ಸಂಸದ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ?

ಕೇಂದ್ರದಲ್ಲಿ ಸಚಿವ ಸ್ಥಾನ ಸಿಗದೇ ಹೋದಲ್ಲಿ ವಿಧಾನಸಭೆ ಸದಸ್ಯತ್ವದಲ್ಲಿಯೇ ಮುಂದುವರೆಯುವುದಾಗಿ ಕುಮಾರಸ್ವಾಮಿ ಅವರು ತಮ್ಮ ಬಳಿ ಹೇಳಿಕೊಂಡಿರುವುದೇ ಈ ಪ್ರಶ್ನೆ ಏಳಲು ಕಾರಣವಾಗಿದೆ. ಕಳೆದ ನಾಲ್ಕು ದಿನಗಳಿಂದ ನವದೆಹಲಿಯಲ್ಲಿ ಬೀಡುಬಿಟ್ಟಿರುವ ಕುಮಾರಸ್ವಾಮಿ ಸಚಿವ ಸ್ಥಾನಕ್ಕೆ ಭಾರಿ ಹರಸಾಹಸ ಮಾಡುತ್ತಿದ್ದಾರೆ. ಆದರೆ, ಸಂಕಷ್ಟದಲ್ಲಿದ್ದ ಮಿತ್ರ ಪಕ್ಷಗಳನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಉಳಿದಂತೆ ಬೇಷರತ್ ಬೆಂಬಲ ಘೋಷಿಸಿ ಪತ್ರ ನೀಡಿರುವ ಯಾವುದೇ ಪಕ್ಷಗಳಿಗೂ ಸಂಪುಟದಲ್ಲಿ ಅವಕಾಶ ಕಲ್ಪಿಸುತ್ತಿಲ್ಲ. ಇದರ ಸಾಲಿಗೆ ಜೆಡಿಎಸ್ ಸಹ ಸೇರುತ್ತದೆ.
ಕುಮಾರಸ್ವಾಮಿ ಭೇಟಿ ಮಾಡಿದ ಕಾಂಗ್ರೆಸ್ ನಾಯಕರೆಲ್ಲರೂ ಇದೇ ಅಂಶವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಆರು ಸಂಸದರಿಗೆ ಒಂದು ಸಚಿವ ಸ್ಥಾನ ಎಂಬ ನಿಲುವಿಗೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ. ಆದರೆ, ಜೆಡಿಎಸ್ ಮೂರು ಸ್ಥಾನಗಳು ಇರುವುದರಿಂದ ಸಚಿವ ಸ್ಥಾನ ಬಹುತೇಕ ಕೈತಪ್ಪಿದಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications