ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ಹತ್ತಕ್ಕೆ ತಲುಪಿದ ಜನಾಂಗೀಯ ಹಲ್ಲೆ

By Staff
|
Google Oneindia Kannada News

Racial Attack: 10th Indian student attacked in Oz
ಮೆಲ್ಬೋರ್ನ್, ಜೂ.6: ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆ ಮುಂದುವರಿದಿದ್ದು ಇಂದು ಮತ್ತೊಬ್ಬ ಭಾರತೀಯ ಹಲ್ಲೆಗೆ ಗುರಿಯಾದ ಘಟನೆ ನಡೆದಿದೆ. ಅಮೀರ್ ಪಾಲ್ ಸಿಂಗ್ ಎಂಬುವವರೇ ಹಲ್ಲೆಗೆ ಒಳಗಾಗಿರುವ ಭಾರತೀಯ ವಿದ್ಯಾರ್ಥಿ. ಯುವಕರ ಗುಂಪೊಂದು ಅಮೀರ್ ಮೇಲೆ ಶುಕ್ರವಾರ ಹಲ್ಲೆ ಮಾಡಿದೆ. ಒಂದೇ ತಿಂಗಳಲ್ಲಿ ಹಲ್ಲೆಗೊಳಗಾಗುತ್ತಿರುವ ಹತ್ತನೇ ಘಟನೆ ಇದಾಗಿದೆ.

ಹರ್ಯಾಣ ಮೂಲದ ಅಮೀರ್ ಪಾಲ್ ಸಿಂಗ್ (20) ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದ ಆತ ಕೆಲಸ ನಿರ್ವಹಿಸುತ್ತಿದ್ದ ಮ್ಯಾಕ್ ಡೊನಾಲ್ಡ್ ಮಳಿಗೆ ಬಳಿಯೇ ಹಲ್ಲೆಗೊಳಗಾಗಿದ್ದಾನೆ. ಈ ಕುರಿತು ಮಾತನಾಡುತ್ತಾ ಅಮೀರ್, ಒಬ್ಬ ನನ್ನ ಬಳಿ ಬಂದು ನನ್ನ ಮೊಬೈಲ್ ಫೋನನ್ನುಕಸಿದುಕೊಂಡ. ಮೊಬೈಲ್ ಫೋನನ್ನು ಹಿಂತಿರುಗಿಸುವಂತೆ ನಾನು ಕೇಳಿದೆ. ಅಷ್ಟಕ್ಕೇ ಆತ ಮುಖಕ್ಕೆ ಮುಷ್ಠಿಯಿಂದ ಬಲವಾಗಿ ಗುದ್ದಿದ. ನಾನು ಅದೇ ವೇಗದಲ್ಲಿ ಅವನ ಮುಖಕ್ಕೆ ಹೊಡೆದೆ ಎಂದು ಘಟನೆಯನ್ನು ವಿವರಿಸಿದ್ದಾರೆ.

ಅವನೊಂದಿಗೆ ಬಂದಿದ್ದ ಇತರೆ ನಾಲ್ಕು ಮಂದಿ ನನ್ನ ಮೇಲೆ ಆಕ್ರಮಣ ಮಾಡಿ ಮನಬಂದಂತೆ ಥಳಿಸಿದರು. ವಿಷಯವನ್ನು ನಾನು ಪೊಲೀಸರಿಗೆ ತಿಳಿಸಿದ್ದೇನೆ. ಒಬ್ಬನಂತೂ ಚಾಕು ತೆಗೆದು ಇರಿಯಲು ಬಂದ, ನಾನು ತಪ್ಪಿಸಿಕೊಂಡೆ. ಚಾಕು ನನ್ನ ಬ್ಯಾಗಿಗೆ ಚುಚ್ಚಿತು ಎಂದು ಅಮೀರ್ ಹೇಳಿದ್ದಾರೆ. ಕ್ಯಾಪ್ಸ್ ಇನಿಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಅಮೀರ್ ಓದುತ್ತಿದ್ದಾನೆ.

ಅಲ್ಲಿನ ಸರಕಾರಕ್ಕೂ ಸುದ್ದಿ ಮುಟ್ಟಿದ್ದು, ಮತ್ತೊಮ್ಮೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರಿಕೆ ತೆಗೆದುಕೊಳ್ಳುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ಕೆವಿನ್ ರುಡ್ ಮತ್ತು ಉಪ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಭರವಸೆ ನೀಡಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿನ ಭಾರತೀಯ ವಿದ್ಯಾರ್ಥಿಗಳು ಮಾತ್ರ ಜೀವ ಭಯದಿಂದ ತತ್ತರಿಸುತ್ತಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X