ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಜಿಕೆಗೆ ಕರೆ ಮಾಡಿ ಜೀವ ತಿನ್ನುತ್ತಿದ್ದಾಕೆ ಬಂಧನ

By Staff
|
Google Oneindia Kannada News

HD Kumaraswamy
ಬೆಂಗಳೂರು, ಜೂ. 17 : ಮಹತ್ವದ ಕಾರ್ಯಾಚರಣೆಯಲ್ಲಿ ಕಳೆದ 8 ತಿಂಗಳಿಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಜೀವ ತಿನ್ನುತ್ತಿದ್ದ ಯುವತಿಯನ್ನು ಬಂಧಿಸುವಲ್ಲಿ ಸದಾಶಿವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಂದಿನಿಲೇಔಟ್ ನ ಲಕ್ಷ್ಮಿದೇವಿ ನಗರದ ನಿವಾಸಿಯಾಗಿರುವ ಜಯಲಕ್ಷ್ಮಿ ಎಂಬ ಪಿಯುಸಿ ಅನುತ್ತೀರ್ಣವಾದ ಯುವತಿ ಕುಮಾರಸ್ವಾಮಿ ಅವರ ನಿದ್ದೆಗೆಡಿಸಿದಾಕೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಬೆಂಗಳೂರು ಮಿರರ್ ಪತ್ರಿಕೆ ವರದಿ ಮಾಡಿದೆ.

ಕೆಳಮಧ್ಯಮ ವರ್ಗದ ಜಯಲಕ್ಷ್ಮಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೊಬೈಲ್ ನಂಬರ್ ಪಡೆದುಕೊಂಡು ಅವರಿಗೆ ಪದೆಪದೇ ಕರೆ ಮಾಡುವ ತೀವ್ರ ತಲೆನೋವಿಗೆ ಕಾರಣಳಾಗಿದ್ದಳು. ಈಕೆಯ ಕಾಟದಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಅವರು ಪೊಲೀಸರ ಮೊರೆ ಹೋಗಿದ್ದರು. ಕುಮಾರಸ್ವಾಮಿ ಅವರ ಸಹಾಯಕ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಆರಂಭಿಸಿದ ಸದಾಶಿವನಗರ ಪೊಲೀಸರು ಸಿಮ್ ಕಾರ್ಡ್ ಗೆ ನೀಡಿದ್ದ ವಿಳಾಸದ ಪತ್ತೆ ಹಚ್ಚಲು ಸಾಧ್ಯವಾಗದೆ, ಯುವತಿಯೊಡನೆ ಪ್ರೇಮ ಸಂಭಾಷಣೆಗೀಳಿದ ನುರಿತ ಆರಕ್ಷಕರು ಕೊನೆಗೂ ಮಲ್ಲೇಶ್ವರಂ 8 ನೇ ಕ್ರಾಸ್ ನಲ್ಲಿ ಜಯಲಕ್ಷ್ಮಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಆದರೆ ಹೋಗಿ ಹೋಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹಿಂದೆ ಏಕೆ ಬಿದ್ದೆ ಎಂದು ಪ್ರಶ್ನಿಸಿದರೆ, ಸರಿಯುತ್ತರ ನೀಡದೆ ಹುಚ್ಚಾಟ ಆಡುತ್ತಿದ್ದಾಳೆ ಎನ್ನುತ್ತಾರೆ ಪೊಲೀಸರು.

ಕಳೆದ ಎಂಟು ತಿಂಗಳಿಂದ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ವಿಚಿತ್ರವಾಗಿ ವರ್ತಿಸುತ್ತಿದ್ದ ಈ ಯುವತಿಯನ್ನು ಬಂಧಿಸಲು ಎರಡು ತಿಂಗಳ ಪೊಲೀಸರು ಮಫ್ತಿ ಸಮವಸ್ತ್ರದಲ್ಲಿ ಬೆಂಗಳೂರು ತುಂಬಾ ತಿರುಗಾಡಿದ್ದಾರೆ. ಅನೇಕ ಸಿಮ್ ಕಾರ್ಡ್ ಬಳಸಿ, ವಿವಿಧ ವಿಳಾಸಗಳನ್ನು ಸೂಚಿಸಿ ಪೊಲೀಸರಿಗೆ ತಲೆನೋವು ತಂದಿದ್ದ ಈಕೆ ಕೊನೆಗೂ ಜಯಲಕ್ಷ್ಮಿ ಸೆರೆ ಸಿಕ್ಕಿದ್ದಾಳೆ. ಜಯಲಕ್ಷ್ಮಿ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆ ತಾಯಿ ಕುಮಾರಸ್ವಾಮಿ ಅವರ ಭೇಟಿ ಮಾಡಿ ತನ್ನ ಮಗಳು ಮಾಡಿದ ಮನ್ನಿಸಿ ಆಕೆ ಮೇಲೆ ಹೇರಲಾಗಿರುವ ಮೊಕದ್ದಮೆ ವಾಪಸ್ಸು ಪಡೆಯಲು ವಿನಂತಿಸಿಕೊಂಡಿದ್ದಾಳೆ. ಆದರೆ, ಕುಮಾರಸ್ವಾಮಿ ಅವರ ಸಹಾಯಕರು ಮೊಕದ್ದಮೆ ಹಿಂಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ ಎನ್ನಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X