37312ಮೈಸೂರುಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg37312ಮೈಸೂರುಮೈಸೂರು: ತುರ್ತು ಅಗತ್ಯಕ್ಕೆ ತಕ್ಷಣ ಮಾಹಿತಿ/news/2009/01/04/yeddyurappa-helpline-crisis-management-mysore.htmlಮೈಸೂರು, ಜ. 4 : ಮೈಸೂರು ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಸಹಾಯವಾಣಿ ಕೊಠಡಿಯೊಂದನ್ನು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಇಂದು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಎಲ್ಲ ಪ್ರದೇಶಗಳಿಂದ ತಕ್ಷಣ ಮಾಹಿತಿ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ. ಶೀಘ್ರಗತಿಯಿಂದ ನಿರ್ವಹಣೆ ಸಾಧ್ಯವಾಗುವುದು. ಈ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಸಹಯೋಗವಿದೆ. 33868http://kannada.oneindia.com/img/2009/01/04-helpline-mysore.jpg37312ಮೈಸೂರುರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ/movies/music/2009/01/06-manomurthy-launches-swarathma-band-debut-album.htmlಬೆಂಗಳೂರು ಮೂಲದ ಸ್ವರಾತ್ಮ ರಾಕ್/ಫ್ಯೂಷನ್ ಬ್ಯಾಂಡ್ ತನ್ನ ಮೊತ್ತಮೊದಲ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದೆ. ಸೋಮವಾರ ನಗರದ ಪ್ಯಾಲೇಸ್ ಮೈದಾನದ ಬಳಿಯ ಒಪಾಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಾಕ್ರಮದಲ್ಲಿ ಸ್ವರಾತ್ಮ ತಂಡದ ಅಲ್ಬಂ ಅನ್ನು ಅನಾವರಣಗೊಳಿದವರು ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ. ತಂಡಕ್ಕೆ ಶುಭ ಹಾರೈಸಲು ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿದ್ದರು.ಸ್ವರಾತ್ಮ 33919http://kannada.oneindia.com/img/2009/01/06-swarathma-mano-murthy1.jpg37312ಮೈಸೂರುಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg37312ಮೈಸೂರುಕಾಪನಹಳ್ಳಿ ಗವಿಮಠ ಸಂಭ್ರಮದ ಜಾತ್ರೆ/news/2009/02/11/gavimath-communal-harmony-kodihallli-pontiff.htmlಕೆ.ಆರ್.ಪೇಟೆ, ಫೆ. 