ಮಾಜಿ ಸಚಿವ ಪರಮೇಶ್ವರ್ ಪ್ರಚಾರ ಸಮಿತಿ ಅಧ್ಯಕ್ಷ

ಬೆಂಗಳೂರು, ಏ. 13 : ಮಾಜಿ ಸಚಿವ ಜಿ ಪರಮೇಶ್ವರ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ ನೀಡುತ್ತಾರೆ ಎನ್ನುವ ವಿಷಯ ದಲಿತ ವರ್ಗಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಅದನ್ನು ನಿವಾರಿಸಲು ಪರಮೇಶ್ವರ್ ಅವರಿಗೆ ಈ ಸ್ಥಾನ ನೀಡಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ಸ್ಥಾನದಲ್ಲಿ ಕೂರಿಸಲು ಖರ್ಗೆ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಚಾಲ್ತಿಯಲ್ಲಿದೆ. ಆದರೆ, ಇಂದು ಕೆಪಿಸಿಸಿ ಅಧ್ಯಕ್ಷ ಖರ್ಗೆ ರಾಜೀನಾಮೆಯನ್ನು ಸ್ಪಷ್ಪವಾಗಿ ತಳ್ಳಿಹಾಕಿದ್ದು, ಸುಳ್ಳು ಸುದ್ದಿ ವರದಿಯಾಗಿದೆ ಎಂದು ಸಾರಾಸಗಟಾಗಿ ನಿರಾಕರಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಉಂಟಾದ ದಿಢೀರ್ ಬೆಳವಣಿಗೆಯಿಂದ ಖರ್ಗೆ ಬೆಂಬಲಿಗರಲ್ಲಿ ಇರಸು-ಮುರಸು ಉಂಟಾಗಿರುವುದು ನಿಜ. ಅಷ್ಟೇ ಅಲ್ಲದೆ ದಲಿತ ಸಮುದಾಯದಲ್ಲಿ ಅತೃಪ್ತಿ ಹೊಗೆಯಾಡಲು ಕಾರಣವಾಗಿತ್ತು. ಇದನ್ನು ಅರಿತ ಪಕ್ಷದ ವರಿಷ್ಠರು ಜಿ ಪರಮೇಶ್ವರ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ, ಉಗ್ರಪ್ಪ ಸೇರಿದಂತೆ 30 ಮಂದಿಯನ್ನು ಪ್ರಚಾರ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+