ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ಕಸರತ್ತಿಗೆ ನಿಂತ ಬಿಜೆಪಿ ನಾಯಕರು

By Staff
|
Google Oneindia Kannada News

Narendra Modi
ನವದೆಹಲಿ, ಮೇ. 14 : ಅತಂತ್ರ ಸಂಸತ್ ನಿರ್ಮಾಣವಾಗಲಿದೆ ಎಂಬ ಸಮೀಕ್ಷೆಗಳು ಹೊರಬೀಳುತ್ತಿದ್ದಂತೆಯೇ ವಿವಿಧ ರಾಜಕೀಯ ಮುಖಂಡರು ಪ್ರಾದೇಶಿಕ ಪಕ್ಷಗಳ ಮನವೊಲಿಸುವ ಕಾರ್ಯದಲ್ಲಿ ನಿರತವಾಗಿವೆ. ಬಿಜೆಪಿ ಪಕ್ಷದ ಪರವಾಗಿ ನರೇಂದ್ರ ಮೋದಿ ಬಿಜಿಯಾಗಿದ್ದು, ಮುಖ್ಯವಾಗಿ ಎನ್ ಡಿಎ ಹಳೆಯ ಮೈತ್ರಿಕೂಟವಾಗಿದ್ದ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತು ದಟ್ಟವಾಗಿದೆ.

ಅತ್ತ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರೊಂದಿಗೆ ಬಿಜೆಪಿ ಹಿರಿಯ ನಾಯಕ ಎಂ ವೆಂಕಯ್ಯ ನಾಯ್ಡು ಕಸರತ್ತು ನಡೆಸಿದ್ದು, ಫಲ ನೀಡುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಬರತೊಡಗಿವೆ. ಆದರೆ, ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿರುವ ಚಂದ್ರಬಾಬು ನಾಯ್ಡು, ಸದ್ಯ ನಾವು ತೃತೀಯ ರಂಗದಲ್ಲಿದ್ದೇವೆ. ಫಲಿತಾಂಶದ ನಂತರವೇ ಸೂಕ್ತ ತೀರ್ಮಾನಕ್ಕೆ ಬರುವುದಾಗಿ ಹೇಳಿದ್ದಾರೆ.

ಬಿಜೆಪಿ ಪ್ರಸ್ತುತ ಚುನಾವಣೆಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ರಚಿಸಲು ಬೇಕಾಗಿರುವ ಅಗತ್ಯ ಸಂಖ್ಯಾಬಲವನ್ನು ಹೊಂದಲಿದೆ. ಒಂದು ವೇಳೆ ಸಂಖ್ಯಾಬಲದಲ್ಲಿ ಕೊರತೆ ಕಂಡು ಬಂದಲ್ಲಿ ಎನ್ ಡಿಎದಲ್ಲಿದ್ದ ಹಳೆಯ ಮಿತ್ರ ಪಕ್ಷಗಳು ಬೆಂಬಲಿಸುತ್ತವೆ. ಒಟ್ಟಿನಲ್ಲಿ ಕೇಂದ್ರದಲ್ಲಿ ಸರಕಾರ ರಚಿಸುವುದು ಭಾರತೀಯ ಜನತಾ ಪಕ್ಷವೇ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ಏಜನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X