ಕಸಬ್ ವಕೀಲೆ ಅಂಜಲಿ ವಾಗ್ಮಾರೆ ವಜಾ

ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಾಮೂರ್ತಿ ಎಂ ಎಲ್ ತೆಹಿಲಿಯಾನಿ ನೇತೃತ್ವದ ಏಕ ಸದಸ್ಯ ಪೀಠ ಈ ನಿರ್ಧಾರ ಕೈಗೊಂಡಿದೆ. ಮುಂಬೈ ದಾಳಿಯಲ್ಲಿ ಹತ್ಯೆಯಾದವರ ಪರ ಅಂಜಲಿ ವಕಾಲತ್ತು ವಹಿಸಿದ್ದರು. ಆದರೆ, ಈಗ ಕಸಬ್ ಪರವೂ ವಕಾಲತ್ತು ವಹಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ನ್ಯಾಯಾಲಯ ವೃತ್ತಿ ಧರ್ಮಕ್ಕೆ ಅಗೌರವ ತೋರಿಸಿದ್ದಕ್ಕಾಗಿ ಅವರನ್ನು ಈ ಮೊಕದ್ದಮೆಯಿಂದ ಕಿತ್ತುಹಾಕಲಾಗಿದೆ ಎಂದು ತಿಳಿಸಿದೆ. ಕಸಬ್ ಪ್ರಕರಣ ಮುಂದುವರೆಯಲಿದ್ದು, ಆತನ ಪರ ಬೇರೆ ವಕೀಲರ ನೇಮಕಕ್ಕೆ ಶೀಘ್ರ ಅವಕಾಶ ಮಾಡಿಕೊಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಉಗ್ರ ಕಸಬ್ ಪರ ವಾದಿಸಲು ಮುಂದಾದ ಅಂಜಲಿ ವಾಗ್ಮಾರೆ ವಿರುದ್ದ ಮಹಾರಾಷ್ಟ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಶಿವಸೇನೆ ಕಾರ್ಯಕರ್ತರು ಅಂಜಲಿ ಮನೆಗೆ ಕಲ್ಲು ತೂರಾಟ ನಡೆಸಿತ್ತು. ಅಂಜಲಿ ಅವರ ರಕ್ಷಣೆಗೆ ಝಡ್ ದರ್ಜೆಯ ಭದ್ರತೆಯನ್ನು ನೀಡಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
ಮುಂಬೈ ಸ್ಫೋಟ : ಕಸಬ್ ವಿಚಾರಣೆ ಇಂದು











Click it and Unblock the Notifications