ಜುಲೈ 22 ಕ್ಕೆ ಸರಕಾರ ಪತನ : ವರ್ತೂರು

ಜುಲೈ 22 ಅಮಾವಾಸ್ಯೆಯ ದಿನದಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಪತನಗೊಳ್ಳಲಿದೆ. ಸರಕಾರ ಸುಭದ್ರವಾಗಿದೆ ಎಂದು ಯಡಿಯೂರಪ್ಪ ನಂಬಿದ್ದಾರೆ. ಆದರೆ ಅವರ ಗ್ರಹಗತಿ ಚೆನ್ನಾಗಿಲ್ಲ. ಬಳ್ಳಾರಿ ರೆಡ್ಡಿ ಸಹೋದರರ ಬೆಂಬಲಿಗರ ಸಂಖ್ಯಾಬಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರಕಾರ ಉರುಳುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿ ಪುತ್ರ ರಾಘವೇಂದ್ರ, ಸಚಿವೆ ಶೋಭಾ ಕರಂದ್ಲಾಜೆ, ಕಟ್ಟಾ ಸುಬ್ರಮಣ್ಯ ನಾಯ್ಡು, ಬಸವರಾಜ ಬೊಮ್ಮಾಯಿ ಮತ್ತು ಉದಾಸಿಯವರಿಗೆ ಮಾತ್ರ ಸರಕಾರ ಸೀಮಿತವಾಗಿದೆ. ಲಿಂಗಾಯಿತರನ್ನು ಬಿಟ್ಟು ಮುಖ್ಯಮಂತ್ರಿಗಳು ಬೇರೆಯವರನ್ನು ಕಣ್ಣೆತ್ತಿ ನೋಡುತ್ತಿಲ್ಲ. ಬಿಜೆಪಿಯ ಹಲವು ಶಾಸಕರು ಕೆಲಸ ಮಾಡಲಾಗದೆ ಒದ್ದಾಡುತ್ತಿದ್ದಾರೆ. ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷನಾಗಿದ್ದರೂ ಸಿಎಂ ಮತ್ತವರ ಕುಟುಂಬದವರ ಹಸ್ತಕ್ಷೇಪದಿಂದ ಕಳೆದ ಒಂದು ವರ್ಷದಲ್ಲಿ ಏನನ್ನೂ ಮಾಡಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications