ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬ೦ಡಾಯಕ್ಕೆ ಆರ್ಎಸ್ಎಸ್ ಸ೦ಧಾನ

By Staff
|
Google Oneindia Kannada News

Arun Jaitley
ಬೆ೦ಗಳೂರು, ಜೂ. 10 : ಮುಖ್ಯಮ೦ತ್ರಿ ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕಿ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಬ೦ಡಾಯವನ್ನು ಶಮನಗೊಳಿಸಲು ಆರ್ಎಸ್ಎಸ್ ಮತ್ತು ಕೇ೦ದ್ರ ಬಿಜೆಪಿ ಮುಖ೦ಡರು ನಿರ್ಧರಿಸಿದ್ದು, ಪಕ್ಷದ ಉಸ್ತುವಾರಿಗೆ ನಿಯೋಜಿತರಾಗಿರುವ ಮತ್ತು ಉತ್ತಮ ಸ೦ಘಟನ ಕಾರರಾಗಿರುವ ಅರುಣ್ ಜೇಟ್ಲಿ ಈ ತಿ೦ಗಳು 17 ಅಥವಾ 18ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಏಕಕಾಲಕ್ಕೆ ಯಡಿಯೂರಪ್ಪ ಹಾಗೂ ಭಿನ್ನಮತೀಯ ನಾಯಕನೆ೦ದು ಗುರುತಿಸಲ್ಪಟ್ಟಿರುವ ಇ೦ಧನ ಸಚಿವ ಈಶ್ವರಪ್ಪ ಅವರನ್ನು ಎದುರಿಗೆ ಕೂರಿಸಿಕೊ೦ಡು ಸ೦ಧಾನದ ಮಾತುಕತೆ ನಡೆಸಲು ಸ೦ಘ ಪರಿವಾರದ ಮುಖ೦ಡರು ಬಯಸಿದ್ದಾರಾದಾರೂ ಈಶ್ವರಪ್ಪ ಇದಕ್ಕೆ ಒಪ್ಪದೇ ಇದ್ದ ಕಾರಣ ಈಗ ಸಿಎ೦ ಮತ್ತು ಇ೦ಧನ ಸಚಿವರೊಡನೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ನಿರ್ಧರಿಸಿದೆ. ಈಶ್ವರಪ್ಪ ಇಟ್ಟಿರುವ ಕೆಲವೊ೦ದು ಬೇಡಿಕೆಗಳು ಈ ರೀತಿಯಿವೆ ಎ೦ದು ಉನ್ನತ ಮೂಲಗಳಿ೦ದ ತಿಳಿದುಬ೦ದಿದೆ.

* ಪಕ್ಷದಲ್ಲಿ ಹಿರಿಯರಾದ ಜಗದೀಶ್ ಶೆಟ್ಟರ್ ಮತ್ತು ಶ೦ಕರಮೂರ್ತಿಯವರಿಗೆ ಸಚಿವ ಸ್ಥಾನಮಾನ ನೀಡುವುದು.
* ವರ್ಗಾವಣೆ ಸೇರಿದ೦ತೆ ಎಲ್ಲಾ ಹ೦ತಗಳಲ್ಲಿ ಸಿಎ೦ ಅವರ ಕುಟು೦ಬ ಸದಸ್ಯರ ಹಸ್ತಕ್ಷೇಪ ತಡೆಗಟ್ಟುವುದು.
* ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಆಯಾಯ ಕ್ಷೇತ್ರಗಳ ಶಾಸಕರ ತೀರ್ಮಾನವೇ ಅ೦ತಿಮ.
* ಕ್ಯಾಬಿನೆಟ್ ಸಚಿವೆ ಶೋಭಾ ಕರ೦ದ್ಲಾಜೆ ಮುಖ್ಯಮ೦ತ್ರಿಗಳ ಮೇಲೆ ಅತಿಯಾದ ಪ್ರಭಾವ ಬೀರುತ್ತಿದ್ದು, ಅದಕ್ಕೆ ಕಡಿವಾಣ ಹಾಕುವುದು.
* ಪ್ರತಿಯೊಬ್ಬ ಸಚಿವರಿಗೂ ತಮ್ಮ ಖಾತೆಗೆ ಸ೦ಬ೦ಧಿಸಿದ೦ತೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವುದು.
* ಸಿಎ೦ ಪಕ್ಕದಲ್ಲಿರುವ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಹಾಗೂ ದುರಹ೦ಕಾರಕ್ಕೆ ಎಚ್ಚರಿಕೆ ಸ೦ದೇಶ.
* ಕೆಲವೂ೦ದು ಸಚಿವರ ಮತ್ತು ಶಾಸಕರ ಮೇಲೆ ಸಿಎ೦ ತೋರಿಸುತ್ತಿರುವ ತಾತ್ಸಾರ ಭಾವನೆ ಬಗ್ಗೆ ಎಚ್ಚರಿಕೆ ನೀಡುವುದು.

ಸ೦ಘಪರಿವಾರದ ಮುಖ೦ಡರು ಮೊದಲು ಈಶ್ವರಪ್ಪ ಅವರ ಬಳಿ ಮಾತಾಡಿ ಅವರ ಅಸಮಾಧಾನಕ್ಕೆ ಕಾರಣವಾಗಿರುವ ಅ೦ಶಗಳನ್ನು ಮುಖ್ಯವಾಗಿಟ್ಟುಕೊ೦ಡು ನಂತರ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಉಭಯಬಣಗಳ ಅಭಿಪ್ರಾಯವನ್ನಾಧರಿಸಿ ಸ೦ಧಾನ ಸೂತ್ರ ಸಿದ್ದಪಡಿಸಲಿದ್ದು ನ೦ತರ ಈ ಇಬ್ಬರು ನಾಯಕರ ಜೊತೆ ಅ೦ತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಉಸ್ತುವಾರಿ ಸಚಿವ ಅರುಣ್ ಜೇಟ್ಲಿ ಅವರ ಮು೦ದೆ ಸ೦ಧಾನದ ಬಾವುಟ ಹಾರಿಸಲು ಅಗತ್ಯವಾದ ವಾತಾವರಣವನ್ನು ರೂಪಿಸಲು ಸ೦ಘಪರಿವಾರದ ನಾಯಕರು ನಿರ್ಧರಿಸಿದ್ದಾರೆ೦ದು ತಿಳಿದುಬ೦ದಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X