11 : ತಾಲೂಕಿನ ಇತಿಹಾಸ ಪ್ರಸಿದ್ಧ ಕಾಪನಹಳ್ಳಿಯ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ರಥೋತ್ಸವವು ಸಡಗರ-ಸಂಭ್ರಮಗಳಿಂದ ನಡೆಯಿತು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಸಿಂಧಘಟ್ಟ ಅರವಿಂದ್ ಸಿದ್ದಲಿಂಗೇಶ್ವರರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ರಥೋತ್ಸವ ನಂತರ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು ನಾಡಿನಲ್ಲಿ ನಡೆಯುತ್ತಿರುವ ರಥೋತ್ಸವಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 34586http://kannada.oneindia.com/img/2009/02/11-kapanahalli-gavimata.jpg208257ಶೋಭಾ ಕರಂದ್ಲಾಜೆಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ/movies/headlines/2009/02/09-kannada-film-industry-amrutha-mahotsava.htmlಕನ್ನಡ ಚಿತ್ರೋದ್ಯಮ ಅಮೃತ ಮಹೋತ್ಸಕ್ಕೆ ಸಜ್ಜಾಗುತ್ತಿದೆ. ಮಾರ್ಚ್ 1ರಿಂದ 3ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಅಮೃತ ಮಹೋತ್ಸವ ಆಚರಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಅಮೃತ ಘಳಿಗೆಯನ್ನು ಅವಿಸ್ಮರಣೀಯವಾಗಿಸಲು ಕರ್ನಾಟಕ ಸರ್ಕಾರದೊಂದಿಗೆ ಉದಯ ವಾಹಿನಿ ಮತ್ತು ಸನ್ ಫೀಸ್ಟ್ ಸಂಸ್ಥೆಗಳು ಕೈ ಜೋಡಿಸುತ್ತಿವೆ ಎಂದು ಕೆಎಫ್ ಸಿಸಿ ಅಧ್ಯಕ್ಷೆ 34555http://kannada.oneindia.com/img/2009/02/09-jayamala-kfcc1e.jpg208257ಶೋಭಾ ಕರಂದ್ಲಾಜೆಗಣಿಗಾರಿಕೆಗೆ ಪರವಾನಗಿ ನೀಡಿದ್ದೇ ಕಾಂಗ್ರೆಸ್: ಬಿಎಸ್ ವೈ/news/2009/04/26/yeddyurappa-taunts-against-congress-in-mysuru.htmlಮೈಸೂರು, ಏ.26: ಲೋಕಸಭೆ ಚುನಾವಣೆಗಳು ಮುಗಿದ ಬಳಿಕ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನಿರ್ನಾಮವಾಗಲಿದೆ. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ನ್ನು ವಿಸರ್ಜಿಸಬೇಕು ಎಂದಿದ್ದ ಮಹಾತ್ಮಾಗಾಂಧಿ ಅವರ ಕನಸು ಈ ಚುನಾವಣೆಗಳ ನಂತರ ನನಸಾಗಲಿದೆ ಎಂದು ಮುಖ್ಯಮಂತಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ.ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಪರ ಚುನಾವಣಾ ಪ್ರಚಾರ ನಡೆಸಲು ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಇಲ್ಲಿನ 36222http://kannada.oneindia.com/img/2009/04/26-yediyurappa2.jpg208257ಶೋಭಾ ಕರಂದ್ಲಾಜೆಕೋಕಾ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ /news/2009/05/08/karnataka-cabinet-approves-amendments-to-kcoca-act.htmlಬೆಂಗಳೂರು, ಮೇ. 