ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ

By Staff
|
Google Oneindia Kannada News

Ban on night rides in Bandipur Park to save animals
ಚಾಮರಾಜನಗರ, ಜೂ. 8 : ವನ್ಯಜೀವಿಗಳ ಅಮೂಲ್ಯ ಸಂಪತ್ತನ್ನು ಉಳಿಸಲು ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 115 ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳು 1980ರ ನಿಯಮ-221-ಎ(5)ರನ್ವಯ ಬಂಡೀಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 212 ಗುಂಡ್ಲುಪೇಟೆ-ಸುಲ್ತಾನಬತೇರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 67 ಗುಂಡ್ಲುಪೇಟೆ-ಊಟಿ ಮಾರ್ಗಗಳಲ್ಲಿ ಎಲ್ಲಾ ಮೋಟಾರು ವಾಹನಗಳ ಸಂಚಾರವನ್ನು 03-06-2009 ರಿಂದ ಜಾರಿಗೆ ಬರುವಂತೆ ರಾತ್ರಿ 9ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮನೋಜ್ ಕುಮಾರ್ ಮಿಶ್ರಾ ಅವರು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಬಂಡೀಪುರ ರಾಷ್ಟ್ರೀಯ ಅಭಯಾರಣ್ಯವನ್ನು ಭಾರತ ಸರ್ಕಾರವು 1989ರಲ್ಲಿ ರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿದ್ದು, ಈ ಅಭಯಾರಣ್ಯವು ತಮಿಳುನಾಡಿನ ನೀಲಗಿರಿ, ಮಧುಮಲೈ ಅರಣ್ಯ ಪ್ರದೇಶ, ಕೇರಳ ರಾಜ್ಯದ ವೈನಾಡು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ನಾಗರಹೊಳೆ ಅಭಯಾರಣ್ಯದವರೆಗೆ ವಿಸ್ತರಿಸಿದೆ.

ಈ ಅರಣ್ಯದ ಗಡಿ ಭಾಗವು ಮೈಸೂರು ಜಿಲ್ಲೆಯ ನಂಜನಗೂಡು ಹಾಗೂ ಹೆಚ್.ಡಿ.ಕೋಟೆ ಭಾಗವನ್ನು ಒಳಗೊಂಡಿದ್ದು, 990.51 ಚದರ ಕಿ.ಮೀ. ವಿಸ್ತೀರ್ಣತೆಯನ್ನು ಒಳಗೊಂಡಿರುತ್ತದೆ. ಸದರಿ ರಾಷ್ಟ್ರೀಯ ಉದ್ಯಾನ ಬರಿ ವನ್ಯಜೀವಿಧಾಮ ಮಾತ್ರವಲ್ಲದೆ ಹುಲಿ ಯೋಜನೆಗೆ ಅಳವಡಿಕೆಯಾದ ತಾಣವಾಗಿರುತ್ತದೆ. ಹಾಗೂ ಏಷ್ಯಾದ ಆನೆಗಳಿಗೆ ಮತ್ತು ಹುಲಿ ಸಂತತಿಗೆ ಹೆಸರುವಾಸಿಯಾದ ಅರಣ್ಯವಾಗಿರುತ್ತದೆ. ಈ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ವನ್ಯಜೀವಿಗಳು ಸಿಲುಕಿ ಸಾವಿಗೀಡಾಗಿ ಅವುಗಳ ಸಂತತಿ ಕ್ಷೀಣಿಸುತ್ತಿದೆ. ಹೀಗಾಗಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ.

ಈ ಆದೇಶದಿಂದ ಕೆಳಕಂಡವರಿಗೆ ವಿನಾಯ್ತಿ ನೀಡಲಾಗಿದೆ.

ಸಾರ್ವಜನಿಕರಿಗೆ,ಗ್ರಾಮಸ್ಥರಿಗೆ ಅನುಕೂಲವಾಗುವಂತೆ ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ 2 ಬಸ್ಸುಗಳನ್ನು ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ. ಹಾಗೂ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವಂತಹ ಸಂದರ್ಭದಲ್ಲಿ ಅನುಮತಿ ಪಡೆದಂತಹ ವಾಹನ ಮತ್ತು ಅಂಬುಲೆನ್ಸ್ ವಾಹನಗಳಿಗೆ ಮಾತ್ರ ಈ ಭಾಗದಲ್ಲಿ ಸಂಚರಿಸಲು ಅನುಮತಿಸಿದೆ. ಚೆಕ್‌ಪೋಸ್ಟ್‌ನಲ್ಲಿ ಇಂತಹ ವಾಹನಗಳನ್ನು ಸಹ ತಪಾಸಣೆ ಮಾಡುವುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X