ವೇಲುಪಿಲೈ ಪ್ರಭಾಕರನ್ ಸತ್ತಿಲ್ಲ, ಎಲ್ ಟಿಟಿಇ

Prabhakaran
ಕೊಲಂಬೋ, ಮೇ. 19 : ಸೋಮವಾರವಷ್ಟೆ ಶ್ರೀಲಂಕಾ ಸರಕಾರ ಎಲ್ ಟಿಟಿಇ ಮುಖಂಡ ಉಗ್ರ ವಿ ಪ್ರಭಾಕರನ್ ಅವರನ್ನು ಕೊಂದು ಮುಗಿಸಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಇಂದು ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂದು ಎಲ್ ಟಿಟಿಇ ಬೆಂಬಲಿತ ತಮಿಳು ವೆಬ್ ಸೈಟ್ ತಮಿಳ್ ನೆಟ್.ಕಾಂ ವರದಿ ಮಾಡಿದೆ.

ಶ್ರೀಲಂಕಾ ಸರಕಾರ ತಮಿಳರ ಮೇಲೆ ಸಾರಿರುವ ಯುದ್ಧದಲ್ಲಿ ಲಂಕಾತಮಿಳರ ಆರಾಧ್ಯದೈವ ವೇಲುಪಿಲೈ ಪ್ರಭಾಕರನ್ ಮೃತಪಟ್ಟಿಲ್ಲ, ಅವರು ಜೀವಂತವಾಗಿ ಸುರಕ್ಷಿತವಾಗಿ ಇದ್ದಾರೆ ಎಂದು ಎಲ್ ಟಿಟಇ ಅಂತಾರಾಷ್ಟ್ರೀಯ ವಕ್ತಾರ ಎಸ್ ಪತಮನತನ್ ತಿಳಿಸಿದ್ದಾರೆ ಎಂದು ವೆಬ್ ಸೈಟ್ ನಲ್ಲಿ ಪ್ರಕಟಿವಾಗಿದೆ. ಶ್ರೀಲಂಕಾ ಸರಕಾರ ಪ್ರಭಾಕರನ್ ಸತ್ತಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದೆ ಎಂದು ಅಸಮಾಧಾನಗೊಂಡಿರುವ ಅವರು, ಈ ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕುವುದಾಗಿ ಹೇಳಿದ್ದಾರೆ.

ಅಮಾಯಕ ತಮಿಳರ ಮೇಲೆ ಶ್ರೀಲಂಕಾ ಸರಕಾರ ಯುದ್ಧ ನಡೆಸುತ್ತಿದೆ. ಲಂಕಾ ಸರಕಾರದ ದಾಳಿಯಿಂದಾಗಿ ಲಕ್ಷಾಂತರ ಜನ ತಮಿಳರು ಸಾವಿಗೀಡಾಗಿದ್ದಾರೆ. ಕೋಟ್ಯಂತರ ಜನ ವಸತಿಹೀನರಾಗಿದ್ದಾರೆ. ಶ್ರೀಲಂಕಾ ಸರಕಾರ ಮಾವವ ಹಕ್ಕುಗಳ ಉಲ್ಲಂಘನೆ ಕೃತ್ಯ ಎಸಗುತ್ತಿದೆ ಎಂದು ಎಲ್ ಟಿಟಿಇ ವಕ್ತಾರ ತಿಳಿಸಿದ್ದಾರೆ ಎಂದು ವೆಬ್ ಸೈಟ್ ಪ್ರಕಟಿಸಿದೆ.

(ಏಜನ್ಸೀಸ್)

ಪೂರಕ ಓದಿಗೆ: ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+