8 : ಇತ್ತೀಚೆಗೆ ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಜಾರಿಗೆ ತರಲು ನಿರ್ಧರಿಸಲಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸರ್ವಾನುಮತದ ಒಪ್ಪಿಗೆ ದೊರೆತಿದ್ದು, ಕೋಕಾ ಕಾಯ್ದೆಯನ್ನು ಜಾರಿಗೆ ತರಲು ಶೀಘ್ರದಲ್ಲಿ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 36495http://kannada.oneindia.com/img/2009/05/08-shobha-karandlaje1e.jpg208257ಶೋಭಾ ಕರಂದ್ಲಾಜೆಮೈಸೂರು ಉಸ್ತುವಾರಿ ಒಲ್ಲೆ ಎಂದ ಶೋಭಾ /news/2009/06/07/minister-shobha-offers-to-step-down-mysore.htmlಬೆಂಗಳೂರು, ಜೂ. 7 : ಸರಕಾರದೊಳಗೆ ಎದ್ದಿರುವ ಆಂತರಿಕ ಭಿನ್ನಮತಕ್ಕೆ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಶೋಭಾ ಅವರ ಮಾತನ್ನು ನಿರಾಕರಿಸಿದ್ದು, ಶೋಭಾ ಅವರನ್ನೇ ಮುಂದುವರೆಸಿ ಶಾಸಕ ಎಸ್ ರಾಮದಾಸ್ ಸಿಎಂ 37176http://kannada.oneindia.com/img/2009/06/07-shobha-karandlaje3e.jpg208257ಶೋಭಾ ಕರಂದ್ಲಾಜೆಮೈಸೂರಲ್ಲಿ ಗಂಡಸರಿಲ್ವೆ ವಿಶ್ವನಾಥ್ ಪ್ರಶ್ನೆ/news/2009/06/08/vishwanath-slams-mysuru-incharge-minister.htmlಮೈಸೂರು, ಜೂ. 8 : ಮೈಸೂರಿನ ಆಡಳಿತ ನಡೆಸಲು ಗಂಡಸರು ಯಾರೂ ಇಲ್ವಾ ? ಹೀಗೆ ರಾಜ್ಯ ಸರಕಾರಕ್ಕೆ ಖಾರವಾಗಿ ಪ್ರಶ್ನಿಸಿದವರು ಮೈಸೂರು ಸಂಸದ ಎಚ್ ವಿಶ್ವನಾಥ್ ಅವರು. ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಕಪ್ಪ ಸಾಕು ಅನ್ನಿಸಿದೆ. ಮೇಡಂ ಬೇಡ ಅಂದರೆ ಸಿಎಂ ಇರಲೇಬೇಕು ಎನ್ನುತ್ತಿದ್ದಾರೆ. ಏಕೆ ಮೈಸೂರಿನಲ್ಲಿ ಆಡಳಿತ ನಡೆಸುವ 37181http://kannada.oneindia.com/img/2009/06/08-vishwanath-h2.jpg212290ಪ್ರವಾಸೋದ್ಯಮಮುಗಿಯಿತು ಬಿಸಿಲುಮಳೆ ಅಕ್ಷರಜಾತ್ರೆಯಲ್ಲಿ ಧೂಳಹೊಳೆ/literature/sammelana/chitradurga/2009/0207-yawning-kavigoshthi-and-yawning-tourism.htmlಕೊನೆಯ ದಿನದ ಸಮ್ಮೇಳನ ವಾದ್ಯಗೋಷ್ಠಿಯೊಂದಿಗೆ ಆರಂಭ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿದ್ದರು. ಆದರೆ ಬೇಗ ಮುಗಿದು ಹೋಗಿ ಮತ್ತೆ ಇನ್ನಷ್ಟು ಜನರ ಸರತಿ ಹೆಚ್ಚುತ್ತಿದ್ದಂತೆ ಮತ್ತೆ ತಿಂಡಿಯ ಭರವಸೆ. ಆದರೆ ಹತ್ತು ರು. ನೀಡಿ ಇಸ್ಕಾನ್ ಅವರು ನೀಡುತ್ತಿರುವ ಪುಳಿಯೋಗರೆ, ಬಿಸಿಬೇಳೆ ಬಾತ್, ಕೇಸರಿಬಾತ್ ಖಾಲಿ ಮಾಡಲು ಜನಸಂದಣಿ ಹೆಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಂಡಕ್ಕಿ, ಖಾರ ರೊಟ್ಟಿ, 34529http://kannada.oneindia.com/img/2009/02/07-chitradurga-tourism1.jpg212290ಪ್ರವಾಸೋದ್ಯಮನೋಡಬನ್ನಿ ಉಳ್ಳಾಲದ ಸೋಮೇಶ್ವರ ಬೀಚ್/cj/chidambar-baikampady/2009/0601-ullal-someshwara-beach-historical-back-ground.htmlಮಂಗಳೂರಿನಿಂದ ಸುಮಾರು ಹದಿನೈದು ಕಿ.