37378ಮನಮೋಹನ್ ಸಿಂಗ್ಶ್ರೀಸಾಮಾನ್ಯನಿಗೆ ನೋವಾಗದಂತೆ ಲಾಲೂ ಬಜೆಟ್/news/2009/02/13/my-budget-will-not-hurt-common-man-lalu.htmlನವದೆಹಲಿ, ಫೆ.13 : ಕೇಂದ್ರ ಸರ್ಕಾರದ ಕೊನೆಯ ರೈಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಇಂದು ಸಂಸತ್ತಿನಲ್ಲಿ ತಮ್ಮ ಕೊನೆಯ ಬಜೆಟ್ ಮಂಡಿಸಲಿದ್ದಾರೆ. ಇತ್ತೀಚೆಗೆ ಭಯೋತ್ಪಾದನೆ ಮೀತಿಮೀರಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಇನ್ನಷ್ಚು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಆರನೇ ಬಜೆಟ್ ಮಂಡಿಸುತ್ತಿರುವ ಲಾಲು 34622http://kannada.oneindia.com/img/2009/02/13-laloo1e.jpg37378ಮನಮೋಹನ್ ಸಿಂಗ್ಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg37378ಮನಮೋಹನ್ ಸಿಂಗ್ಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpg37378ಮನಮೋಹನ್ ಸಿಂಗ್ನಿಮ್ಮ ಸಲಹೆ ಬೇಕಿಲ್ಲ, ಮುಷರಫ್ ಗೆ ಮದಾನಿ ತಿರುಗೇಟು/news/2009/03/09/we-donot-need-musharraf-advice-says-madani.htmlನವದೆಹಲಿ, ಮಾ. 9 : ಭಾರತದಲ್ಲಿರುವ ಮುಸ್ಲಿಂ ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವಷ್ಟು ಶಕ್ತರಿದ್ದಾರೆ. ಇಲ್ಲಿನ ಮುಸ್ಲಿಂರನ್ನು ಒಡೆಯಲು ಪ್ರಯತ್ನಿಸಬೇಡಿ. ನಿಮ್ಮ ಪುಕ್ಕಟೆ ಸಲಹೆ ನಮಗೆ ಬೇಕಿಲ್ಲ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಜಮಾತ್-ಇ-ಉಲೇಮಾ-ಇ-ಹಿಂದ್ ನ ಮುಖಂಡ ಮೆಹಮೂದ್ ಮದಾನಿ ಅವರು ಮುಷರಫ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನವದೆಹಲಿಗೆ ಭೇಟಿ ನೀಡಿ ಸಂವಾದವೊಂದರಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ 35098http://kannada.oneindia.com/img/2009/03/09-maulana-mahmood-madani1.jpg37378ಮನಮೋಹನ್ ಸಿಂಗ್ಮನಮೋಹನ್ ಸಿಂಗ್ ಮೇಲೆ ಭಾರಿ ಬೆಟ್ಟಿಂಗ್/news/2009/03/14/bookies-back-manmohan-for-another-term.htmlಮುಂಬೈ, ಮಾ.14: ಲೋಕಸಭೆ ಚುನಾವಣೆಗಳು ಬಂತೆಂದರೆ ಸಾಕು ದೇಶದೆಲ್ಲೆಡೆ ಹಬ್ಬದ ಸಂಭ್ರಮ ಸಡಗರ ನೆಲೆಸುತ್ತದೆ. ಚುನಾವಣೆಯಲ್ಲಿ ಕಪ್ಪುಹಣದ ಚಲಾವಣೆ, ಪ್ರಸ್ತುತ ಆರ್ಥಿಕ ಹಿಂಜರಿತದಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ. ಇನ್ನು ಪ್ರಚಾರಕ್ಕಾಗಿ, ಬ್ಯಾನರ್, ಬಂಟಿಂಗ್ ಗಳಿಗೆ, ಪಕ್ಷದ ಕಾರ್ಯಕರ್ತರಿಗೆ, ವಾಹನಗಳ ಬಾಡಿಗೆ... ಹೀಗೆ ಪ್ರತಿ ಹಂತದಲ್ಲೂ ಝಣ ಝಣ ಎಂದು ಕುರುಡು ಕಾಂಚಾಣ ಕುಣಿಯಲಿದೆ. 