ಮೈಸೂರು: ಮಾಹಿತಿ ಹಕ್ಕು ಕಾಯ್ದೆ ಕಾರ್ಯಾಗಾರ

ಜನರನ್ನು ಸಬಲೀಕರಿಸಲು ಮಾಹಿತಿ - ಸರಿಯಾದ ಸಮಯಕ್ಕೆ ದೊರಕಿಸಿಕೊಡುವುದು ಎಲ್ಲಾ ಅಧಿಕಾರಿಗಳ ಕರ್ತವ್ಯವೆಂದರು. ಮಾಹಿತಿ ಹಕ್ಕು ಕಾಯ್ದೆಯ ಕೆಲವು ದುರ್ಬಳಕೆಯ ಸೂಚನೆ ಕಂಡರೂ ಮಾಹಿತಿಯನ್ನು ದೊರಕಿಸಿಕೊಡುವುದು ಆರೋಗ್ಯಕರ ಬದಲಾವಣೆಗೆ ಅನಿವಾರ್ಯವೆಂದರು.
ಮಹಾರಾಷ್ಟ್ರ, ಆಂದ್ರಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು, ಗೋವಾ ಮತ್ತು ದೆಹಲಿ ರಾಜ್ಯಗಳ ೩೦ ಮಂದಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಮಾಹಿತಿ ಹಕ್ಕು ತರಬೇತಿದಾರರು ಹಾಗೂ ಸ್ವಯಂ ಸೇವಾ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ. ಎರಡು ದಿನದ ಕಾರ್ಯಾಗಾರದಲ್ಲಿ ತರಬೇತಿದಾರರ ತರಬೇತಿ ಪಠ್ಯಕ್ರಮ ವಿನ್ಯಾಸ ಮಾಹಿತಿ ಹಕ್ಕು ಕಾಯ್ದೆ ಹಕ್ಕು ದುರ್ಬಳಕೆ, ಮತ್ತು ವಿವಿಧ ರಾಜ್ಯಗಳ ವಸ್ತು ಸ್ಥಿತಿ ಗ್ಗೆ ಚರ್ಚಿಸಿ ಸೂಚನೆಗಳನ್ನು ಸಿದ್ದಪಡಿಸಲಾಗುವುದು.
ಕಾರ್ಯಾಗಾರದಲ್ಲಿ ಮುಖ್ಯ ಭಾಷಣಾಕಾರರಾಗಿ ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೆಶಕಿ ಡಾ. ಅಮಿತಾ ಪ್ರಸಾದ್ ಪ್ರಸ್ತುತ ಅಧಿಕಾರಿಗಳಲ್ಲಿ ಮನೋಭಾವದ ಬದಲಾವಣೆ ಅನಿವಾರ್ಯವೆಂದರು. ರಾಜ್ಯ ಆಡಳಿತ ತರಬೇತಿ ಸಂಸ್ಥೆಯು ನಿರಂತರವಾಗಿ ಮಾಹಿತಿ ಹಕ್ಕು ಕಾಯ್ದೆ ಸಂಬಂಧಿಸಿದ ತರಬೇತಿಗಳನ್ನು ಅನುಷ್ಠಾನಗೊಳಿಸುತ್ತಿದೆ. ತಮ್ಮ ವೈಯುಕ್ತಿಕ ಸೇವಾ ಸೌಲಭ್ಯಗಳಿಗೆ ಸಾರ್ವಜನಿಕ ಉದ್ಯಮದ ನೌಕರರುಗಳು ಮಾಹಿತಿ ಕಾಯ್ದೆಯನ್ನು ಬಹುವಾಗಿ ಬಳಸುತ್ತಿದ್ದು ಬಡತನದ ರೇಖೆ ಕೆಳಗಿನ ಜನರೂ ಕೂಡ ತಮ್ಮ ಹಕ್ಕುಗಳಿಗಾಗಿ ಈ ಕಾಯ್ದೆಯನ್ನು ಬಳಸುತ್ತಿದ್ದಾರೆ ಎಂದರು.
ಜಯಂತ್ ಗೌರವ್, ರಿಜಿಸ್ಟ್ರಾರ್ ಮತ್ತು ಸಹಾಯಕ ಪ್ರಾಧ್ಯಾಪಕ ಯಶಾಧಾ ಪೂನಾ ಇವರು ಮಾಹಿತಿ ಹಕ್ಕು ಕಾಯ್ದೆ ಅನುಷ್ಟಾನಕ್ಕಾಗಿ ದೇಶದ 28 ರಾಜ್ಯಗಳಲ್ಲಿ ಆಡಳಿತ ತರಬೇತಿ ಸಂಸ್ಥೆಗಳ ಮೂಲಕ 1500ಕ್ಕೂ ಮಿಗಿಲಾಗಿ ತರಬೇತಿದಾರರ ಸಂಪನ್ಮೂಲವನ್ನು ಸೄಷ್ಟಿಸಲಾಗಿದೆ ಎಂದರು. ಕೋಮಲತಾ ಕಾರ್ಯಾಗಾರ ಸಂಯೋಜಕಿ ಹಾಗೂ ಬೊಧಕರು (ಕಾನೂನು) ಆಡಳಿತ ತರಬೇತಿ ಸಂಸ್ಥೆ ಸ್ವಾಗತಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications