ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಫೋರ್ಸ್ ಹಗರಣ: ಕ್ವಟ್ರೋಚಿ ಆರೋಪ ಮುಕ್ತ

By Staff
|
Google Oneindia Kannada News

Ottavio Quattrocchi
ನವದೆಹಲಿ, ಏ. 28: 1987ರ ಬೋಫೋರ್ಸ್ ಫಿರಂಗಿ ಖರೀದಿ ಹಗರಣದಲ್ಲಿ ಭಾಗಿಯಾಗಿದ್ದ ಇಟಲಿ ಮೂಲದ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಆರೋಪ ಮುಕ್ತರಾಗಿದ್ದಾರೆ. ಸಿಬಿಐ ಅವರನ್ನು ಆರೋಪ ಮುಕ್ತ ಎಂದು ಘೋಷಿಸಿದ ಬೆನ್ನಲ್ಲೇ ಇಂಟರ್ ಪೋಲ್ ಕೂಡ ರೆಡ್ ಕಾರ್ನರ್ ನೋಟೀಸ್ ಅನ್ನು ಹಿಂದಕ್ಕೆ ಪಡೆದಿದೆ.

ಸ್ವೀಡಿಷ್ ಮೂಲದ ಬೋಫೋರ್ಸ್ ಫಿರಂಗಿಯನ್ನು ಎಬಿ ಬೋಫೋರ್ಸ್ ನಿಂದ ಆಗಿನ ಪ್ರಧಾನಿ ರಾಜೀವ್ ಗಾಂಧಿ ಖರೀದಿಸಿದ್ದರು. ದಳ್ಳಾಳಿ ಮುಖಾಂತರ ನಡೆದ ಈ ವ್ಯವಹಾರದಲ್ಲಿ ಅದಲು ಬದಲಾದ ಮೊತ್ತ ಮಾತ್ರ ಇಂದಿಗೂ ಗೋಪ್ಯವಾಗಿ ಉಳಿದಿದೆ. ಆದರೆ ಈ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟಿದಾಗ
ವಿನ್ ಛಡ್ಡಾ(38 ಕೋ.ರು), ಲಂಡನ್ ನ ಹಿಂದೂಜಾ(16 ಕೋ. ರು) ಹಾಗೂ ಏಇ ಸರ್ವೀಸಸ್ ಗಳು ದಳ್ಳಾಳಿ ಹಣ ಪಡೆದಿರುವುದು ಖಾತ್ರಿಯಾಯಿತು. ಆದರೆ ಇವರುಗಳ ಮೇಲೆ ಯಾವುದೇ ಕೇಸ್ ಊರ್ಜಿತಗೊಳ್ಳದೇ ಖುಲಾಸೆಯಾಗಿ ವರ್ಷಗಳು ಕಳೆದಿವೆ.

1992 ರಲ್ಲಿ ಸ್ವೀಡನ್ ನ ಪತ್ರಿಕೆ ಡಜೆನ್ಸ್ ನೈಹೆಟೆರ್ ವರದಿಯಂತೆ, 'ಆಗಿನ ಪ್ರಧಾನಿ ರಾಜೀವ್ ಗಾಂಧಿಗೆ ಏಇ ಸರ್ವೀಸ್ ಮೂಲಕ ಬೋಫೋರ್ಸ್ ಖರೀದಿ ಸಾಧ್ಯವಾಯಿತು. ಹಾಗೂ ರಾಜೀವ್ ಗೆ ಅಪಾರ ಹಣ ಸಂದಾಯವಾಗಿದೆ ' ಎನ್ನಲಾಗಿದೆ. ಇದಲ್ಲದೆ ಹಗರಣದ ಪ್ರಮುಖ ಆರೋಪಿ ಕ್ವಟ್ರೋಚಿ, ಗಾಂಧಿ ಕುಟುಂಬಕ್ಕೆ ಪರಮಾಪ್ತನಾಗಿದ್ದು, ಆತನ ಕೊಲ್ಬಾರ್ ಇನ್ವೆಸ್ಟ್ ಮೆಂಟ್ ಹಾಗೂ ಸ್ಸಿಸ್ ಖಾತೆಗೆ ಅಪಾರ ಹಣ ಸಂದಾಯವಾಗಿರುವುದು ಇಂಟರ್ ಪೋಲ್ ನ ಶಂಕೆಗೆ ಕಾರಣವಾಗಿ, ತನಿಖೆ ಶುರುವಾಯಿತು.

ನಂತರ ಎನ್ ಡಿಎ ಅಧಿಕಾರದಲ್ಲಿದ್ದಾಗ ಮಲೇಷಿಯಾದಲ್ಲಿ ಕ್ವಟ್ರೋಚಿಯ ನೆಲೆಯನ್ನು ಕಂಡ ಭಾರತದ ಆಗಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರು ಸಿಬಿಐಗೆ ಈ ಬಗ್ಗೆ ವಿಷಯ ತಿಳಿಸಿ, ಕೇಸ್ ಮತ್ತೆ ಜೀವ ತಂದಿದ್ದರು. ಆದರೆ ಇಂದು ಕ್ವಟ್ರೋಚಿ ಆರೋಪ ಮುಕ್ತನಾಗಿ ಹೊರಬಂದಿದ್ದು, ಸಖೇದಾಶ್ಚರ್ಯದಾಯಕವಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X