ಬಿಜೆಪಿಗೆ ನಿಚ್ಚಳ ಬಹುಮತ: ಸಿಎನ್ ಎನ್ ಐಬಿಎನ್
ಬೆಂಗಳೂರು, ಫೆ. 19 : ಚುನಾವಣೆ ಸಮೀಕ್ಷೆ ನಡೆಸಕೂಡದು ಎನ್ನುವ ಚುನಾವಣಾ ಆಯೋಗದ ಆದೇಶದ ಹೊರತಾಗಿಯೂ ರಾಷ್ಟ್ರೀಯ ಇಂಗ್ಲಿಷ್ ವಾಹಿನಿ ಸಿಎನ್ಎನ್ - ಐಬಿಎನ್ ಬರುವ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು ರಾಜ್ಯದಲ್ಲಿ ಬಿಜೆಪಿ ಮತ್ತೆ ತನ್ನ ಪ್ರಾಬಲ್ಯತೆ ಮೆರೆಯಲಿದ್ದು, ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ.
ರಸಗೊಬ್ಬರ ಗಲಾಟೆ, ಕೇಸರೀಕರಣ ಆರೋಪ, ಪಬ್ ಗಲಾಟೆ ಮುಂತಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿರಿಸುವ ಬಿಜೆಪಿ ಬರುವ ಲೋಕಸಭಾ ಚುನಾವಣೆಯಲ್ಲಿ ಶೇಕಡವಾರು ಹೆಚ್ಚು ಮತ ಗಳಿಸಲಿದೆ. ಕಾಂಗ್ರೆಸ್ ಮತ್ತು ಜನತಾದಳ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಹೇಳಿರುವ ವಾಹಿನಿ, ರಾಜ್ಯದ ಒಟ್ಟು 28 ಸ್ಥಾನಗಳ ಪೈಕಿ ಯಾವ ಪಕ್ಷ ಎಷ್ಟು ಸ್ಥಾನ ಪಡೆಯಬಹುದು ಎಂದು ಹೇಳಿಲ್ಲ. ವಾಹಿನಿಯ ಪ್ರಕಾರ ಬಿಜೆಪಿ ಶೇಕಡವಾರು 39, ಕಾಂಗ್ರೆಸ್ 35, ಜನತಾದಳ 15, ಬಿಎಸ್ಪಿ 2 ಹಾಗು ಇತರರು 9 ಮತ ಗಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಬಿಜೆಪಿ ಸರ್ಕಾರದ ಜನಪ್ರಿಯತೆ ತೃಪ್ತಿದಾಯಕವಾಗಿದ್ದು, ಉತ್ತಮ ಮುಖ್ಯಮಂತ್ರಿಗಳ ಸಮೀಕ್ಷೆಯಲ್ಲಿ ಈಗಲೂ ಕುಮಾರಸ್ವಾಮಿ ಮುಂದಿದ್ದಾರೆ. ಅವರ ಪರವಾಗಿ ಪ್ರತಿಶತ 72 ಮತ್ತು ಯಡಿಯೂರಪ್ಪ ಪರ ಪ್ರತಿಶತ 64ರಷ್ಟು ಜನ ಒಲವು ತೋರಿಸಿದ್ದಾರೆ ಎಂದು ವಾಹಿನಿ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಚುನಾವಣಾಪೂರ್ವ ಸಮೀಕ್ಷೆ ನಡೆಸಬೇಡಿ - ಆಯೋಗ
ಟಿವಿ ವಾರ್ತೆಯ ಮೇಲೆ ಕಡಿವಾಣ ಇಲ್ಲ: ಕೇಂದ್ರ











Click it and Unblock the Notifications