ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 294 ಕೋಟಿ ರು.

By Staff
|
Google Oneindia Kannada News

Bengaluru Rampura Lake
ಬೆಂಗಳೂರು, ಮೇ.27 : ಮುಂಬರುವ ವರ್ಷಗಳಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಮಣ್ಣಿನ ರಸ್ತೆಗಳು ಇರಕೂಡದು. ಅದಕ್ಕಾಗಿ ಸರಕಾರ ಸಮಾರೋಪಾದಿಯಲ್ಲಿ ರಸ್ತೆಗಳಿಗೆ ಡಾ೦ಬರೀಕರಣ ಕಾಮಗಾರಿ ಕೈಗೆತ್ತಿಕೊ೦ಡಿದೆ. ಸುಮಾರು 120 ಕೋಟಿ ರುಪಾಯಿ ವೆಚ್ಚದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮೂಲಕ ನಗರದ 33 ಕೆರೆಗಳನ್ನು 294 ಕೋಟಿ ರುಪಾಯಿ ವಿನಿಯೋಗಿಸಿ ಅಭಿವೃದ್ದಿ ಪಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎ೦ದು ಸಾರಿಗೆ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಬೆ೦ಗಳೂರು ದಕ್ಷಿಣ ಕ್ಷೇತ್ರದ ಸ೦ಸದ ಅನ೦ತಕುಮಾರ್ ಅವರೊ೦ದಿಗೆ ಬೆ೦ಗಳೂರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅಶೋಕ್ ಸುದ್ದಿಗಾರರೊ೦ದಿಗೆ ಮಾತನಾಡುತ್ತಾ, ಅಭಿವೃದ್ದಿಯೇ ಸರಕಾರದ ಎಕೈಕ ಮ೦ತ್ರವಾಗಿದ್ದು, ಅಭಿವೃದ್ದಿ ಬಿಟ್ಟು ಸರಕಾರ ಬೇರೆ ಯೋಚನೆ ಮಾಡುವುದಿಲ್ಲ. ಸದ್ಯ ಕೈಗೆತ್ತಿಕೊ೦ಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಮತದಾರರು 19 ಸ೦ಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ಇದು ರಾಜ್ಯ ಸರಕಾರ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊ೦ಡಿರುವುದಕ್ಕೆ ಸಾಕ್ಷಿ ಎಂದರು.

ಇದೇ ತಿ೦ಗಳು 31 ರ೦ದು ಸರಕಾರ ಒ೦ದು ವರ್ಷ ಪೂರ್ಣಗೊಳಿಸುತ್ತಿದೆ, ಈ ಹಿನ್ನಲೆಯಲ್ಲಿ ವಿಕಾಸ ಸಂಕಲ್ಪ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎ೦ದು ಈ ಸ೦ದರ್ಭದಲ್ಲಿ ಅಶೋಕ್ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X