ತಿರುಪತಿಯಲ್ಲಿ ಚಿರಂಜೀವಿ ಮುನ್ನಡೆ
ಹೈದರಾಬಾದ್, ಮೇ.16: ಪ್ರಜಾರಾಜ್ಯ ಪಕ್ಷದ ಅಧ್ಯಕ್ಷ ಚಿರಂಜೀವಿ ತಿರುಪತಿಯಲ್ಲಿ ಮುನ್ನಡೆ ಸಾಧಿಸಿದ್ದು ಮೊದಲ ಸುತ್ತಿನ ಮತ ಎಣಿಕೆ ಕಾರ್ಯದಲ್ಲಿ 600 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪಾಲಕೊಲ್ಲು ಕ್ಷೇತ್ರಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಖಮ್ಮಂ ನಲ್ಲಿ ರೇಣುಕಾ ಚೌದರಿ(ಕಾಂಗ್ರೆಸ್), ಚೇವೆಲ್ಲಾದಲ್ಲಿ ಜೈ ಪಾಲ್ ರೆಡ್ಡಿ (ಕಾಂಗ್ರೆಸ್) ಮುನ್ನಡೆ ಸಾಧಿಸಿದ್ದಾರೆ. ಶ್ರೀಕಾಕುಳಂ ಲೋಕಸಭಾ ಕ್ಷೇತ್ರದಲ್ಲಿ ಎರ್ರನ್ನಾಯುಡು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪಾಣಿ ಮುನ್ನಡೆ ಸಾಧಿಸಿದ್ದಾರೆ.
ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 132 ಕ್ಷೇತ್ರಗಳಲ್ಲಿ, ಮಹಾಕೂಟಮಿ 99, ಟಿಡಿಪಿ 84, ಟಿಆರ್ ಎಸ್ 15, ಪ್ರಜಾರಾಜ್ಯಂ 21, ಬಿಜೆಪಿ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗೆಯೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 10, ಮಹಾಕೂಟಮಿ 6, ಪ್ರಜಾರಾಜ್ಯಂ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
(ಏಜೆನ್ಸೀಸ್)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications