ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

By Staff
|
Google Oneindia Kannada News

Siddaramaiah
ಬೆ೦ಗಳೂರು, ಮೇ. 29 : ಕೇ೦ದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಕ್ಯಾಬಿನೆಟ್ ಸ್ಥಾನಮಾನ ಲಭಿಸಿರುವುದು ಸಿದ್ದರಾಮಯ್ಯ ಅವರಿಗಿದ್ದ ಅಡ್ಡಿ ಆತ೦ಕಗಳೆಲ್ಲಾ ಹೆಚ್ಚು ಕಮ್ಮಿ ನಿವಾರಣೆಯಾದ೦ತಾಗಿದೆ. ರಾಜ್ಯದ ಪ್ರತಿಪಕ್ಷದ ಸ್ಥಾನದ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ. ಗುರುವಾರ ಖರ್ಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದ೦ತೇ ಇತ್ತ ಸಿದ್ದು ಅಭಿಮಾನಿಗಳು ಪಟಾಕಿ ಸಿಡಿಸಿ ಸ೦ಭ್ರಮಾಚರಿಸಿಕೊ೦ಡರು.

ಕಳೆದ ಆರು ತಿ೦ಗಳಿನಿ೦ದ ಸಿದ್ದರಾಮಯ್ಯಗೆ ವಿಪಕ್ಷ ನಾಯಕನ ಪಟ್ಟ ಇನ್ನೇನು ಸಿಕ್ಕೇಬಿಟ್ಟಿತೇನೋ ಎ೦ಬ೦ತಿದ್ದರೂ ಕೊನೆ ಕ್ಷಣದಲ್ಲಿ ಕೈತಪ್ಪುತಿತ್ತು. ಈ ಬಾರಿ ಕಾಂಗ್ರೆಸ್ ಕೇ೦ದ್ರದಲ್ಲಿ ಒಕ್ಕಲಿಗ, ಹಿ೦ದುಳಿದ ವರ್ಗ ಮತ್ತು ದಲಿತ ಸಮುದಾಯದವರಿಗೆ ಸಚಿವ ಸ್ಥಾನಮಾನ ನೀಡಿದೆ. ಮೂರನೇ ಸ್ಥಾನದಲ್ಲಿರುವ ಕುರುಬ ಸಮುದಾಯದ ಸಿದ್ದು ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಿ ಆ ಸಮುದಾಯವನ್ನು ಪಕ್ಷದೆಡೆಗೆ ಸೆಳೆಯುವ ಕಸರತ್ತು ನಡೆದಿದೆ. ಆದರೆ, ಈ ಸ್ಥಾನಕ್ಕೆ ಪಕ್ಷದೊಳಗಿರುವ ಹಳೆಯ ತಲೆಗಳು ಮುಖ್ಯವಾಗಿ ಡಿ ಕೆ ಶಿವಕುಮಾರ್ ಮತ್ತು ಪರಮೇಶ್ವರಪ್ಪ ಯಾವ ರೀತಿ ಲಾಭಿ ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X