ಮೈಸೂರು; ಪೆಟ್ರೋಲ್ ಬಂಕ್ : ಲೆಕ್ಕ ಇಡಲು ಸೂಚನೆ
ಮೈಸೂರು, ಮಾ. 12 : ಮೈಸೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಪೆಟ್ರೋಲ್ ಬಂಕ್‌ಗಳವರು ತಮ್ಮಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪೆಟ್ರೋಲ್ ಮತ್ತು ಡೀಸಲ್ ಪಡೆಯುವ ವಿವರ ಲೆಕ್ಕ ದಾಖಲಿಸುವಂತೆ ಮೈಸೂರು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ ಡಾ: ಸಿ.ಜಿ. ಬೆಟ್ಟಸೂರ್ ಮಠ್ ಪೆಟ್ರೋಲ್ ಬಂಕ್‌ಗಳ ಮಾಲೀಕರಿಗೆ ಸೂಚನೆ ನೀಡಿದರು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಪೆಟ್ರೋಲ್ ಬಂಕ್‌ಗಳ ಮಾಲೀಕರು ಹಾಗೂ ಅವರುಗಳ ಸಂಘದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಚುನಾವಣೆಗೆ ಸಂಬಂಧಿಸಿದಂತೆ ಇಂಧನ ತುಂಬಿಸಿಕೊಳ್ಳುವವರಿಗೆ ಕಡ್ಡಾಯವಾಗಿ ರಸೀತಿ ನೀಡಿ ವಾಹನಗಳಿಗೆ ಹಾಕಿಸಿ ಇಂಧನದ ವಿವರಗಳನ್ನು ಸಾಪ್ತಾಹಿಕವಾಗಿ ಚುನಾವಣೆಗೆ ಸಂಬಂಧಿಸಿದ ವಲಯ ಅಧಿಕಾರಿಗಳು ಕೇಳಿದಾಗ ಒದಗಿಸಲು ಕ್ರಮಬದ್ಧವಾಗಿ ಲೆಕ್ಕ ಇಡಿ ಹಾಗೂ ಸಾಪ್ತಾಹಿಕ ವರದಿ ನೀಡಿ ಎಂದು ಸಭೆಯಲ್ಲಿ ಬೆಟ್ಟಸೂರ್ ಮಠ್ ತಿಳಿಸಿದರು.
ಸಭೆಯಲ್ಲಿ ನಗರದ ವಿವಿಧ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪದಾಧಿಕಾರಿಗಳು, ಚುನಾವಣಾ ತಹಸೀಲ್ದಾರ್ ಪ್ರಕಾಶ್ ಗೆಜ್ಜಿ , ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿ ವೃಷಭ ರಾಜೇಂದ್ರಸ್ವಾಮಿ, ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications