ಅಮರ್ ಸಿಂಗ್-ರಾಜ್ ನಾಥ್ ಸಿಂಗ್ ಚರ್ಚೆ

Amar Singh
ನವದೆಹಲಿ, ಮೇ. 15 : ಅಧಿಕಾರದ ಬೆನ್ನುಬಿದ್ದಿರುವ ಜನಪ್ರತಿಗಳು ಪದವಿಗಾಗಿ ಏನೇನೆಲ್ಲ ಮಾಡುತ್ತಾರೆ ಎನ್ನುವುದಕ್ಕೆ ಅಮರ್ ಸಿಂಗ್ ಅವರು ರಾಜನಾಥ್ ಸಿಂಗ್ ಕಿವಿಕಚ್ಚುತ್ತಿರುವುದೇ ಸಾಕ್ಷಿ. ಚುನಾವಣೆಗೂ ಮುಂಚೆ ಎನ್ ಡಿಎ, ಬಿಜೆಪಿ ಎಂದರೆ ಉರಿದು ಬೀಳುತ್ತಿದ್ದ ಸಮಾಜವಾದಿ ಪಕ್ಷದ ಮುಖಂಡರು ಇದೀಗ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಜೊತೆ ಖಾಸಗಿ ಸಮಾರಂಭವೊಂದರಲ್ಲಿ ಗುಟ್ಟಾಗಿ ಮಾತನಾಡಿರುವ ಸುದ್ದಿ ಬಂದಿದೆ. ಯುಪಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ಎಸ್ಪಿ, ಫಲಿತಾಂಶದ ನಂತರ ಎನ್ ಡಿಎ ಮೈತ್ರಿಕೂಟ ಸೇರಲಿದೆಯೇ?

ಇಂಥದ್ದೊಂದು ಸಂಶಯಕ್ಕೆ ಖಾಸಗಿ ಸಮಾರಂಭವೊಂದು ಕಾರಣವಾಯಿತು. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಈ ಇಬ್ಬರು ನಾಯಕರು ಕೆಲ ಕಾಲ ಚರ್ಚೆ ನಡೆಸಿದರೆಂದು ತಿಳಿದುಬಂದಿದೆ. ಉತ್ತರ ಪ್ರದೇಶದಲ್ಲಿ ಆನೆಯ(ಬಿಎಸ್ಪಿ) ನಾಗಾಲೋಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್ಪಿ ನಾಯಕರು ಮುಂದಾಗಿದ್ದು, ಅಗತ್ಯಬಿದ್ದರೆ ಬಿಜೆಪಿ ನೇತೃತ್ವದ ಎನ್ ಡಿಎಗೂ ಬೆಂಬಲ ಘೋಷಿಸಲು ಮುಂದಾಗಿದ್ದಾರೆ. ಮಾಯಾವತಿ ಅವರನ್ನು ಮೂಲೆಗುಂಪು ಮಾಡುವ ಏಕೈಕ ಉದ್ದೇಶ ಹೊಂದಿರುವ ಮುಲಾಯಂಸಿಂಗ್ ಮತ್ತು ಅಮರ್ ಸಿಂಗ್ ಅವರು ಅವರ ವಿರುದ್ಧ ಕೆಲಸ ಮಾಡಲು ಸದಾ ರೆಡಿಯಾಗಿದ್ದಾರೆ.

ಬಿಜೆಪಿ ಕೂಡಾ ಅಡ್ವಾಣಿ ಅವರನ್ನು ಪ್ರಧಾನಿ ಮಾಡಬೇಕು ಎನ್ನುವ ಒಂದೇ ಗುರಿ ಇಟ್ಟಕೊಂಡು ಬೆಂಬಲ ನೀಡುತ್ತೇವೆ ಎನ್ನುವ ಪಕ್ಷಗಳೊಂದಿಗೆ ಸಂಧಾನ ಆರಂಭಿಸಿವೆ. ಅಲ್ಲದೇ ಮುಲಾಯಂ ಸಿಂಗ್ ಅವರು ಮಾಯಾವತಿ ಸರಕಾರ ಪತನಗೊಳಿಸಲು ಯಾವ ಸರಕಾರ ಮುಂದಾದಲಿದೆಯೋ ಆ ಸರಕಾರಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಅಡ್ವಾಣಿ ವಿರೋಧ ವ್ಯಕ್ತಪಡಿಸಿದರಾದರೂ ಅನಿವಾರ್ಯತೆಗೆ ತಲೆಬಾಗಬೇಕಿದೆ. ಬೆಂಬಲ ನೀಡುವವನು ಕಳ್ಳನೋ, ಸುಳ್ಳನೋ, ಒಟ್ಟಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅಡ್ವಾಣಿ ಪ್ರಧಾನಿ ಆಗಬೇಕು ಎನ್ನುವುದು ಬಿಜೆಪಿ ನಾಯಕರ ಪ್ರಮುಖಾಂಶವಾಗಿದೆ.

(ಏಜನ್ಸೀಸ್)

ಪಿಎಂ ಹುದ್ದೆ ಮೇಲೆ ಶರದ್ ಪವಾರ್ ಕಣ್ಣು
ಮೇ.16, 1 ಗಂಟೆಗೆ ಚುನಾವಣಾ ಫಲಿತಾಂಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+