ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖರ್ಗೆ ಹೆಗಲಿಗೆ ಮಹಾರಾಷ್ಟ್ರ ಜವಾಬ್ದಾರಿ

By Staff
|
Google Oneindia Kannada News

Kharge appointed as Maharastra in charge for LS polls
ಬೆಂಗಳೂರು, ಫೆ. 23 : ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾರ್ಯಕಾರಿಣಿಯಲ್ಲಿ ಸ್ಥಾನ ಕಲ್ಪಿಸಿರುವ ಹೈಕಮಾಂಡ್ ಇದೀಗ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಗುಲ್ಬರ್ಗಾದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಉಹಾಪೋಹಕ್ಕೆ ತೆರೆ ಬಿದ್ದಂತಾಯಿತು.

ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಈಗ ತಯಾರಿಸಲಾಗಿರುವ ಹೊಸ ಎಐಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಈ ಮೊದಲಿದ್ದ ಕರ್ನಾಟಕದ ಬಹಳಷ್ಟು ಮುಖಂಡರಿಗೆ ಜಾಗ ತೋರಿಸಲಾಗಿಲ್ಲ. ಈ ಹಿಂದೆ ಇದ್ದ ಬಹುತೇಕ ಮುಖಂಡರಿಗೆಲ್ಲಾ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷವು ತಾಕೀತು ಮಾಡಿರುವುದೇ ಇದಕ್ಕೆ ಕಾರಣವಾಗಿದೆ.

ಖರ್ಗೆ ಪಾಲಿಗೆ ಈಗ ವಹಿಸಲಾಗಿರುವ ಪಕ್ಷದ ಜವಾಬ್ದಾರಿ ಭಾರಿ ಸವಾಲಿನದ್ದೇ ಆಗಿದೆ. ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೆಲಸ ಅಷ್ಟೇನೂ ಸುಲಭದ ಮಾತಲ್ಲ. ಇದಕ್ಕಾಗಿ ಅವರು ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕಾಗಿದೆ ಎನ್ನುವ ಮಾತುಗಳು ಕೇಳಿ ಬರತೊಡಗಿವೆ.

(ದಟ್ಸ್ ಕನ್ನಡ ವಾರ್ತೆ)

ಸಿದ್ದರಾಮಯ್ಯ ಗೆ ಕಾಂಗ್ರೆಸ್ ಪ್ರತಿಪಕ್ಷದ ಗದ್ದುಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X