35215http://kannada.oneindia.com/img/2009/03/14-manmohan.jpg148535ಪ್ರತಿಭಾ ಪಾಟೀಲ್ಗುಲ್ಬರ್ಗಾದ ಬುದ್ಧ ವಿಹಾರ ಲೋಕಾರ್ಪಣೆ/news/2009/01/07/president-patil-inaugurates-buddha-vihar-gulbarga.htmlಗುಲ್ಬರ್ಗಾ, ಜ. 7 : ಗುಲ್ಬರ್ಗಾದ ಐತಿಹಾಸಿಕ ಬುದ್ಧ ವಿಹಾರವನ್ನು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಇಂದು ವಿದ್ಯಕ್ತ್ ವಾಗಿ ವಿದ್ಯುನ್ಮಾನ ಗುಂಡಿ ಒತ್ತುವ ಮೂಲಕ ಲೋಕಾರ್ಪಣೆ ಮಾಡಿದರು. ಸರಿ ಸುಮಾರು 75 ಎಕರೆ ಪ್ರದೇಶದಲ್ಲಿ 32,450 ಚದರ ಅಡಿ ವ್ಯಾಪ್ತಿಯಲ್ಲಿ ತೆಲೆ ಎತ್ತಿರುವ ಬುದ್ಧ ವಿಹಾರ ದೇಶ, ವಿದೇಶಿಗರ ಕಣ್ಮನ ಸೆಳೆಯುತ್ತಿದೆ. ಮಂದಿರ ನಿರ್ಮಾಣದಲ್ಲಿ ಅಜಂತಾ, 33935http://kannada.oneindia.com/img/2009/01/07-buddha-vihar-gulbarga.jpg148535ಪ್ರತಿಭಾ ಪಾಟೀಲ್ಮಹಿಳಾ ಸಬಲೀಕರಣಕ್ಕೆ ರಾಷ್ಟ್ರಪತಿ ಕರೆ/news/2009/05/10/president-stresses-importance-of-educating-women.htmlಮೈಸೂರು, ಮೇ. 10 : ಮಹಿಳೆಗೆ ಶಿಕ್ಷಣ ಕಡ್ಡಾಯಗೊಳಿಸುವ ಮೂಲಕ ಮಹಿಳಾ ಸಬಲೀಕರಣ ಸಾಧಿಸಬೇಕಾಗಿದೆ ಎಂದು ಭಾರತದ ರಾಷ್ಟ್ರಪತಿಗಳಾದ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಹೇಳಿದರು. ಅವರು ಶನಿವಾರ ಮೈಸೂರು ಜಿಲ್ಲೆಯ ಸುತ್ತೂರು ಕ್ಷೇತ್ರದಲ್ಲಿ ಬಾಲಕಿಯರ ವಿದ್ಯಾರ್ಥಿನಿಲಯ, ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನ ರಜತ ಮಹೋತ್ಸವ ಹಾಗೂ ಸಮರ್ಥ ಗ್ರಾಮೀಣ ಆರೋಗ್ಯಾಭಿವೃದ್ಧಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ 36509http://kannada.oneindia.com/img/2009/05/10-pratibha-patil-suttur.jpg148535ಪ್ರತಿಭಾ ಪಾಟೀಲ್ಮೈಸೂರು ಅರಮನೆಗೆ ರಾಷ್ಟ್ರಪತಿ ಭೇಟಿ/news/2009/05/10/president-patil-impressed-by-mysore-palace.htmlಮೈಸೂರು, ಮೇ. 