ಹರಿಹರದಲ್ಲಿ ಜೆಡಿಎಸ್ ಕಾರ್ಯಕರ್ತನ ಕೊಲೆ

ಹರಿಹರ, ಮೇ.1: ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ಜೆಡಿಎಸ್ ಮುಖಂಡ ವಿಜಯಕುಮಾರ್ ಕೊಂಡಜ್ಜಿ (52) ಕೊಲೆಯಲ್ಲಿ ಅಂತ್ಯವಾದ ಘಟನೆ ಇಲ್ಲಿನ ಜೈ ಭೀಮಾ ನಗರದಲ್ಲಿ ಗುರುವಾರ ಸಂಜೆ ನಡೆದಿದೆ. ಕೊಲೆಯಾದ ವಿಜಯ ಕುಮಾರ್ ನಗರಸಭಾ ಸದಸ್ಯೆ ಹೊನ್ನಮ್ಮ ಕೊಂಡಜ್ಜಿ ಅವರ ಪತಿ.

ರಾಜಕೀಯ ವೈಷಮ್ಯದಿಂದ ನಡೆದಿರುವ ಈ ಕೊಲೆಯನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರಿಂದ ಹರಿಹರದಲ್ಲಿ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಹರಿಹರ ಬಂದ್ ಗೆ ಜೆಡಿಎಸ್ ಕರೆ ನೀಡಿತ್ತು. ಮೃತರ ಕುಟುಂಬಕ್ಕೆ ಎಚ್ ಡಿ ಕುಮಾರಸ್ವಾಮಿ ಅವರು ಸಾಂತ್ವನ ಹೇಳಿದ್ದಾರೆ.

ಘಟನೆಯ ಹಿನ್ನೆಲೆ
ಗುರುವಾರ ಸಂಜೆ ಚುನಾವಣೆ ಮುಗಿದ ಬಳಿಕ ಜೈ ಭೀಮಾನಗರಕ್ಕೆ ಶಾಸಕ ಬಿ ಪಿ ಹರೀಶ್ ಮತ್ತು ಹೊನ್ನಮ್ಮ ಕೊಂಡಜ್ಜಿ ಆಗಮಿಸಿದರು. ಅವರಿಬ್ಬರ ನಡುವೆ ಮಾತಿನ ಚಕಮಕಿ ಪ್ರಾರಂಭವಾಯಿತು. ಶಾಸಕರು ಅಲ್ಲಿಂದ ಹೊರಟು ಹೋದ ಬಳಿಕ ವಿಜಯ ಕುಮಾರ್ ಮತ್ತು ಶಾಸಕರ ಹಿಂಬಾಲಕರ ನಡುವೆ ಜಗಳ ಆರಂಭವಾಯಿತು. ಈ ಸಂದರ್ಭದಲ್ಲಿ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರಿಬ್ಬರು ವಿಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದರು.

ಸ್ಥಳದಲ್ಲೇ ಕುಸಿದು ಬಿದ್ದ ವಿಜಯ್ ಕುಮಾರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಅವರು ಸ್ಪಂದಿಸದೆ ಅಸು ನೀಗಿದರು ಎಂದು ಪೂರ್ವ ವಲಯ ಐಜಿಪಿ ಎಚ್ ಎನ್ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ. ಈ ಸಂಬಂಧ ಶಾಸಕ ಹರೀಶ್ ಸೇರಿದಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಜೆಡಿಎಸ್ ಕಾರ್ಯಕರ್ತನ ಕೊಲೆ; ಇಬ್ಬರ ಬಂಧನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+