ಮತಎಣಿಕೆ ಆರಂಭ ನಾಯಕರ ಭವಿಷ್ಯನಿರ್ಧಾರ
ಬೆಂಗಳೂರು, ಮೇ. 16 : ಮತಏಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಘಟಾನುಘಟಿ ನಾಯಕರ ಭವಿಷ್ಯ ಇಂದು ಅಧಿಕೃತವಾಗಿ ಹೊರಬೀಳಲಿದೆ. ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಪ್ರತಿಷ್ಠೆ ಪ್ರಶ್ನೆಯಾಗಿದ್ದರೆ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಬಿಜೆಪಿಯನ್ನು ಸೋಲಿಸಬೇಕು ಎನ್ನುವ ತವಕದಲ್ಲಿದ್ದಾರೆ. ರಾಜ್ಯ 28 ಲೋಕಸಭೆ ಮತಕ್ಷೇತ್ರಗಳು ಸೇರಿ ದೇಶದ ಎಲ್ಲೆಡೆ ಮತಎಣಿಕೆ ಕಾರ್ಯ ನಿಧಾನವಾಗಿ ಶುರುವಾಗಿದೆ.
ಮತಎಣಿಕೆ ಕೇಂದ್ರಕ್ಕೆ ವಿವಿಧ ಪಕ್ಷಗಳ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಗೆಲ್ಲುವ ಕುದುರೆ ಎನಿಸಿರುವ ನಾಯಕರ ಕಾರ್ಯಕರ್ತರು, ಅಭಿಮಾನಿಗಳು ಬೆಳಗ್ಗೆ 7 ಗಂಟೆಗೆ ಮತಕೇಂದ್ರದಲ್ಲಿ ಮುಂದೆ ನಿಂತಿರುವುದು ಕಂಡು ಬಂದಿದೆ. ತಮ್ಮನೆಚ್ಚಿನ ನಾಯಕರು ಗೆಲ್ಲಲಿ ಎಂದು ರಾಜ್ಯ ವಿವಿಧ ಅನೇಕ ಪೂಜೆ ಪುನಸ್ಕಾರಗಳು ಭರ್ಜರಿಯಾಗಿ ನಡೆಯತೊಡಗಿವೆ. ಶಿವಮೊಗ್ಗ, ಬೆಳಗಾವಿ, ದಾವಣಗೆರೆ ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
ಲೋಕಸಭೆ ಚುನಾವಣೆ ಗೆದ್ದವರು ಬಿದ್ದವರು












Click it and Unblock the Notifications