ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ನನ್ನ ಕೊನೆಯ ಚುನಾವಣೆ, ಪ್ರಣವ್ ಮುಖರ್ಜಿ

By Staff
|
Google Oneindia Kannada News

Pranab Mukharjee
ಜಂಗೀಪುರ್ (ಪಶ್ಚಿಮ ಬಂಗಾಲ), ಮಾ. 20 : ಇದು ನನ್ನ ಕೊನೆಯ ಚುನಾವಣೆ ಆದರೂ ಆಗಬಹುದು, ಇದೊಂದು ಸಾರಿ ನನಗೆ ಆಶೀರ್ವಾದ ಮಾಡಿ, ಕಳೆದ 37-38 ವರ್ಷದಿಂದ ನನ್ನ ಪೋಷಿಸಿ ಬೆಳೆಸಿದ ನೀವುಗಳು, ಈ ಚುನಾವಣೆಯಲ್ಲಿ ಕೂಡಾ ನನಗೆ ಮತ ನೀಡಿ ಎಂದು ನೆರೆದಿದ್ದ ಜನಸ್ತೋಮದ ಎದುರು ಕಾಂಗ್ರೆಸ್ ನ ಶಕ್ತಿಯುತ ವ್ಯಕ್ತಿ ಎಂದೇ ಹೇಳಲಾಗುತ್ತಿರುವ ಕೇಂದ್ರದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ತಮ್ಮ ಸ್ವಂತ ಕ್ಷೇತ್ರ ಜಂಗೀಪುರದ ಚುನಾವಣೆ ಸಮಾವೇಶದಲ್ಲಿ ಭಾಗವಹಿಸಿ ಮತದಾರರಿಗೆ ಮಾಡಿಕೊಂಡ ಮನವಿ ಇದೆ.

ಇದು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ, ದೇಶದ ರಾಜಕಾರಣದಲ್ಲಿ ಸುದೀರ್ಘವಾಗಿ ಸೇವೆಯಲ್ಲಿ ಸಲ್ಲಿಸಲು ನಿಮ್ಮ ಹಾರೈಕೆಯೇ ಕಾರಣವಾಗಿದೆ. ಇದು ಒಂದು ಸಾರಿ ಮತ ನೀಡಿ, ಇನ್ನೊಂದು ಸಲ ನಿಮ್ಮ ಬಳಿ ನಾನು ಮತ ಕೇಳಲು ಬರುವ ಸಾಧ್ಯತೆಗಳು ಕಡಿಮೆ ಎಂದು ಮುಖರ್ಜಿ ಹೇಳಿದರು. ನಿಮ್ಮ ಮತದಿಂದ ನಾನು ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಗೆ ಬರಲು ಸಾದ್ಯವಾಯಿತು ಎಂದು ಮತದಾರರ ಋಣವನ್ನು ಸ್ಮರಿಸಲು ಅವರು ಮರೆಯಲಿಲ್ಲ.

ಪ್ರಣವ್ ಮುಖರ್ಜಿ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಯುಪಿಎ ಸರ್ಕಾರ ಅಷ್ಟೂ ಕೀಲಿ ಕೈ ಮುಖರ್ಜಿ ಬಳಿ ಇದ್ದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದರೂ ಮುಖರ್ಜಿ ಸಮ್ಮತಿ ಇಲ್ಲದೇ ಯಾವುದೇ ಕಾರ್ಯಕ್ರಮಗಳು ಸರ್ಕಾರದಲ್ಲಾಗಲಿ, ಕಾಂಗ್ರೆಸ್ ಪಕ್ಷದಲ್ಲಾಗಲಿ ನೆರವೇರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಮುಖರ್ಜಿ ತಮ್ಮ ಪ್ರಭಾವನನ್ನು ಬೆಳೆಸಿಕೊಂಡಿದ್ದಾರೆ.

ಇತ್ತೀಚೆಗೆ ಪ್ರಧಾನಮಂತ್ರಿ ಮವಮೋಹನ್ ಸಿಂಗ್ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾದಾಗ ಹಣಕಾಸು ಖಾತೆಯನ್ನು ವಹಿಸಿಕೊಂಡ ಮುಖರ್ಜಿ, ಯಶಸ್ವಿಯಾಗಿ ದೇಶದ ಬಜೆಟ್ ಮಂಡಿಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖರ್ಜಿ ಪ್ರಧಾನಮಂತ್ರಿ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

(ದಟ್ಸ್ ಕನ್ನಡ ವಾರ್ತೆ)
ತೃತೀಯರಂಗಕ್ಕೆ ಕೈ ಬೆಂಬಲ ಕೋರಿಕೆ, ಕಾರಟ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X