ಮಾ.12ಕ್ಕೆ ತೃತೀಯ ರಂಗಕ್ಕೆ ಚಾಲನೆ, ದೇವೇಗೌಡ
ಬೆಂಗಳೂರು, ಮಾ. 3 : ಸುಮಾರು ಎಂಟು ಪಕ್ಷಗಳು ಜೊತೆಗೂಡಿ ಮಾರ್ಚ್ 12 ರಂದು ತುಮಕೂರಿನಲ್ಲಿ ತೃತೀಯ ರಂಗಕ್ಕೆ ಚಾಲನೆ ನೀಡಲಾಗುವುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಡ್ಡು ಹೊಡೆಯಲು ತೃತೀಯ ರಂಗದ ಅವಶ್ಯಕತೆ ದೇಶಕ್ಕೆ ಇದೆ ಎಂದು ಈ ಸಂದರ್ಭದಲ್ಲಿ ಘೋಷಿಸಿದ್ದಾರೆ.
ಎಐಎಡಿಎಂಕೆ, ಟಿಡಿಪಿ, ಟಿಆರ್ಎಸ್ ಮತ್ತು ಎಡಪಕ್ಷಗಳಾದ ಸಿಪಿಐ, ಸಿಪಿಎಂ, ಫಾರ್ವರ್ಡ್ ಬ್ಲಾಕ್, ಆರ್ ಪಿ ಐ, ಮತ್ತು ಜೆಡಿಎಸ್ ಪಕ್ಷಗಳು ತೃತೀಯ ರಂಗ ಚಾಲನೆಗೆ ಒಪ್ಪಿಗೆ ಸೂಚಿಸಿದ್ದು, ಮಾರ್ಚ್ 12ರಂದು ತುಮಕೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ದೇವೇಗೌಡ ತಿಳಿಸಿದ್ದಾರೆ.
ತೃತೀಯ ರಂಗದಿಂದ ಪ್ರಧಾನಮಂತ್ರಿ ಅಭ್ಯರ್ಥಿ ಯಾರಾಗಬೇಕು ಎನ್ನುವ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ಬೆಂಬಲಿಸುವುದಕ್ಕೆ ಸಂಬಂಧಿಸಿದಂತೆ ಇನ್ನು ಮಾತುಕತೆ ನಡೆಯಬೇಕಾಗಿದೆ ಎಂದು ದೇವೇಗೌಡರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಸೈಕಲ್ ಹಿಡಿದ ಕೈ, ಎನ್ ಡಿಎ ತೆಕ್ಕೆಗೆ ಆರ್ಎಲ್ ಡಿ












Click it and Unblock the Notifications