ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಡ್ ಕೆ, ಕಾನೂನು ಪ್ರವೇಶ ಪರೀಕ್ಷೆ ಏಕಕಾಲದಲ್ಲಿ

By Staff
|
Google Oneindia Kannada News

ಬೆಂಗಳೂರು, ಏ. 8 : ಕಾಮೆಡ್ ಕೆ ಹಾಗೂ ಕಾನೂನು ಪದವಿ ಪ್ರವೇಶ ಪರೀಕ್ಷೆಗಳು ಏಕಕಾಲದಲ್ಲಿ ನಡೆಸುವ ವೇಳಾಪಟ್ಟಿ ಪ್ರಕಟವಾಗಿದ್ದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಇದು ವಿದ್ಯಾರ್ಥಿಗಳ ಪೋಷಕರ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ.

ಈ ಹಿಂದೆ ಕಾಮೆಡ್ ಮತ್ತು ಕಾನೂನು ಪದವಿ ಪ್ರವೇಶ ಪರೀಕ್ಷೆ ಬೇರೆ ಬೇರೆ ದಿನದಂದು ನಡೆಯುತ್ತಿತ್ತು. ಇಂಜಿನಿಯರಿಂಗ್ ನಲ್ಲಿ ತಮಗೆ ಬೇಕಿರುವ ಪದವಿ ಪ್ರವೇಶ ದೊರೆಯದ ಹಿನ್ನೆಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳು ಕಾನೂನು ಪ್ರವೇಶ ಪರೀಕ್ಷೆ ಕುಳಿತುಕೊಳ್ಳುತ್ತಿದ್ದರು. ಆದರೆ, ಈ ಸಲ ಅಂತಹ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಏಪ್ರಿಲ್ 17 ರಂದು ಎರಡು ಪರೀಕ್ಷೆಗಳು ಏಕಕಾಲದಲ್ಲಿ ನಡೆಯುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ಶುರುವಾಗಿದ್ದು, ಪರೀಕ್ಷೆಗೆ ಕುಳಿತುಕೊಳ್ಳುವ ಮೊದಲು ತಾನು ಯಾವ ಪದವಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿ ಪರೀಕ್ಷೆ ಬರೆಯುವುದು ಲೇಸು ಎನ್ನುವಂತಾಗಿದೆ. ಪ್ರವೇಶ ಪರೀಕ್ಷೆಗಳು ಭಾನುವಾರ ನಡೆಸುವುದು ವಾಡಿಕೆ. ಆದರೆ, ಲೋಕಸಭೆ ಚುನಾವಣೆಗಳ ಎಲ್ಲ ಪ್ರಕ್ರಿಯೆಗಳು ಏಪ್ರಿಲ್ 16 ರಂದು ಕೊನೆಗೊಳ್ಳಲಿವೆ. ಇದರಿಂದ ಏಪ್ರಿಲ್ 17 ರಂದು ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಕಾಮೆಡ್ ಮೂಲಗಳು ತಿಳಿಸಿವೆ. ರಾಜ್ಯದ 168 ಕೇಂದ್ರಗಳಲ್ಲಿ ಕಾಮೆಡ್ ಕೆ ಪರೀಕ್ಷೆಗಳು ನಡೆಯಲಿವೆ. 17 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕಾಮೆಡ್ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X