ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಲ್ಡನ್ ಪಾಮ್ಸ್ ಸೇರಿದ ಬಿಜೆಪಿ ಸರಕಾರ

By Staff
|
Google Oneindia Kannada News

DK Shivakumar
ಬೆಂಗಳೂರು, ಜೂ. 26 : ಸರಕಾರ ಅಭಿವೃದ್ಧಿ ಕೆಲಸಗಳ ಪ್ರಗತಿ ಪರಿಶೀಲನೆಗಾಗಿ ವಿಧಾನಸೌಧ ಬಿಟ್ಟು ರೆಸಾರ್ಟ್ ಗೆ ಹೊರಟಿರುವ ಕ್ರಮವನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, "ರೆಸಾರ್ಟ್ ಗೆ ನಾವೇನೂ ಮಜಾ ಉಡಾಯಿಸೋಕೆ ಹೋಗುತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೆಸಾರ್ಟ್ ನಲ್ಲಿ ಸಭೆ ನಡೆಸುವುದನ್ನು ತಡೆಯುವುದು ಅಸಾಧ್ಯ ಎಂದರು. ರೆಸಾರ್ಟ್ ಗೆ ಹೋಗುತ್ತಿರುವುದು ಮಜಾ ಉಡಾಯಿಸಲಿಕ್ಕೆ ಅಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಲು ರೆಸಾರ್ಟ್ ನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಹಿತದೃಷ್ಟಿ ಹಾಗೂ ಅಭಿವೃದ್ದಿಯೇ ಸರಕಾರದ ಮುಖ್ಯ ಆದ್ಯತೆ. ಆದರೆ, ಪ್ರತಿಪಕ್ಷಗಳ ನಾಯಕರಿಗೆ ಟೀಕೆ ಮಾಡಲು ಏನೂ ಇಲ್ಲದ ಕಾರಣ ಇಂತಹ ಕೆಲಸಕ್ಕೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಲ್ಡನ್ ಪಾಮ್ಸ್ ನಲ್ಲಿ ಸಭೆ ಆರಂಭ

ನಿಗದಿಯಂತೆ ತುಮಕೂರು ರಸ್ತೆಯಲ್ಲಿ ಗೋಲ್ಡನ್ ಪಾಮ್ಸ್ ರೆಸಾರ್ಟ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಭೆ ಆರಂಭವಾಗಿದೆ. ಸಾರಿಗೆ ಸಚಿವ ಆರ್ ಅಶೋಕ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೇ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಮತ್ತು ಎಲ್ಲ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಸರಕಾರಕ್ಕೆ ದೊಡ್ಡ ಜ್ವರ : ಶಿವಕುಮಾರ್

ಮಂಗಳೂರು ಪ್ರವಾಸದಲ್ಲಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಸರಕಾರದ ರೆಸಾರ್ಟ್ ರಾಜಕಾರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಸರಕಾರದ ಎಲ್ಲ ಆಗುಹೋಗುಗಳ ಸಭೆ ನಡೆಯಲಿ. ರೆಸಾರ್ಟ್ ರಾಜಕಾರಣ ಸರಿಯಲ್ಲ ಎಂದು ಅವರು ಹರಿಹಾಯ್ದರು. ಸರಕಾರಕ್ಕೆ ದೊಡ್ಡ ಜ್ವರ ಬಂದಿದೆ. ಸರಕಾರವನ್ನು ರೆಸಾರ್ಟ್ ಗೆ ತಂದು ನಿಲ್ಲಿಸಿರುವುದಕ್ಕೆ ನಾಚಿಕೆ ಆಗಬೇಕು ಎಂದು ಶಿವಕುಮಾರ್ ಕಿಡಿಕಾರಿದರು.

ರೆಸಾರ್ಟ್ ರಾಜಕಾರಣದ ಹಿಂದೆ ದೊಡ್ಡ ಕುತಂತ್ರವಿದೆ. ಸರಕಾರದಲ್ಲಿ ಯಾವುದೂ ಸರಿಯಿಲ್ಲ. ಸಂಘ ಪರಿವಾರದ ಮಾರ್ಗದರ್ಶನದಲ್ಲಿ ರೆಸಾರ್ಟ್ ಸಭೆ ಆಯೋಜಿಸಲಾಗಿದೆ. ರೆಸಾರ್ಟ್ ಹಣ ಪಾವತಿಸುವವರಾರು. ಸರಕಾರದ ಸಭೆಗೆ ವಿಧಾನಸೌಧವೆ ಇದೆ ಅದನ್ನು ಬಿಟ್ಟು ರೆಸಾರ್ಟ್ ಹೋಗುವಂತಹದ್ದು ಏನಿದೆ ಎಂದು ಪ್ರಶ್ನಿಸಿದರು. ಸರಕಾರದಲ್ಲಿ ಎರಡು ಬಣಗಳಿಗಿವೆ. ಇಷ್ಟರಲ್ಲೇ ಸರಕಾರದಲ್ಲಿ ದೊಡ್ಡದೊಂದು ಬಿರುಕು ಉಂಟಾಗಲಿದೆ ಎಂದು ಶಿವಕುಮಾರ್ ಭವಿಷ್ಯ ನುಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X