ಬೆಂಗಳೂರಿನಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಸ್ಥಾಪನೆ

ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಶಿಲಾನ್ಯಾಸ ಸಮಾರಂಭ ಉದ್ದೇಶಿಸಿ ಮಾತನಾಡಿದರು. ರೈತ ಮತ್ತು ಯೋಧ ದೇಶದ ಎರಡು ಕಣ್ಣುಗಳು. ಯುವಕರು, ಮಕ್ಕಳಲ್ಲಿ ವೀರ ಯೋಧರ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ ಎಂದರು.
ಶಿಲಾನ್ಯಾಸ ನೆರವೇರಿಸಿದ ರಾಜ್ಯಪಾಲ ರಾಮೇಶ್ವರ ಠಾಕೂರ್ ಮುಂಬೈ ಮತ್ತಿತರ ಕಡೆ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳು ಜನರನ್ನು ಆತಂಕಕ್ಕೆ ಈಡು ಮಾಡಿವೆ. ಇದಕ್ಕೆ ಪರಿಹಾರವೆಂದರೆ ನಿರಂತರ ಜಾಗೃತಿ. ನಮ್ಮನ್ನು ರಕ್ಷಿಸಿಸುತ್ತಿರುವ ಸೈನಿಕರಿಗೆ ನಾವು ಋಣಿಯಾಗಿರಬೇಕು ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications