ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಪಿ ಪಟ್ಟಿ ಬಿಡುಗಡೆ ಮಾಡಿದ ಮಾಯಾವತಿ

By Staff
|
Google Oneindia Kannada News

Mayawati
ಲಖನೌ, ಮಾ. 20 : ದೇಶದ ರಾಜಕೀಯ ಚಿತ್ರಣ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯದ 80 ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯಾದ್ಯಂತ ಜಯಭೇರಿ ಬಾರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕೂಡಾ ಅದೇ ಫಲಿತಾಂಶ ಹೊರಬರಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದರು.

ಚುನಾವಣಾ ಪ್ರಣಾಳಿಕೆಯನ್ನು ಅತೀ ಮುತುವರ್ಜಿಯಿಂದ ತಯಾರಿಸಲಾಗಿದ್ದು, ಶೀಘ್ರದಲ್ಲಿ ಬಿಡುಗಡೆ ಮಾಡಿಲಾಗುವುದು. ಮಾರ್ಚ್ 21 ರಿಂದ ಕೇರಳದಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಲಾಗುವುದು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 11 ರ ವರೆಗೆ ಪ್ರಚಾರ ಕಾರ್ಯ ನಡೆಸುವುದಾಗಿ ಹೇಳಿದರು. ದೇಶದ್ಯಾಂತ ಪ್ರವಾಸ ಕೈಗೊಂಡು ತೃತೀಯ ರಂಗಕ್ಕೆ ಮತಯಾಚಿಸುವುದಾಗಿ ಮಾಯಾವತಿ ಹೇಳಿದರು.

ಕ್ರಿಮಿನಲ್ ಹಿನ್ನಲೆಯುಳ್ಳ ಡಿ ಪಿ ಯಾದವ್, ಮುಕ್ತಾರ್ ಅನ್ಸಾರಿ, ಇಕ್ಬಾಲ್ ಅನ್ಸಾರಿ, ಧನಂಜಯ್ ಸಿಂಗ್ ಮುಂತಾದವರಿಗೂ ಟಿಕೆಟ್ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಲಿತರ ಪಕ್ಷ ಅನ್ನುವ ಹಣೆಪಟ್ಟಿಯಿಂದ ಹೊರಬಂದು ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಜಾತಿಯವರಿಗೆ ಟಿಕೆಟ್ ನೀಡಿ ಭಾರಿ ಯಶಸ್ಸು ಕಂಡಿದ್ದ ಮಾಯಾವತಿ, ಈ ಚುನಾವಣೆಯಲ್ಲಿ ಕೂಡಾ ಅದೇ ತಂತ್ರಗಾರಿಕೆಯನ್ನು ಮುಂದುವರೆಸಿದ್ದಾರೆ. ಈಗಿನ ಲೋಕಸಭಾ ಚುನಾವಣೆಯಲ್ಲಿ ಕೂಡ ಶೇಕಡಾ 30ರಷ್ಟು ಟಿಕೆಟ್ ಅನ್ನು ಮೇಲ್ಜಾತಿಯವರಿಗೆ ನೀಡಿದ್ದಾರೆ. ಬ್ರಾಹ್ಮಣರಿಗೆ 20, ಠಾಕೂರ್ ಜನಾಂಗಕ್ಕೆ 6, ಮುಸ್ಲಿಮರಿಗೆ 14 ಮತ್ತು ಉಳಿದ ಸೀಟ್ ಅನ್ನು ದಲಿತರಿಗೆ ನೀಡಿದ್ದಾರೆ.

ತೃತೀಯ ರಂಗದ ಪ್ರಧಾನಮಂತ್ರಿ ಸ್ಥಾನಕ್ಕೆ ತಮ್ಮನ್ನು ಸೂಚಿಸಬೇಕು ಎಂದು ಅವರು ಪಟ್ಟು ಹಿಡಿದಿದ್ದರು. ಅದಕ್ಕೆ ಮಾರ್ಚ್ 15 ಅಂತಿಮ ಗಡುವು ನೀಡಿದ್ದರು. ನಂತರ ದಿನಗಳಲ್ಲಿ ಮಾಯಾವತಿ ಆ ಬಗ್ಗೆ ಯಾವುದೇ ಮಾತು ಎತ್ತಿಲ್ಲ. ಅಲ್ಲದೇ, ಎಡಪಕ್ಷಗಳು ಪ್ರಧಾನಮಂತ್ರಿ ಅಭ್ಯರ್ಥಿ ಆಯ್ಕೆ ಏನಿದ್ದರೂ ಚುನಾವಣೆ ನಂತರ ಎಂದು ಖಡಾಖಂಡಿತಾವಾಗಿ ಹೇಳಿದ್ದರು. ಆಂಧ್ರಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು, ಚುನಾವಣೆ ನಂತರ ತೃತೀಯ ರಂಗದ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಜನರೇ ಆಯ್ಕೆ ಮಾಡುತ್ತಾರೆ ಎಂದು ಹೇಳುವ ಮೂಲಕ ಜಾಣತನದಿಂದ ಜಾರಿಕೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)
ತೃತೀಯರಂಗ ಸರ್ಕಾರಕ್ಕೆ ಕೈ ಬೆಂಬಲ ಕೋರಿಕೆ, ಕಾರಟ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X