ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಕುಡಿತ ಬಿಟ್ಟವರ ಸಂಘಕ್ಕೆ 45 ವರ್ಷ!

By Staff
|
Google Oneindia Kannada News

ಬೆಂಗಳೂರು, ಜೂ. 23 : ಕುಡಿತದ ದಾಸರಾದವರು 45 ವರ್ಷವಾದರೂ ಬದುಕುತ್ತಾರೋ ಇಲ್ಲವೋ, ಕುಡಿತ ಬಿಟ್ಟವರ ಸಂಘದ ಬೆಂಗಳೂರು ಘಟಕ ಮಾತ್ರ 45ರ ಹರೆಯದ ನಂತರವೂ ಜೀವನೋತ್ಸಾಹದಿಂದ ಖಣಖಣಿಸುತ್ತಿದೆ. ಅಲ್ಕೋಹಾಲಿಕ್ ಅನಾನಿಮಸ್ ಎಂಬ ಸಂಘಟನೆ 'ಚೀರ್ಸ್' ಹೇಳುವ ಮುಖಾಂತರ ತನ್ನ 45ನೇ ಹುಟ್ಟುಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡಿತು.

ಅಂದ ಹಾಗೆ, ಅಜ್ಞಾತ ಕುಡುಕರ ಸಂಘದ ಸದಸ್ಯರು ಚೀರ್ಸ್ ಹೇಳಿದ್ದು ಮದ್ಯದ ಗ್ಲಾಸಿನಿಂದಲ್ಲ, ಕಾಫಿ ಕಪ್ಪಿನಿಂದ!

ಒಂದಾನೊಂದು ಕಾಲದಲ್ಲಿ ಮಹಾನ್ ಕುಡುಕರಾಗಿದ್ದವರೆಲ್ಲ ಈ ಸಂಘಟನೆ ಸೇರಿದ ನಂತರ 'ಡ್ರಿಂಕ್ಸ್'ಗೆ ಗುಡ್ ಬೈ ಹೇಳಿದ್ದಾರೆ. ಕುಡಿತದ ದಾಸರಾಗಿ ಹೆಜ್ಜೆ ತಪ್ಪುತ್ತಿದ್ದ ಅನೇಕ ಯುವಕರ ಮನಪರಿವರ್ತಿಸಿದ್ದಾರೆ ಸಂಘಟನೆಯ ಸದಸ್ಯರು. ಇಂದಿಗೂ ಕೂಡ ಕುಡುಕರನ್ನು ಹಾದಿಗೆ ತಂದು ಜೀವನದ ದಿಕ್ಕು ತೋರಿಸುವುದೇ ಅಲ್ಕೋಹಾಲಿಕ್ ಅನಾನಿಮಸ್ ಸಂಘಟನೆಯ ಮೂಲಮಂತ್ರ. ಈ ಸಂಘಟನೆಯಲ್ಲಿ ಪುರುಷರು, ಸ್ತ್ರೀಯರು, ಹುಡುಗರು, ಮುದುಕರು... ಎಲ್ಲ ವಯೋಮಾನದವರು ಇದ್ದಾರೆ. ತಮ್ಮ ಅನುಭವ, ಬದಲಿಸಿಕೊಂಡ ಜೀವನ ಕ್ರಮದ ಬಗ್ಗೆ ತಿಳಿವಳಿಕೆ ನೀಡುತ್ತ ಕುಡುಕರ ಮನಪರಿವರ್ತನಕ್ಕೆ ಟೊಂಕ ಕಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಕುಡುಕರ ಸ್ವರ್ಗವಾಗುತ್ತಿದೆ. ಬೇಕಾಬಿಟ್ಟಿ ಜೀವನದಿಂದ ಯುವಜನತೆ ಹಾದಿ ತಪ್ಪುತ್ತಿದೆ. ಇತ್ತೀಚೆಗೆ ನಿಮ್ಹಾನ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.36ರಷ್ಟು ಬೆಂಗಳೂರಿಗರು ಕುಡಿತಕ್ಕೆ ಶರಣಾಗಿದ್ದಾರೆ ಮತ್ತು ಅವರಲ್ಲಿ ಶೇ.4ರಷ್ಟು ಭಾರೀ ಕುಡುಕರಾಗಿದ್ದಾರೆ.

ಕುಡಿತ ಬಿಡಬೇಕೆಂಬ ಇಚ್ಛಾಶಕ್ತಿಯೇ ಈ ಸದಸ್ಯರನ್ನು ಒಗ್ಗೂಡಿಸಿದೆ. ರಾಷ್ಟ್ರದಾದ್ಯಂತ 2 ಲಕ್ಷಕ್ಕೂ ಹೆಚ್ಚಿನ ಕುಡುಕರು ಸಂಘಟನೆಯ ಲಾಭ ಪಡೆದಿದ್ದಾರೆ. ಸಂಘಟನೆ ಸೇರಲು ಯಾವುದೇ ಶುಲ್ಕ ತೆರಬೇಕಾಗಿಲ್ಲ. ಐಚ್ಛಿಕವಾಗಿ ಯಾರಾದರೂ ಕೊಡುಗೆಯನ್ನು ನೀಡಬಹುದು. ಕುಡುಕರನ್ನು ಕುಡಿತದಿಂದ ದೂರವಾಗಿಸುವುದಷ್ಟೇ ನಮ್ಮ ಧ್ಯೇಯ ಎಂದು ಸಂಘದ ಸದ್ಯಸ್ಯರೊಬ್ಬರು ಹೇಳುತ್ತಾರೆ.

ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇಲ್ಲಿನ ಘಟಕದಲ್ಲಿ ಸಹಾಯವಾಣಿ ಕೂಡ ಇದ್ದು, 9902262316/9845587507 ದೂರವಾಣಿ ಸಂಖ್ಯೆಯ ಮುಖಾಂತರ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X