ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಮಾಫಿಯಾ ಅನೀಸ್ ದಾಳಿಗೆ ಕಾರಣ ?

By Did Rs 500-crore land deal spark attack on Dawood?
|
Google Oneindia Kannada News

Dawood
ಮುಂಬೈ, ಜೂ. 5 : ಕಳೆದ ಗುರುವಾರ ತಡರಾತ್ರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹೋದರ ಅನೀಸ್ ಮೇಲೆ ಅಪರಿಚಿತ ವ್ಯಕ್ತಿಗಳ ನಡೆಸಿದ ಗುಂಡಿನ ದಾಳಿ ಘಟನೆ ಹೊಸ ರೂಪ ಪಡೆಯತೊಡಗಿದ್ದು, ಕರಾಚಿಯಲ್ಲಿರುವ ಭೂ ಮಾಫಿಯಾಗೆ ಸಂಬಂಧಿಸಿದಂತೆ ಅವರ ಮೇಲೆ ಹತ್ಯೆ ಯತ್ನ ನಡೆದಿದೆ ಎನ್ನುವ ಸುದ್ದಿ ದಟ್ಟವಾಗಿದೆ. ಆದರೆ, ಮುಂಬೈ ಹಸೀನಾ ಪಾರ್ಕ್ ನಲ್ಲಿರುವ ದಾವೂದ್ ಕುಟುಂಬ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಗುಂಡಿನ ದಾಳಿ ನಡೆದಿರುವ ಸುಳ್ಳು ಎಂದು ಹೇಳುತ್ತಿದೆ.

ಆದರೆ, ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ದಾವೂದ್ ಇಬ್ರಾಹಿಂ ಮತ್ತು ಅತನ ಸಹೋದರ ಅನೀಸ್ ಮೇಲೆ 12 ಸುತ್ತು ಗುಂಡಿನ ದಾಳಿ ನಡೆಸಲಾಗಿದೆ. ಗುಂಡಿನ ದಾಳಿ ನಡೆಸಿದವರು ಯಾರೆಂಬುದೂ ಪತ್ತೆಯಾಗಿಲ್ಲ. ಆದರೆ, ಕರಾಚಿಯಲ್ಲಿರುವ ಸುಮಾರು 500 ಕೋಟಿ ರುಪಾಯಿಗಳ ಭೂಮಾಫಿಯಾಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಅನೀಸ್ ಕುತ್ತಿಗೆಗೆ ಗುಂಡು ತಲುಲಿದೆ. ಅದರೆ, ಅಲ್ಲೇ ಇದ್ದ ದಾವೂದ್ ಪಾರಾಗಿದ್ದಾನೆ. ಆನೀಸ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾವೂದ್ ಕುಟುಂಬ ಸದಸ್ಯರು ದಾಳಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಆರೋಪಿಸಿದ್ದಾರೆ. ದಾವೂದ್ ಕುಟುಂಬ ವಕೀಲ ಶ್ಯಾಮ್ ಕೇಶ್ವಾನಿ ಪ್ರತಿಕ್ರಿಯೆ ನೀಡಿದ್ದು, ಮಾಧ್ಯಮಗಳು ಮಾಡಿರುವ ಗುಂಡಿನ ದಾಳಿ ಪ್ರಕರಣದಿಂದ ದಾವೂದ್ ಕುಟುಂಬ ಆತಂಕಕ್ಕೆ ಒಳಗಾಗಿದೆ. ವಾಹಿನಿಗಳು ತಪ್ಪು ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದು, ಮಾಧ್ಯಮಗಳ ಅಂದುಕೊಂಡಂತೆ ಯಾವ ಘಟನೆಯೂ ನಡೆದಿಲ್ಲ ಎನ್ನುತ್ತಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X