ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷ್ ರಾಜತಾಂತ್ರಿಕರ ಬೆಳಗಾವಿ ಭೇಟಿ

By Staff
|
Google Oneindia Kannada News

ಬೆಳಗಾವಿ, ಮಾ. 20 : ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಬ್ರಿಟಿಷ್ ರಾಜತಾಂತ್ರಿಕ ರಿಚರ್ಡ್ ಹೈಡ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಕೇಂದ್ರಸ್ಥಾನ ಸಹಾಯಕರಾದ ಡಾ. ವಿಜಯಕುಮಾರ ತೊರಗಲ್ ಅವರನ್ನು ಭೇಟಿ ಮಾಡಿ ಬೆಳಗಾವಿ ಜಿಲ್ಲೆಯ ಬಗ್ಗೆ ಅವಶ್ಯಕ ಮಾಹಿತಿ ಪಡೆದರು. ಬೆಳಗಾವಿ ಜಿಲ್ಲೆಯ ಐತಿಹಾಸಿಕ ಮಹತ್ವ, ವ್ಯಾಪಾರ, ವಾಣಿಜ್ಯಕ್ಕಾಗಿ ಅನುಕೂಲವಾಗಿರುವ ವಾತಾವರಣ, ಉತ್ತಮ ಸಾರಿಗೆ ವ್ಯವಸ್ಥೆ ಹಾಗೂ ಅವಶ್ಯಕವಾಗಿರುವ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ವಿವರಿಸಿದರು.

ಅದರಂತೆ ಬೆಳಗಾವಿ ಜಿಲ್ಲೆಯು ಮಹಾರಾಷ್ಟ್ರ, ಗೋವಾ, ಹುಬ್ಬಳ್ಳಿ-ಧಾರವಾಡಗಳಿಗೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಕೈಗಾರಿಕಾಭಿವೃದ್ಧಿಗೆ ಅನುಕೂಲಕರವಾಗಿದೆ. ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು, ಅವಶ್ಯಕ ಸಂಪನ್ಮೂಲಗಳನ್ನು ಹೊಂದಿದೆ. ಇದಕ್ಕಾಗಿ ಕೈಗಾರಿಕಾ ಸ್ಥಾಪನೆಗೆ ಆಹ್ವಾನವನ್ನು ನೀಡಿ, ಜಿಲ್ಲಾಡಳಿತದಿಂದಲೂ ಸಂಪೂರ್ಣ ಸಹಕಾರ ನೀಡುವುದಾಗಿ ವಿಜಯಕುಮಾರ ತೋರಗಲ್ ಭರವಸೆ ನೀಡಿದರು.

ರಿಚರ್ಡ್ ಹೈಡ್ ಅವರು ಜಂಟಿ ಸಹಯೋಗದೊಂದಿಗೆ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದ್ದು, ಈ ದಿಸೆಯಲ್ಲಿ ಬೆಳಗಾವಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿ ಬೆಳಗಾವಿ ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಇತರ ವಾಣಿಜ್ಯ ವ್ಯಾಪಾರಕ್ಕೆ ಅನುಕೂಲಕರವಾಗುವ ಅಂಶಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಬ್ರಿಟಿಷ್ ಟ್ರೇಡ್ ಕಚೇರಿಯ ಹಿರಿಯ ಸಲಹೆಗಾರ ಎಂ. ಸುನೀಲಕುಮಾರ, ಬೆಳಗಾವಿ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಸವರಾಜ ಗದಗ, ಉಪನಿರ್ದೇಶಕ ಟಿ. ಸಿದ್ದಣ್ಣ ಉಪಸ್ಥಿತರಿದ್ದರು. ರಿಚಡ್ ಹೈಡ್ ಅವರು ಜಿಲ್ಲಾಧಿಕಾರಿ ಡಾ ಜೆ.ರವಿಶಂಕರ ಅವರೊಂದಿಗೂ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕೇಂದ್ರಸ್ಥಾನ ಸಹಾಯಕರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X