ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ರು.ಗೆ ಕೆಜಿ ಅಕ್ಕಿ; ಯುಪಿಎ ಸರಕಾರದ ಕಾರ್ಯಕ್ರಮ

By Staff
|
Google Oneindia Kannada News

Pratibha Patil
ನವದೆಹಲಿ, ಜೂ.5: ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿ ಪ್ರತಿಯೊಂದು ಕಡುಬಡ (ಬಿಪಿಎಲ್) ಕುಟುಂಬಕ್ಕೆ ಕೆಜಿಗೆ 3 ರುಪಾಯಿ ದರದಲ್ಲಿ ತಿಂಗಳಿಗೆ 25 ಕೆಜಿ ಅಕ್ಕಿ ಅಥವಾ ಗೋಧಿ ಪೂರೈಸುವುದಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗುರುವಾರ ಸಂಸತ್ತಿನಲ್ಲಿ ಪ್ರಕಟಿಸಿದರು. ಆಹಾರ ಭದ್ರತೆ ಕಲ್ಪಿಸುವುದರೊಂದುಗೆ ಹತ್ತು ವಿಸ್ತೃತ ಕ್ಷೇತ್ರಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಮಹತ್ತರ ಮುನ್ನಡೆ ಸಾಧಿಸುವ ಮಾರ್ಗ ನಕ್ಷೆಯನ್ನು ಯುಪಿಎ ಸರಕಾರ ಗುರುವಾರ ಅನಾವರಣಗೊಳಿಸಿತು.

ರಾಷ್ಟ್ರಪತಿಗಳು ಲೋಕಸಭಾ ಚುನಾವಣೆ ಬಳಿಕ ಗುರುವಾರ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ, ಆಂತರಿಕ ಭದ್ರತೆ, ಕೋಮು ಸಾಮರಸ್ಯ ರಕ್ಷಣೆ, ಆಡಳಿತಾತ್ಮಕ ಸುಧಾರಣೆ, ಮಹಿಳೆಯರ ಅಭ್ಯುದಯಕ್ಕೆ ಸಂಘಟಿತ ಯತ್ನ ಮತ್ತು ಇತರ ಅವಕಾಶ ವಂಚಿತ ವರ್ಗಗಳ ಕಲ್ಯಾಣಕ್ಕೆ ಸರಕಾರ ಗರಿಷ್ಠ ಆದ್ಯತೆ ನೀಡಲಿದೆ ಎಂದು ರಾಷ್ಟ್ರಪತಿ ಹೇಳಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಡಿ ಉದ್ಯೋಗ ಪರವಾನಿಗೆ ವ್ಯಾಪ್ತಿಯನ್ನು ಹಿಗ್ಗಿಸಲಾಗುವುದು, ಮುಂಚೂಣಿ ಕಾರ್ಯಕ್ರಮಗಳ ವ್ಯಾಪ್ತಿಗೆ ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲ ಸೌಕರ್ಯ ಮತ್ತು ನಗರ ನವೀಕರಣ ಯೋಜನೆಗಳೂ ಸೇರುತ್ತವೆ ಎಂದವರು ತಿಳಿಸಿದರು.

ನೂತನ ಸರಕಾರ ತನ್ನ ಮೊದಲ ನೂರು ದಿನ ಪೂರೈಸುವ ಮುನ್ನ ಸದನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವುದೆಂದು ಹೇಳಿದ ಅವರು ಪಂಚಾಯತ್ ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50ರ ಕೋಟಾ ಒದಗಿಸಲಾಗುವುದೆಂದು ಹೇಳಿದರು. ಮಹಿಳೆಯರ ಕಲ್ಯಾಣ ಸಂಬಂಧಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಮಹಿಳಾ ಸಶಕ್ತೀಕರಣದ ರಾಷ್ಟ್ರೀಯ ಅಭಿಯಾನಕ್ಕೆ ವಿಶೇಷ ಒತ್ತು ನೀಡ ಲಾಗುವುದು ಎಂದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X