ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ

By Staff
|
Google Oneindia Kannada News

ಮೈಸೂರು, ಜೂ. 28: ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ನಿಗಧಿತ ಅವಧಿಯೊಳಗೆ ಆಯಾಯ ಕಚೇರಿಗಳ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡದಿದ್ದರೆ ಅಂತಹ ಅಧಿಕಾರಿಗಳಿಗೆ ದಂಡ ವಿಧಿಸಬಹುದಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕುಆಯೋಗದ ಆಯುಕ್ತ ಜೆ ಎಸ್ ವಿರೂಪಾಕ್ಷಯ್ಯ ಅವರು ತಿಳಿಸಿದರು.

ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ಇಂದು ಮಾಹಿತಿ ಹಕ್ಕು ಅಧಿನಿಯಮ ಕಲಂ 4 (1) ಹಾಗೂ ನಾಗರೀಕ ಸನ್ನದು ಕುರಿತು ಒಂದು ದಿನದ ವಿಭಾಗ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮಾಹಿತಿ ಕೋರಿ ಬರುವ ಅರ್ಜಿದಾರರಿಗೆ ಮಾಹಿತಿ ಅಧಿಕಾರಿಗಳು ಸ್ಪಂದಿಸಿ ಮಾಹಿತಿ ನೀಡಬೇಕು. ಒಂದು ವೇಳೆ ನಿಗಧಿತ ಅವಧಿಯೊಳಗೆ ಮಾಹಿತಿ ನೀಡದಿದ್ದಲ್ಲಿ ಅಂತಹ ಅಧಿಕಾರಿಗಳಿಗೆ ದಿನವೊಂದಕ್ಕೆ 250 ರೂ.ಗಳಂತೆ ಗರಿಷ್ಠ 25,000 ರೂ.ಗಳವರೆಗೆ ದಂಡ ವಿಧಿಸುವುದರ ಜೊತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಮಾಹಿತಿ ಆಯುಕ್ತರು ಆದೇಶಿಸಬಹುದಾಗಿದೆ ಎಂದು ಹೇಳಿದರು.

ಮಾಹಿತಿ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರು ಅರ್ಜಿಯೊಂದಿಗೆ ೧೦ ರೂ.ಗಳ ಶುಲ್ಕ ಪಾವತಿಸಬೇಕು. ಶುಲ್ಕವನ್ನು ಭಾರತೀಯ ಪೋಸ್ಟಲ್ ಆರ್ಡರ್, ಬ್ಯಾಂಕರ್‍ಸ್ ಚೆಕ್, ಡಿಡಿ ಅಥವಾ ನಗದು ಹಣದ ಮೂಲಕ ಪಾವತಿಸಬಹುದು. ಬಡತನ ರೇಖೆಗಿಂತ ಕೆಳಗಿರುವವರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆದರೆ ಅರ್ಜಿಯೊಂದಿಗೆ ಬಿ ಪಿ ಎಲ್ ದೃಢೀಕರಣ ಪ್ರತಿ ಲಗತ್ತಿಸಬೇಕಾಗುತ್ತದೆ ಎಂದ ಅವರು ಎ೪ ಗಾತ್ರದ ಕಾಗದದಲ್ಲಿ ಮಾಹಿತಿ ಕೇಳಿದರೆ ಪ್ರತಿ ಪುಟಕ್ಕೆ ರೂ. 10, ಎ4 ಗಾತ್ರದ ಪ್ರತಿ ಪುಟಕ್ಕೆ ಕಲಂ 4 (1) (ಬಿ) ನಲ್ಲಿ ನಮೂದಿಸಿರುವ ದಾಖಲೆಗಳಿಗೆ ರೂ. ಒಂದು, ಭೂಪಟಗಳು, ನಕಾಶೆಗಳು ಅಥವಾ ವರದಿಗಳು ಅಥವಾ ಯಾವುದೇ ತಾಂತ್ರಿಕ ದಾಖಲೆ ಅಥವಾ ಮಾದರಿ ಅಥವಾ ಆಕೃತಿಗಳಾಗಿದ್ದರೆ ಅಗತ್ಯವಿರುವ ಸಾಮಗ್ರಿಗಳು ಮತ್ತು ಶ್ರಮಿಕ ವೆಚ್ಚ ಆಧರಿಸಿ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನಿಗಧಿಪಡಿಸುವ ಶುಲ್ಕ ನೀಡಬೇಕಾಗುತ್ತದೆ ಎಂದು ತಿಳಿಸಿದ ಅವರು ಪ್ರತಿ ದಿನಕ್ಕೆ ರಾಜ್ಯ ಮಾಹಿತಿ ಹಕ್ಕು ಆಯೋಗದಿಂದ 240 ಕೇಸ್‌ಗಳನ್ನು ವಿಲೇ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕರಾದ ಡಾ: ಅಮಿತಾ ಪ್ರಸಾದ್ ಅವರು ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರ ಜಿಲ್ಲೆ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಹಾಗೂ ಮೈಸೂರು ವಿಭಾಗದ ಏಳು ಜಿಲ್ಲೆಗಳ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X