ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ ಹತ್ಯೆ ಸಂಚು, ಪ್ರಮುಖ ಸಾಕ್ಷಿ ಸಾವು

By Staff
|
Google Oneindia Kannada News

ಮುಂಬೈ, ಏ, 29 : ಇತ್ತೀಚೆಗೆ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಕ್ಯಾಪ್ಟರ್ ಗೆ ಕಲ್ಲು, ಮರಳು ತುಂಬಿ ಹತ್ಯೆಗೆ ಯತ್ನ ನಡೆಸಿದ ಬೆನ್ನಲ್ಲೇ ಮಂಗಳವಾರ ಮತ್ತೊಂದು ಘಟನೆ ಸಂಭವಿಸಿದ್ದು, ಅನಿಲ್ ಅಂಬಾನಿ ಅವರ ಕ್ಯಾಪ್ಟರ್ ನಲ್ಲಿ ಕಲ್ಲು, ಮರಳು ತುಂಬಿರುವ ವಿಷಯವನ್ನು ಬಹಿರಂಗಪಡಿಸಿದ್ದ ಟೆಕ್ನಿಷಿಯನ್ ಅನುಮಾನಾಸ್ಪದ ರೀತಿಯಲ್ಲಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಭರತ್ ಬೋರ್ಗೆ ಎಂಬ ಟೆಕ್ನಿಷಿಯನ್ ಅನಿಲ್ ಅಂಬಾನಿ ಅವರ ಕ್ಯಾಪ್ಟರ್ ನಲ್ಲಿ ಕಲ್ಲು ಮರಳು ತುಂಬಿರುವುದನ್ನು ಬಹಿರಂಗಪಡಿಸಿದ್ದ. ಆದರೆ, ಮಂಗಳವಾರ ಅಂದೇರಿಯ ರೈಲು ಹಳಿಯ ಪಕ್ಕದಲ್ಲಿ ಬೋರ್ಗೆ ಅವರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ರೈಲು ಡಿಕ್ಕಿ ಹೊಡೆದಿದ್ದರಿಂದ ವ್ಯಕ್ತಿ ಸುಮಾರು 100 ಅಡಿ ದೂರು ಹೋಗಿ ಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರೈಲ್ವೆ ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೇ ದಾಖಲಿಸಿಕೊಂಡಿದ್ದಾರೆ. ಆದರೆ, ಮುಂಬೈ ಅಪರಾಧಿ ವಿಭಾಗದ ಪೊಲೀಸರು ಬಂದು ನಡೆಸಿದ ತಪಾಸಣೆಯಲ್ಲಿ ಮೃತ ಬೋರ್ಗೆ ಅವರ ಪ್ಯಾಂಟ್ ಜೇಬನಲ್ಲಿ ಮರಾಠಿ ಭಾಷೆಯಲ್ಲಿ ಬರೆದಿರುವ ಪತ್ರವೊಂದು ದೊರೆತಿದೆ.

ರಿಲೈಯನ್ಸ್ ಸಮೂಹದ ಕೆಲ ವ್ಯಕ್ತಿಗಳು ನನ್ನ ಮನಗೆ ಬಂದಿದ್ದರು. ಅದರಲ್ಲಿ ಒಬ್ಬರು ನನ್ನ ಮೋಬೈಲ್ ನಂಬರ್ ತೆಗೆದುಕೊಂಡ, ನಂತರ ನಿನ್ನ ಜೊತೆ ಮಾತನಾಡುವೆ ಎಂದು ಹೇಳಿದರು. ಇದರಿಂದ ನಾನು ಭಯಗೊಂಡೆ, ನಾನು ಬಲಿಪಶು ಆಗುವ ಸಾದ್ಯತೆ ಹೆಚ್ಚಾಗಿ ಕಂಡು ಬಂದಿತು. ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸಿ ಎಂದು ಅವರಲ್ಲಿ ನಾನು ಕೇಳಿಕೊಂಡೆ ಎಂದು ಪತ್ರ ಬರೆಯಲಾಗಿದೆ. ಭರತ್ ಬೋರ್ಗೆ ಏರ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕಂಪನಿಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅನಿಲ್ ಅಂಬಾನಿ ಅವರ ಕ್ಯಾಪ್ಟರ್ ತಪಾಸಣೆಗೆ ಮುಂದಾದುದ್ದೆ, ಆತನ ಜೀವಕ್ಕೆ ಕುತ್ತಾಗಿ ಪರಿಣಮಿಸಿತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X