ಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್

Karunanidhi calls for strike in TN for SL
ಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ ರೂಪಿಸಲಾಗಿದೆ.

ಶ್ರೀಲಂಕಾದಲ್ಲಿರುವ ತಮಿಳುರನ್ನು ರಕ್ಷಿಸಬೇಕು. ಅಲ್ಲದೇ ಶಾಶ್ವತ ಶಾಂತಿ ನೆಲೆಸುವ ಕುರಿತು ಒಪ್ಪಂದಕ್ಕೆ ಬರಬೇಕು ಎನ್ನುವುದು ಬಂದ್ ನ ಉದ್ದೇಶವಾಗಿದೆ. ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಶರಣಾಗತಿಗೆ ಲಂಕಾ ಸರ್ಕಾರ 24 ಗಂಟೆಗಳ ಗಡುವು ನೀಡಿತ್ತು. ಆದರೆ, ಗಡುವಿನೊಳಗೆ ಶರಣಾಗದಿದ್ದರಿಂದ ಲಂಕಾ ಸೇನಾ ಪಡೆ ತಮಿಳರು ಹೆಚ್ಚಿರುವ ನೆಲೆಗಳ ಕಾರ್ಯಾಚರಣೆ ಮುಂದುವರೆಸಿವೆ. ಈಗಾಗಲೇ ಸಾವಿರಾರು ತಮಿಳರು ಕಾರ್ಯಾಚರಣೆಯಲ್ಲಿ ಅಸುನೀಗಿದ್ದಾರೆ. ಸಾವಿರಾರು ತಮಿಳರನ್ನು ಲಂಕಾ ಸರ್ಕಾದ ಬಂಧಿಸಿದೆ.

ಈ ಮಧ್ಯ ಲಂಕಾದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಲು ಅಲ್ಲಿನ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಕೇಂದ್ರದ ಮೇಲೆ ತೀವ್ರ ಒತ್ತಡ ಹೇರಿದ್ದಾರೆ. ಈ ಕುರಿತು ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ವಿದೇಶಾಂಗ ಸಚಿವ ಪ್ರಣವನ್ ಮುಖರ್ಜಿ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಸುಮಾರು 70 ಸಾವಿರಕ್ಕೂ ಅಧಿಕ ತಮಿಳು ನಾಗರಿಕರು ಎಲ್ ಟಿಟಿಇ ವಶದಲ್ಲಿರುವ ಪ್ರದೇಶವನ್ನು ಬಿಟ್ಟು ಹೊರನಡೆದಿದ್ದಾರೆ. ಕರಾವಳಿ ಪ್ರದೇಶದಲ್ಲಿ ಪ್ರಭಾಕರನ್ ಅವಿತುಕೊಂಡಿದ್ದಾನೆ ಎಂಬ ಮಾಹಿತಿ ಸೇನೆಗೆ ದೊರೆಕಿದ್ದು, ಯಾವ ಕ್ಷಣದಲ್ಲಾದರೂ ಆತನನ್ನು ಜೀವಂತ ಇಲ್ಲವೇ ಮೃತದೇಹವನ್ನು ಲಂಕಾ ಸರ್ಕಾರ ವಶಪಡಿಸಿಕೊಳ್ಳಬಹುದು. ಮಾಜಿ ಪ್ರಧಾನ ರಾಜೀವ ಗಾಂಧಿ ಛಿದ್ರಗೊಳಿಸಿದ್ದು, ಇದೇ ಉಗ್ರ ಪ್ರಭಾಕರನ್ ಹಾಗೂ ಸಂಗಡಿಗರು ಎನ್ನುವುದು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಮಿಳರನ್ನು ಉಳಿಸಲು ಕೇಂದ್ರಕ್ಕೆ ಕರುಣಾ ಒತ್ತಾಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+