10 : ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಇಂದು ವಿಶ್ವವಿಖ್ಯಾತ ಮೈಸೂರು ಅರಮನೆಗೆ ಭೇಟಿ ನೀಡಿ, ಅದರ ಸಾಂಸ್ಕೃತಿಕ ವೈಭವದ ಬಗ್ಗೆ ಹಾಗೂ ಅರಮನೆ ನಿರ್ವಹಿಸಿರುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರು ಅರಮನೆಯ ಬೊಂಬೆ ತೊಟ್ಟಿ , ಚಿನ್ನದ ಅಂಬಾರಿ, ದಸರಾ ಮೆರವಣಿಗೆಯ ಚಿತ್ರಗಳು, ಕಲ್ಯಾಣ ಮಂಟಪ, ರಾಜ-ಮಹಾರಾಜರ ಛಾಯಾಚಿತ್ರಗಳು, ಶಸ್ತ್ರಾಗಾರಗಳನ್ನು 36510http://kannada.oneindia.com/img/2009/05/10-pratibha-patil-mysore1.jpg148535ಪ್ರತಿಭಾ ಪಾಟೀಲ್ರಾಷ್ಟ್ರಪತಿಗಳ ಭೇಟಿ ರದ್ದುಗೊಳಿಸಿದ ಮನಮೋಹನ್ /news/2009/05/21/allies-want-more-berths-pm-prez-meet-cancelled.htmlನವದೆಹಲಿ, ಮೇ. 21 : ಸರಕಾರ ರಚನೆ ಕುರಿತಂತೆ ನಿಯೋಜಿತ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭೇಟಿ ಮಾಡಿ ನಡೆಸಬೇಕಿದ್ದ ಚರ್ಚೆಯನ್ನು ರದ್ದುಗೊಳಿಸಿದ್ದಾರೆ. ಸಂಪುಟ ರಚನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಸಂಪುಟದಲ್ಲಿ ಹೆಚ್ಚು ಸಚಿವ ಸ್ಥಾನಗಳು ಬೇಕು ಎಂದು ಪಟ್ಟುಹಿಡಿದಿದ್ದಾರೆ. ಅಂಗ ಪಕ್ಷಗಳಿಗೆ ಸ್ಥಾನ ಹಂಚಿಕೆ ವಿಷಯ 36799http://kannada.oneindia.com/img/2009/05/21-m-m-singh1.jpg148535ಪ್ರತಿಭಾ ಪಾಟೀಲ್ಇಂದು ರಾಜೀವ್ ಗಾಂಧಿ 18ನೇ ಪುಣ್ಯತಿಥಿ /news/2009/05/21/nation-pays-homage-to-rajiv-gandhi.htmlನವದೆಹಲಿ, ಮೇ. 21 : 18 ವರ್ಷಗಳ ( 21.05.1991) ಹಿಂದೆ ತಮಿಳುನಾಡಿನ ಶ್ರೀಪೆರಂಬೂದೂರು ನಲ್ಲಿ ಎಲ್ ಟಿಟಿಇ ಆತ್ಮಹತ್ಯಾ ದಾಳಿಗೆ ಬಲಿಯಾಗಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 18ನೇ ಪುಣ್ಯತಿಥಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಜೀವ್ ಗಾಂಧಿ ಪತ್ನಿ ಯುಪಿಎ 36800http://kannada.oneindia.com/img/2009/05/21-rajiv-gandhi1e.jpg37379ಪ್ರಣಬ್ ಮುಖರ್ಜಿಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg37379ಪ್ರಣಬ್ ಮುಖರ್ಜಿಇದು ನನ್ನ ಕೊನೆಯ ಚುನಾವಣೆ, ಪ್ರಣವ್ ಮುಖರ್ಜಿ /news/2009/03/20/could-be-my-last-election-pranab-mukherjee.htmlಜಂಗೀಪುರ್ (ಪಶ್ಚಿಮ ಬಂಗಾಲ), ಮಾ. 20 : ಇದು ನನ್ನ ಕೊನೆಯ ಚುನಾವಣೆ ಆದರೂ ಆಗಬಹುದು, ಇದೊಂದು ಸಾರಿ ನನಗೆ ಆಶೀರ್ವಾದ ಮಾಡಿ, ಕಳೆದ 37-38 ವರ್ಷದಿಂದ ನನ್ನ ಪೋಷಿಸಿ ಬೆಳೆಸಿದ ನೀವುಗಳು, ಈ ಚುನಾವಣೆಯಲ್ಲಿ ಕೂಡಾ ನನಗೆ ಮತ ನೀಡಿ ಎಂದು ನೆರೆದಿದ್ದ ಜನಸ್ತೋಮದ ಎದುರು ಕಾಂಗ್ರೆಸ್ ನ ಶಕ್ತಿಯುತ ವ್ಯಕ್ತಿ ಎಂದೇ ಹೇಳಲಾಗುತ್ತಿರುವ ಕೇಂದ್ರದ 