ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.1ರಿಂದಯಾವುದೇ ಎಟಿಎಂನಿಂದ ಹಣ ಪಡೆಯಿರಿ

By Staff
|
Google Oneindia Kannada News

Withdraw cash from any ATM for free from Apr 1
ನವದೆಹಲಿ, ಮಾ.29: ಡೆಬಿಟ್ ಕಾರ್ಡುದಾರರಿಗೊಂದು ಸಂತಸದ ಸುದ್ದಿ. ಇನ್ನು ಮುಂದೆ ಹಣ ಡ್ರಾ ಮಾಡಲು ನಿಮ್ಮದೇ ಬ್ಯಾಂಕಿನ ಎಟಿಎಂಗಾಗಿ ಹುಡುಕಾಡಬೇಕಾಗಿಲ್ಲ. ಏಪ್ರಿಲ್ 1ರಿಂದ ಯಾವುದೇ ಬ್ಯಾಂಕ್ ನ ಎಟಿಎಂನಿಂದ ಹಣ ಡ್ರಾ ಮಾಡಬಹುದು, ಇದಕ್ಕಾಗಿ ಯಾವುದೇ ಶುಲ್ಕ ನೀಡಬೇಕಾಗಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಆದರೆ ಕ್ರೆಡಿಟ್ ಕಾರ್ಡುದಾರರು ಹಾಗೂ ಭಾರತದ ಹೊರಗಿನ ಎಟಿಎಂಗಳಿಂದ ಹಣ ಪಡೆಯುವವರು ಶುಲ್ಕ ತೆರಬೇಕಾಗುತ್ತದೆ. ಇದರಿಂದ ಶ್ರೀಸಾಮನ್ಯನಿಗೆ ಅನುಕೂಲವಾಗಲಿದೆ ಎಂದು ಹಾಗೂ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಆರ್ ಬಿಐ ಈ ಕ್ರಮಕ್ಕೆ ಮುಂದಾಗಿದೆ.

ಬೇರೆ ಬ್ಯಾಂಕಿನ ಎಟಿಎಂನಿಂದ ಹಣ ಡ್ರಾ ಮಾಡಿದರೆ ಪ್ರಸ್ತುತ ರು.20 ಶುಲ್ಕ ವಿಧಿಸಲಾಗುತ್ತಿದೆ. ಬಹಳಷ್ಟು ಬ್ಯಾಂಕುಗಳು ಇತರೆ ಬ್ಯಾಂಕುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಎಟಿಎಂ ಸೇವೆ ನೀಡುತ್ತಿದ್ದವು. ಡಿಸೆಂಬರ್ 2007ರ ಅಂತ್ಯಕ್ಕೆ ಭಾರತದಲ್ಲಿ 32,342 ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದವು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X