ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ ಇಂಟಿಗ್ರೇಟೆಡ್ ಪಾಸ್ ಗೆ ಚಾಲನೆ

By Staff
|
Google Oneindia Kannada News

Minister R Ashok
ಬೆಂಗಳೂರು, ಮೇ. 15 : ಬೆಂಗಳೂರಿನ ಸುತ್ತಮುತ್ತ 60 ಕಿ.ಮೀ ಒಳಗಿರುವ ಪ್ರದೇಶಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಲು ಅನುವಾಗುವಂತೆ ಒಂದೇ ಪಾಸ್ (ಇಂಟಿಗ್ರೇಟೆಡ್ ಪಾಸ್) ಪಡೆಯಬಹುದಾಗಿದೆ. ಈ ಸೇವೆಯನ್ನು ಮೇ 16 ರಂದು ಉದ್ಘಾಟಿಸಲಾಗುವುದು, ಅಲ್ಲದೆ ಅಂದು 30 ವೋಲ್ವೋ ಬಸ್ಸುಗಳ ಸೇವೆಯನ್ನು ಪ್ರಾರಂಭಿಸಲಾಗುವುದೆಂದು ಸಚಿವ ಆರ್. ಅಶೋಕ್ ಅವರು ತಿಳಿಸಿದರು.

ವಿಧಾನಸೌಧದಲ್ಲಿರುವ ತಮ್ಮ ಕಛೇರಿಯಲ್ಲಿ ಇಂದು ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಈ ವ್ಯವಸ್ಥೆಯಿಂದ ಚನ್ನಪಟ್ಟಣ, ರಾಮನಗರ, ಮಾಗಡಿ, ದೊಡ್ಡಬಳ್ಳಾಪುರ, ತುಮಕೂರು, ಚಿಕ್ಕಬಳ್ಳಾಪುರ ಬಾಗದ ಗ್ರಾಮೀಣ ಜನರಿಗೆ ಬಹಳಷ್ಟು ಅನುಕೂಲವಾಗಲಿದೆಯೆಂದು ತಿಳಿಸಿದರು.

ಸ್ಮಾರ್ಟ್ ಕಾರ್ಡ್ ನೀಡಿಕೆ

ಈಗಿರುವ ವಾಹನಗಳ ನೋಂದಣಿ ಮತ್ತು ಚಾಲನಾ ಪರವಾನಗಿಯನ್ನು ಬದಲಾಯಿಸಿ ಸ್ಮಾರ್ಟ್ ಕಾರ್ಡ್‌ನ್ನು ನೀಡಲಾಗುವುದು. ಈ ಕಾರ್ಡ್‌ಗಳು ವಿದ್ಯುನ್ಮಾನ ಚಿಪ್ ಹೊಂದಿದ್ದು ಇದರಲ್ಲಿ ವಾಹನ ಹಾಗೂ ವಾಹನ ಮಾಲೀಕರ ಪೂರ್ಣ ವಿವರಗಳು ಲಭ್ಯವಿರುವುದಾಗಿ, ಇದರಿಂದಾಗಿ ದುರುಪಯೋಗವಾಗುವುದನ್ನು ತಡೆಯಬಹುದಾಗಿದೆಯೆಂದು ತಿಳಿಸಿದರು.

ಎಸ್‌ಎಂಎಸ್ ಮೂಲಕ ವಾಹನದ ವಿವರ

56006 ಕ್ಕೆ ವಾಹನದ ಸಂಖ್ಯೆಯನ್ನು ಎಸ್‌ಎಂಎಸ್ ಮಾಡಿದಲ್ಲಿ ಯಾವುದೇ ವಾಹನದ ವಿವರಗಳನ್ನು ಪಡೆಯಬಹುದಾಗಿದೆ. ಈ ಸೌಲಭ್ಯದಿಂದ ಅಪಘಾತಗೊಳಿಸಿ ಪರಾರಿಯಾಗುವ ವಾಹನದ ವಿವರಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಲು ಅನುಕೂಲವಾಗುವುದೆಂದು ಅವರು ತಿಳಿಸಿದರು. 800 ನೂತನ ಸಾಮನ್ಯ ಬಸ್ಸುಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ. ಈ ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದು. ಹಳೇ ಮತ್ತು ಹಾಳಾಗಿರುವ ಬಸ್ಸುಗಳನ್ನು ತೆಗೆದು ಹಾಕಲಾಗುವುದು ಎಂದು ತಿಳಿಸಿದ ಅವರು, ವೋಲ್ವೋ ಬಸ್ಸುಗಳ ಟಿಕೆಟ್ ದರವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು. ವೋಲ್ವೋ ಬಸ್ಸು ಸೇವೆಯನ್ನು ಮೈಸೂರು ಮತ್ತು ಮಂಗಳೂರು ನಗರಗಳಿಗೆ ವಿಸ್ತರಿಸಲಾಗುವುದೆಂದು. ಇದರಿಂದಾಗಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮಂಗಳೂರಿನಿಂದ ಮಣಿಪಾಲಕ್ಕೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುವುದೆಂದು ತಿಳಿಸಿದರು.

ನೇಮಕಾತಿ ಪ್ರಕ್ರಿಯೆ ಪೂರ್ಣ

3000 ಚಾಲಕ, ನಿರ್ವಾಹಕರ ನೇಮಕಾತಿ ಪ್ರಕ್ರಿಯೆಯನ್ನು ಗಣಕೀಕರಣದ ಮೂಲಕ ಪೂರ್ಣಗೊಳಿಸಲಾಗಿದೆ. 1200 ತಾಂತ್ರಿಕ ಸಿಬ್ಬಂದಿಯನ್ನೂ ಸಹಾ ನೇಮಕಾತಿ ಮಾಡಲಾಗಿದೆ. ಇದರಿಂದಾಗಿ ಸಾರಿಗೆ ಸಂಸ್ಥೆಯ ಇತಿಹಾಸದಲ್ಲಿ ಪ್ರಥಮ ಭಾರಿಗೆ ಸಿಬ್ಬಂದಿ ಕೊರತೆ ನೀಗಿಸಿ ನೌಕರರ ಮೇಲಿದ್ದ ಅಧಿಕ ಕೆಲಸದ ಒತ್ತಡವನ್ನು ತೆಗೆಯಲಾಗಿದೆ ಎಂದು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X