35377http://kannada.oneindia.com/img/2009/03/20-pranab-mukherjee1.jpg37379ಪ್ರಣಬ್ ಮುಖರ್ಜಿಮುಂಬೈ ಸ್ಫೋಟ : ಕಸಬ್ ವಿಚಾರಣೆ ಇಂದು /news/2009/04/15/mumbai-terror-attacks-kasavs-mom-to-visit-india.htmlಮುಂಬೈ, ಏ. 15 : ಕಳೆದ ವರ್ಷ ನವೆಂಬರ್ 26ರಂದು ನಡೆದ ಮುಂಬೈ ಹತ್ಯಾಕಾಂಡದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ವಿಚಾರಣೆ ಇಂದಿನಿಂದ ಪ್ರಾರಂಭವಾಗಲಿದೆ. ಭಾರೀ ಬಿಗಿ ಭದ್ರತೆಯಲ್ಲಿ ಇಂದು ಆತನನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಅರ್ಥರ್ ಜೈಲಿನಿಂದ ಕಸಬ್ ನನ್ನು ನ್ಯಾಯಾಲಯಕ್ಕೆ ಕರೆತರುವಾಗ ನ್ಯಾಯಾಲಯದ ಸುತ್ತ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚಿನ 35964http://kannada.oneindia.com/img/2009/04/15-kasab2.jpg37379ಪ್ರಣಬ್ ಮುಖರ್ಜಿ4ನೇ ರಂಗ ರಚನೆಗೆ ಪ್ರಣಬ್ ಅಸಮಾಧಾನ/news/2009/04/16/fourth-front-will-divide-secular-votes-pranab.htmlಜಂಹೀಪುರ್, ಏ. 16 : ಸಮಾಜವಾದಿ ಪಕ್ಷ, ಲೋಕಜನಶಕ್ತಿ ಪಕ್ಷ ಹಾಗೂ ರಾಷ್ಟ್ರೀಯ ಜನತಾ ದಳ ಒಂದುಗೂಡಿ ರಚಿಸಿಕೊಂಡಿರುವ ನಾಲ್ಕನೇ ರಂಗದ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ನಾಲ್ಕನೇ ರಂಗ ರಚನೆಯಿಂದ ಜಾತ್ಯಾತೀತ ಮತಗಳು ಸಿಡಿದು ಹೋಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಗುರುವಾರ ತಾವು ಸ್ಪರ್ಧಿಸಿರುವ ಪಶ್ಚಿಮ ಬಂಗಾಲದ ಜಂಗೀಪುರ್ 35993http://kannada.oneindia.com/img/2009/04/16-pranab-mukherjee1.jpg37379ಪ್ರಣಬ್ ಮುಖರ್ಜಿಲಾಟೀನು ಕೈಬಿಟ್ಟ ಕಾಂಗ್ರೆಸ್, ಸಚಿವ ಸ್ಥಾನವಿಲ್ಲ/news/2009/05/18/no-lalu-in-cabinet-implies-pranab.htmlನವದೆಹಲಿ, ಮೇ. 18 : 2004ರ ಫಲಿತಾಂಶಕ್ಕೂ 2009ರ ಫಲಿತಾಂಶಕ್ಕೂ ತುಂಬಾ ವ್ಯತ್ಯಾಸವಿದೆ. ಅಂದಿನ ರಾಜಕೀಯ ಚಿತ್ರಣವೇ ಬೇರೆ. ಇಂದಿನ ರಾಜಕೀಯ ಪರಿಸ್ಥಿತಿಯೇ ಬೇರೆ. ಯುಪಿಎ ಸರಕಾರದ ಸಾಧನೆಯಿಂದಾಗಿ ಕಾಂಗ್ರೆಸ್ ಪಕ್ಷ 204 ಸ್ಥಾನಗಳನ್ನು ಪಡೆದು ಅತೀ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ ಎಂದ ಕಾಂಗ್ರೆಸ್ ಹಿರಿಯ ಮುಖಂಡ ಪ್ರಣಬ್ ಮುಖರ್ಜಿ, ಲಾಲು ಪ್ರಸಾದ್ ಯಾದವ್ ಅವರನ್ನು ಸಚಿವ ಸಂಪುಟದಲ್ಲಿ 36722http://kannada.oneindia.com/img/2009/05/18-lalu4.jpgnews"> ನೂತನ ಪ್ರಧಾನಿಯಾಗಿ ಮನಮೋಹನ್ ಸಿಂಗ್ | Manmohan Singh | India | Prime Minister | Pratibha Patil | Pranab Mukherjee | ನೂತನ ಪ್ರಧಾನಿಯಾಗಿ ಮನಮೋಹನ್ ಸಿಂಗ್ - Kannada Oneindia

