ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು : ದೂರವಾಣಿ ಕೋಡ್ ಬದಲಾವಣೆ

By Staff
|
Google Oneindia Kannada News

ಮೈಸೂರು, ಜೂ. 11 : ದೂರವಾಣಿ ಇಲಾಖೆಯ ಆದೇಶದನ್ವಯ ಭಾರತ ಸಂಚಾರ ನಿಗಮವು ನಿರ್ಧರಿಸಿದಂತೆ ರಾಜ್ಯದ ಒಳಕರೆಯ ವ್ಯಾಪ್ತಿಯಲ್ಲಿ '95' ಕೋಡ್ ಬಳಸಿ ಕರೆ ಮಾಡುವ ವ್ಯವಸ್ಥೆಯನ್ನು ತಾಂತ್ರಿಕ ಕಾರಣಗಳಿಗಾಗಿ ಜೂನ್ 18 ರ ಮಧ್ಯರಾತ್ರಿಯಿಂದ ಜಾರಿಯಾಗುವಂತೆ ಬದಲಿ ವ್ಯವಸ್ಥೆಗೆ ಮರು ಪರಿವರ್ತಿಸಲಾಗುವುದು. ಈ ಹೊಸ ಬದಲಿ ವ್ಯವಸ್ಥೆಯಂತೆ ಜೂನ್ 18ರ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಬಿಎಸ್‌ಎನ್‌ಎಲ್.ನ ಎಲ್ಲ ಸ್ಥಿರ ಮತ್ತು ವಿಲ್ ದೂರವಾಣಿ ಹಾಗೂ ಎಸ್‌ಟಿಡಿ ಪಿಟಿ ಹಾಗೂ ಸಿಸಿಬಿ ಪಿಟಿ.ಗಳಿಂದ '95' ಕೋಡ್ ಬದಲು '0' ಕೋಡ್ ಉಪಯೋಗಿಸಿ ಬೇಕಾದ ನಂಬರ್‌ಗಳನ್ನು ಡಯಲ್ ಮಾಡಬೇಕಾಗುತ್ತದೆ.

ಈ ಹೊಸ ವ್ಯವಸ್ಥೆ ಜಾರಿಯಾದಂದಿನಿಂದ ಎಲ್ಲಾ ಗ್ರಾಹಕರಿಗೂ '0' ಕೋಡ್ ಉಪಯೋಗಿಸುವ ಸೇವೆ ಒದಗಿಸಿ ಅದರ ನಿರ್ವಹಣೆಗಾಗಿ 'ಡೈನಾಮಿಕ್ ಲಾಕ್' ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕರೆ ದರದ ಬದಲಾವಣೆ ಸಾರ್ವಜನಿಕ ದೂರವಾಣಿಗೆ ಅನ್ವಯಿಸುವುದಿಲ್ಲ. ಆದರೆ '0' ಕೋಡ್ ಬಳಸಿ ಸಾರ್ವಜನಿಕ ದೂರವಾಣಿಗಳಿಂದ ಕರೆ ಮಾಡುವ ಸೌಲಭ್ಯವು ಇರುವುದರಿಂದ, ಸಾರ್ವಜನಿಕ ದೂರವಾಣಿ ನಿರ್ವಾಹಕರು 50 ಕಿ.ಮೀ. ದೂರದವರೆಗೆ ಹಾಗೂ 50 ಕಿ.ಮೀ. ನಂತರದ ರಾಜ್ಯ ವ್ಯಾಪ್ತಿ ಕರೆಗಳಿಗೆ ಅನುಕ್ರಮವಾಗಿ 90 ಸೆಕೆಂಡ್ ಹಾಗೂ 60 ಸೆಕೆಂಡ್ ಮತ್ತು ಅಂತರ ರಾಜ್ಯ ಕರೆಗಳಿಗೆ 60 ಸೆಕೆಂಡ್ ಕರೆ ದರದ ತಾಂತ್ರಿಕ ಬದಲಾವಣೆಗಳನ್ನು ತಮ್ಮ ಪಿ.ಸಿ.ಓ. ಯಂತ್ರಗಳಲ್ಲಿ ಕೋಡಲೇ ಅಳವಡಿಸಬೇಕಾಗಿ ಈ ಮೂಲಕ ಮಾಹಿತಿ ನೀಡಲಾಗಿದೆ.

ದೂರ ಹಾಗೂ ದರದ ಮಾಹಿತಿಗಾಗಿ ಮತ್ತು ಯಾವುದೇ ತೊಂದರೆಗಳಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರ, ವಾಣಿಜ್ಯಾಧಿಕಾರಿ ಅಥವಾ ಉಪ ಮಂಡಲಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X