ಬಿಜೆಪಿಯಲ್ಲಿ ಎದ್ದಿದ್ದ ಬೆಂಕಿ ಶಮನಗೊಳಿಸಿದೆ ಸಿಎಂ

ಸಂಧಾನ ಸಭೆಯ ನಂತರ ಮಾತನಾಡಿದ ಯಡಿಯೂರಪ್ಪ, ಆಡಳಿತ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಮತ್ತಿತರ ವಿಷಯಗಳಿಗೆ ಬಂಡಾಯ, ಅಸಮಾಧಾನ ಇರುವುದು ಸಹಜ. ಹಿರಿಯರಾದ ಶಿವಪ್ಪ ಮತ್ತು ಮಲ್ಲಿಕಾರ್ಜುನಯ್ಯ ಅವರ ಎಲ್ಲ ಮನವಿ ಹಾಗೂ ಸೂಚನೆಗಳನ್ನು ಸುದೀರ್ಘವಾಗಿ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಅವುಗಳನ್ನು ಬದೆಹರಿಸಲಾಗುವುದು ಎಂದು ಅವರು ಹೇಳಿದರು. ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಉಳಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಈ ಇಬ್ಬರು ನಾಯಕರು ಸಮ್ಮತಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಡೆದ ಸಂಧಾನ ಸಭೆ ಫಲ ತಾತ್ಕಾಲಿಕ ಶಮನವಂತೂ ಆಗಿದೆ.
ಸಿಎಂ ವಿರುದ್ಧ ಶಾಣಪ್ಪ ಕಿಡಿ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬರೀ ಮೇಲ್ವರ್ಗದವರಿಗೆ ಮಣೆಹಾಕುತ್ತಿದ್ದು, ದಲಿತರನ್ನು ಕಡೆಗಣಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಕೆ ಬಿ ಶಾಣಪ್ಪ ಆರೋಪಿಸಿದ್ದಾರೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಸಿಎಂ ಪುತ್ರ ರಾಘವೇಂದ್ರನಿಗೆ ಟಿಕೆಟ್ ನೀಡಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದ ಅವರು, ಅನೇಕ ಹಿರಿಯ ಮುಖಂಡರನ್ನು ಯಡಿಯೂರಪ್ಪ ಮೂಲೆಗುಂಪು ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
(ದಟ್ಸ್ ಕನ್ನಡ ವಾರ್ತೆ)
ಯಡಿಯೂರಪ್ಪ ವಿರುದ್ಧ ಅನಂತ್ ಆಕ್ರೋಶ
ಲೋಕಸಭೆ ಚುನಾವಣೆ, ಮಲ್ಲಿಕಾರ್ಜುನಯ್ಯ ಬೇಸರ











Click it and Unblock the Notifications