ನೂತನ ಪ್ರಧಾನಿಯಾಗಿ ಮನಮೋಹನ್ ಸಿಂಗ್

Manmohan Singh sworns-in as Prime Minister of India
ನವದೆಹಲಿ, ಮೇ. 22 : ಜವಾಹರಲಾಲ್ ನೆಹರು ನಂತರ ಸತತ ಎರಡನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ ಮನಮೋಹನ್ ಸಿಂಗ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಅಧಿಕಾರದ ಚುಕ್ಕಾಣಿ ಹಿಡಿದರು.

ರಾಷ್ಟ್ರಪತಿ ಭವನದ ಅಶೋಕ ಹಾಲ್ ನಲ್ಲಿ ನಡೆದ ವರ್ಣರಂಜಿತ ಐತಿಹಾಸಿಕ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಧಿಕಾರ ಗೌಪ್ಯತೆ ಹಾಗೂ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ದೇಶದ ಘಟಾನುಘಟಿ ಗಣ್ಯರ ಸಮ್ಮಖದಲ್ಲಿ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಸೇರಿ ಸಚಿವ ಸಂಪುಟದ 19 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಣಬ್ ಮುಖರ್ಜಿ, ಪಿ ಚಿದಂಬರಂ, ಮಮತಾ ಬ್ಯಾನರ್ಜಿ, ಎಸ್ ಎಂ ಕೃಷ್ಣ, ಶರದ್ ಪವಾರ್, ವೀರಪ್ಪ ಮೊಯ್ಲಿ, ಕಮಲನಾಥ್, ಕಪಿಲ್ ಸಿಬಲ್, ಸುಶೀಲ್ ಕುಮಾರ್ ಶಿಂಧೆ, ವಯಲಾರ್ ರವಿ, ಸಿಪಿ ಜೋಶಿ, ಜೈಪಾಲ್ ರೆಡ್ಡಿ, ಮೀರಾ ನಾಯರ್, ಗುಲಾಮ್ ನಬಿ ಅಜಾದ್, ಆನಂದ ಶರ್ಮಾ, ಅಂಬಿಕಾ ಸೋನಿ, ಮುರಳಿ ದೇವೋರಾ, ಮತ್ತು ಬಿ ಕೆ ಹಂಡಿಕ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿಯಲ್ಲಿದ್ದಾರೆ.

ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಐಕೆ ಗುಜ್ರಾಲ್, ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಸಿಪಿಐ(ಎಂ) ನಾಯಕ ಪ್ರಕಾಶ್ ಕಾರಟ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್, ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಶಿವರಾಜ್ ಪಾಟೀಲ್, ಕರಣ್ ಸಿಂಗ್, ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಶೀಲಾ ದಿಕ್ಷೀತ್, ರೆಹಮಾನ್ ಖಾನ್ ಪಾಲ್ಗೊಂಡಿದ್ದರು. ಮನಮೋಹನ್ ಸಿಂಗ್ ಅವರ ಕುಟಂಬ ವರ್ಗ ಕೊಲ್ಕತ್ತಾ, ಅಮೃತಸರ ಮತ್ತು ಗೌಹಾತಿಯಿಂದ ಆಗಮಿಸಿ ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದರು.

