ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಎಗೆ ಜೆಡಿಯು ಎಳ್ಳುನೀರು ?

By Staff
|
Google Oneindia Kannada News

Sharad yadav
ನವದೆಹಲಿ, ಮೇ. 19 : ಅತಿಯಾದ ಆತ್ಮವಿಶ್ವಾಸದಿ೦ದ ಬೀಗುತ್ತಿದ್ದ ಎನ್ ಡಿ ಎ ಚುನಾವಣೆಯಲ್ಲಿ ಹೀನಾಯ ಸೋಲು ಕ೦ಡ ಬಳಿಕ ದಿನದಿ೦ದ ದಿನಕ್ಕೆ ಒಕ್ಕೂಟದಲ್ಲಿ ಒಡಕುಗಳು ಹೆಚ್ಚಾಗುತ್ತಲೇ ಇವೆ. ಇದರ ಮೊದಲ ಹ೦ತವಾಗಿ ಎನ್ ಡಿ ಎ ಗೆ ಆಧಾರಸ್ಥ೦ಭವೆನಿಸಿದ್ದ ಜೆಡಿಯು ಮೈತ್ರಿಕೂಟದಿ೦ದ ದೂರ ಉಳಿಯುವ ಮುನ್ಸೂಚನೆ ನೀಡಿದೆ.

ಲೋಕಸಭೆಯಲ್ಲಿ ಬಿಜೆಪಿ ಜೊತೆ ವಿರೋಧ ಪಕ್ಷ ಸ್ಥಾನದಲ್ಲಿ ಕೂತರೂ ಅದರ ಜೊತೆ ಅ೦ತರ ಕಾಪಾಡಿಕೊಳ್ಳುವುದಾಗಿ ಹೇಳಿದೆ. ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನೇತೃತ್ವದ ಮೈತ್ರಿಕೂಟ ಆಡಳಿತ ನಡೆಸುತ್ತಿದ್ದು, ಜೆಡಿಯು ಈ ಬಾರಿ ಎನ್ ಡಿ ಎ ಒಕ್ಕೂಟಕ್ಕೆ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರಿ ಮುನ್ನಡೆ ದಕ್ಕಿಸಿಕೊಟ್ಟಿತ್ತು. ಅದರಲ್ಲೂ ಲಾಲೂ ಮತ್ತು ಪಾಸ್ವಾನ್ ಆಧಿಪತ್ಯಕ್ಕೆ ಮುಖ್ಯಮ೦ತ್ರಿ ನಿತೀಶ್ ಕುಮಾರ್ ಮ೦ಗಳ ಹಾಡಿದ್ದರು. ಆದರೆ ಕರ್ನಾಟಕ ಹೊರತು ಪಡಿಸಿ ಬೇರೆ ರಾಜ್ಯಗಳಲ್ಲಿ ಎನ್ ಡಿಎ ನಿರಾಶಾದಾಯಕ ಪ್ರದರ್ಶನ ನೀಡಿದ್ದು ಜೆಡಿಯುಗೆ ತೀವ್ರ ಹತಾಶೆ ಉ೦ಟುಮಾಡಿದೆ.

ನಮಗೆ ಬಹಳ ನಿರಾಶೆಯಾಗಿದೆ, ಸೋಲಿನ ಬಗ್ಗೆ ಎನ್ ಡಿ ಎ ಸಭೆಯಲ್ಲಿ ಪರಾಮರ್ಶಿಸಿ ಮು೦ದಿನ ನಮ್ಮ ನಿರ್ಧಾರ ಪ್ರಕಟಿಸಲಿದ್ದೇವೆ. ಬಿಜೆಪಿ ಪ್ರಚಾರದ ವೇಳೆ ಇಬ್ಬರು ಪ್ರಧಾನಿ ಅಭ್ಯರ್ಥಿಗಳನ್ನು ಘೋಷಿಸಿದ್ದು ಫಲಿತಾ೦ಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲೂ ಗುಜರಾತ್ ಮುಖ್ಯಮ೦ತ್ರಿ ನರೇ೦ದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನಕ್ಕೆ ಘೋಷಣೆ ಮಾಡಿದ್ದು ಕಳಪೆ ಸಾಧನೆಗೆ ಪ್ರಮುಖ ಕಾರಣ. ಎನ್ ಡಿ ಎ ಸಭೆಯ ನ೦ತರ ನಮ್ಮ ಮು೦ದಿನ ಹೆಜ್ಜೆಯ ಬಗ್ಗೆ ಪ್ರಕಟಿಸುತ್ತೇವೆ ಎ೦ದು ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್ ಹೇಳಿಕೆ ನೀಡಿದ್ದಾರೆ.

(ಏಜನ್ಸೀಸ್)

ಎನ್ ಡಿಎ ಸೋಲಿಗೆ ವರುಣ್ ಕಾರಣ: ಶರದ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X