್ಯಗಳನ್ನು ರಚಿಸುವಂತೆ ವಿವಿಧ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ಯುಪಿಎ ಸರ್ಕಾರ ಭಾನುವಾರ ಪ್ರಕಟಿಸಿದೆ. ಇವುಗಳಲ್ಲಿ ಬಿಹಾರದಿಂದ ಮಿಥಿಲಾಚಲ್, ಗುಜರಾತ್ ನಿಂದ ಸೌರಾಷ್ಟ್ರ, ಕರ್ನಾಟಕದಿಂದ ಕೂರ್ಗ್ ಬೇಡಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ತೆಲಂಗಾಣ ರಾಷ್ಟ್ರ ಸಮಿತಿ(ಟಿ ಆರ್ ಎಸ್), ಜನಮುಖಿ ಮೋರ್ಛಾ(ಜಿಜೆಎಂ) , ಕೂರ್ಗ್ ರಾಜ್ಯ ಹೋರಾಟ ಸಮಿತಿ ಮುಂತಾದ ಪ್ರತ್ಯೇಕತಾವಾದಿ ಸಂಘಟನೆಗಳಿಂದ ಒತ್ತಡ ಹೆಚ್ಚಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದರು.

ಉತ್ತರಪ್ರದೇಶ ಹಾಗೂ ಮಧ್ಯ ಪ್ರದೇಶದಿಂದ ವಿಭಜನೆಗೊಂಡು ಬಂದಾ, ಚಿತ್ರಕೂಟ, ಝಾನ್ಸಿ, ಲಲಿತ್ ಪುರ್ ಹಾಗೂ ಸಾಗರ್ ಪ್ರದೇಶಗಳುಳ್ಳ ಬುಂಡೆಲ್ ಕಂಡ್ ರಾಜ್ಯ ಸ್ಥಾಪಿಸುವಂತೆ ಬಹುಕಾಲದಿಂದ ಕೋರಿಕೆ ಇದೆ. ಆಯಾ ರಾಜ್ಯಗಳಿಂದ ಈ ಬಗ್ಗೆ ಯಾವುದೇ ಅಧಿಕೃತ ಸೂಚನೆ ಅಥವಾ ಮನವಿಯನ್ನು ಗೃಹ ಇಲಾಖೆ ಇನ್ನೂ ಸ್ವೀಕರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.ಪ್ರತ್ಯೇಕ ಅಥವಾ ನೂತನ ರಾಜ್ಯ ಸ್ಥಾಪನೆಗೆ ಮುನ್ನ ಅವಶ್ಯಕತೆ ಹಾಗೂ ಅಗತ್ಯತೆಯ ಸಮೀಕ್ಷೆ ಮಾಡಿ ಮುಂದಿನ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X