ಮನಮೋಹನ್ ಸಿಂಗ್ ಸಾಗಿ ಬಂದ ದಾರಿ
76ರ ಹರೆಯ ಮನಮೋಹನ್ ಸಿಂಗ್ ಕೊನೆಗೂ ದೇಶದ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಿಂಗ್ ಹೇಳಿಕೊಂಡಂತೆ ಆಕಸ್ಮಿಕವಾಗಿ ರಾಜಕಾರಣಿಯಾದವರು. ದೇಶ ಮುನ್ನಡೆಸುವ ಅವಕಾಶ ದೊರೆತದ್ದು ಬಯಸದೆ ಬಂದ ಭಾಗ್ಯ. ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ ಅವರಿಂದ ದುರ್ಬಲ ಪ್ರಧಾನಿ ಎಂಬ ವೈಯಕ್ತಿಕ ನಿಂದನೆ, ಬಿಜೆಪಿ ಸ್ಟಾರ್ ಕ್ಯಾಂಪೇನರ್ ನರೇಂದ್ರ ಮೋದಿ ಅವರ ನಿಂದನೆಯ ವಾಗ್ಬಾಣಗಳು ಸಿಂಗ್ ಅವರನ್ನು ಕೆಲ ದಿನಗಳ ಮಟ್ಟಿಗೆ ನಿದ್ದೆಗೆಡಿಸಿತ್ತು ಎನ್ನುವುದು ಸುಳ್ಳಲ್ಲ.

ಸಿಂಗ್ ದೇಶದ ಕಂಡ ಪ್ರಕಾಂಡ ಅರ್ಥಶಾಸ್ತ್ರಜ್ಞ. ಕೇಂಬ್ರಿಡ್ಜ್ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ವಿದ್ಯಾಭ್ಯಾಸ. ಭಾರತದ ಆರ್ಥಿಕ ಸಲಹೆಗಾರರಾಗಿ ನೇಮಕ. ಪಿವಿ ನರಸಿಂಹರಾವ್ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿ ಕಾರ್ಯನಿರ್ವಹಣೆ. ಕಾಂಗ್ರೆಸ್ ಕಾರ್ಯಾಕಾರಿ ಸಮಿತಿಯಲ್ಲಿ ಸದಸ್ಯತ್ವ ಸ್ಥಾನ. 1998ರಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ. 2004ರಲ್ಲಿ ಯುಪಿಎ ಮೈತ್ರಿಕೂಟದ ಸರಕಾರದಲ್ಲಿ ಪ್ರಧಾನಮಂತ್ರಿಯಾಗಿ ನೇಮಕ. ಕಳೆದ ಐದು ವರ್ಷಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಣೆ. ರೈತರ ಸಾಲಮನ್ನಾ, ಅಮೆರಿಕದೊಂದಿಗಿನ ನಾಗರಿಕ ಪರಮಾಣು ಒಪ್ಪಂದ. ಉದ್ಯೋಗ ಖಾತ್ರಿ ಯೋಜನೆಗಳು ಸಿಂಗ್ ನೇತೃತ್ವದ ಸರಕಾರದ ಸಾಧನೆಗಳಾಗಿವೆ. ಇದೀಗ ಮತ್ತೆ ಇನ್ನೈದು ವರ್ಷಗಳ ಕಾಲ ದೇಶದ ಮುನ್ನೆಡೆಸುವ ಅವಕಾಶ ಮನಮೋಹನ್ ಸಿಂಗ್ ಅವರಿಗೆ ದೊರೆತಿದ್ದು, ಉತ್ತಮ ಆಡಳಿತ ನೀಡುವೆ ಎಂಬ ಭರವಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+