ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ್ ಸಮರ್ಥಿಸಿಕೊಂಡ ಬಿಜೆಪಿ ವಿರುದ್ದ ಪಿಎಂ ಕಿಡಿ

By Staff
|
Google Oneindia Kannada News

ನವದೆಹಲಿ, ಮಾ. 24 : ಕೋಮುಭಾವನೆ ಕೆರಳಿಸುವ ಮೂಲಕ ದೇಶ ವಿಭಜಿಸುವ ಕೆಲಸದಲ್ಲಿ ಭಾರತೀಯ ಜನತಾ ಪಕ್ಷ ನಿರತವಾಗಿದೆ ಎಂದು ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ಗಂಭೀರ ಆರೋಪ ಮಾಡಿದರು. ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ವರುಣ್ ಗಾಂಧಿ ಅವರನ್ನು ಬಿಜೆಪಿ ಸಮರ್ಥಿಸಿಕೊಂಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಶೂನ್ಯ ಮನಸ್ಥಿತಿಯಲ್ಲಿರುವ ಬಿಜೆಪಿ ಮತ್ತು ಎಡಪಕ್ಷಗಳಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಎನ್ ಡಿಎ ಒಕ್ಕೂಟ ಹಾಗೂ ತೃತೀಯ ರಂಗಗಳಿಗೆ ದೇಶದ ಸವಾಲು ಎದುರಿಸಿ ಆಡಳಿತ ನಡೆಸುವುದು ದುಸ್ಸಾಧ್ಯ ಎಂದು ಟೀಕಿಸಿದ ಮನಮೋಹನ್ ಸಿಂಗ್, ಯುಪಿಎ ಸರ್ಕಾರಕ್ಕೆ ಇನ್ನೊಂದು ಬಾರಿ ಅವಕಾಶ ನೀಡಿದರೆ, ಮುಂದಿನ ಐದು ವರ್ಷಗಳಲ್ಲಿ ಗಮನಾರ್ಹ ರೀತಿಯ ಬೆಳವಣಿಗೆ ನಡೆಯಲಿದೆ ಎಂದು ಭರವಸೆ ನೀಡಿದರು.

ಸರ್ವ ಜನಾಂಗಗಳ ತೋಟದಂತಿರುವ ಭಾರತವನ್ನು ಮುನ್ನೆಡೆಸಲು ಯುಪಿಎ ನಂತಹ ಜಾತ್ಯಾತೀತ ಹಾಗೂ ಸ್ಥಿರ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ದಕ್ಷಿಣ ಏಷಿಯಾದಲ್ಲಿ ಪೆಡಂಭೂತದಂತೆ ಕಾಡುತ್ತಿರುವ ಭಯೋತ್ಪಾದನೆ ನಿರ್ಮೂಲನೆ ಮಾಡಲು ಯುಪಿಎ ಸರ್ಕಾರದಿಂದ ಮಾತ್ರ. ಆದ್ದರಿಂದ ಇನ್ನೊಂದು ಬಾರಿ ಯುಪಿಎ ಸರ್ಕಾರಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ಮನಮೋಹನ್ ಸಿಂಗ್ ಮತದಾರರಲ್ಲಿ ಮನವಿ ಮಾಡಿಕೊಂಡರು.

(ದಟ್ಸ್ ಕನ್ನಡ ವಾರ್ತೆ)
ತಾರಕಕ್ಕೇರಿದ ಬಿಜೆಪಿ-ಆಯೋಗದ ಜಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X