ಮೀ ದೂರದಲ್ಲಿರುವ ಉಳ್ಳಾಲದ ಸೋಮೇಶ್ವರ ಬೀಚ್ ಕರಾವಳಿಯ ರಮ್ಯ ತಾಣಗಳಲ್ಲಿ ಒಂದು. ಇಲ್ಲಿರುವ ಸೋಮನಾಥ ದೇವಾಲಯಕ್ಕೆ ದೊಡ್ಡ ಇತಿಹಾಸವಿದೆ. ಈ ದೇವಾಲಯದ ಹಿಂಭಾಗದಲ್ಲಿರುವ ಬೀಚ್ ಕರಾವಳಿಯಲ್ಲಿ ನೀವು ಕಾಣದಿದ್ದ ಸುಂದರ ದೃಶ್ಯಗಳನ್ನು ಕಾಣುವಿರಿ. ಕಲ್ಲು ಬಂಡೆಗಳಿಂದ ಆವರಿಸಿರುವ ಈ ಬೀಚ್ ದೃಶ್ಯಗಳನ್ನು ನೀವು ಹೆಚ್ಚಾಗಿ ಸಿನಿಮಾಗಳಲ್ಲಿ ಕಂಡಿರುವಿರಿ. ಆದರೆ ಈ ಸುಂದರ ನಯನ 37022http://kannada.oneindia.com/img/2009/06/01-ullal-beach1.jpg212290ಪ್ರವಾಸೋದ್ಯಮಪಟ್ಟಾಯದ ಜಗಮಗಿಸುವ ಕಾಲುದಾರಿ/cj/chidambar-baikampady/2009/0919-walk-on-walking-street-pattaya-thailand.htmlಕರ್ನಾಟಕದ ಬೆಂಗಳೂರಿನಿಂದ ಪ್ರತೀದಿನ ರಾತ್ರಿ 12.20ಕ್ಕೆ ಬ್ಯಾಂಕಾಕ್‌ಗೆ ಹೋಗುವ ವಿಮಾನದಲ್ಲಿ 330 ಮಂದಿ ಇರುತ್ತಾರೆ. ಇವರಲ್ಲಿ ಹೆಚ್ಚಿನವರು ಬ್ಯಾಂಕಾಕ್‌ನಲ್ಲಿ ಇಳಿದು ಕಾರನ್ನೇರಿ ನೇರವಾಗಿ ಹೋಗುವುದೇ ಪಟ್ಟಾಯಕ್ಕೆ. ರಾತ್ರಿ ಹತ್ತುಗಂಟೆಗೆ ಪಟ್ಟಾಯದ ವಾಕಿಂಗ್ ಸ್ಟ್ರೀಟ್‌ಗೆ ಹೋದರೆ ಸಾಕು ಒಂದಷ್ಟುಮಂದಿ ಕನ್ನಡಿಗರು ಸಿಗುತ್ತಾರೆ, ಇದು ಪಟ್ಟಾಯದಲ್ಲಿ ಕರ್ನಾಟಕ ಪ್ರವಾಸಿಗರಿಗೆ ದೊರಕುವ ಇನ್ನೊಂದು ಆಕರ್ಷಣೆ!* ಚಿದಂಬರ ಬೈಕಂಪಾಡಿ, ಮಂಗಳೂರುಜಗತ್ತಿನಲ್ಲೇ ಪ್ರವಾಸಿಗರ ಸ್ವರ್ಗವೆಂದರೆ 39268http://kannada.oneindia.com/img/2009/09/19-pattaya-walking-street1.jpg212290ಪ್ರವಾಸೋದ್ಯಮಥೈಲ್ಯಾಂಡ್ :ಸುವರ್ಣಭೂಮಿ, ಸ್ವಚ್ಛ ಭೂಮಿ/cj/chidambar-baikampady/2009/1002-thailand-is-magnet-for-travellers-world-over.htmlಥೈಲ್ಯಾಂಡ್ ಜಗತ್ತಿನ ಪುಟ್ಟ ದ್ವೀಪರಾಷ್ಟ್ರಗಳಲ್ಲಿ ಒಂದು. ಈ ದೇಶ ಮುನ್ನಡೆಯುತ್ತಿರುವುದು ಮತ್ತು ಇಲ್ಲಿನ ಜನರು ಬದುಕುತ್ತಿರುವುದು ಕೇವಲ ಪ್ರವಾಸೋದ್ಯಮದಿಂದ ಎಂದರೆ ನಿಜಕ್ಕೂ ಯಾರಿಗೇ ಆದರೂ ಅಚ್ಚರಿ ಆದೀತು, ಆದರೆ ವಾಸ್ತವ ಸತ್ಯ. ಪ್ರವಾಸೊದ್ಯಮವನ್ನೇ ನಂಬಿರುವ ಇಲ್ಲಿನ ಸರ್ಕಾರದ ಮೊದಲ ಆದ್ಯತೆ ಕೂಡಾ ಪ್ರವಾಸಿಗರಿಗೆ. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ತೊಂದರೆ ಆಗಬಾರದು ಎನ್ನುವ ಕಟ್ಟಪ್ಪಣೆ ಅಲ್ಲಿನ ಜನರಿಗಿದೆಯಂತೆ, ಆದ್ದರಿಂದಲೇ 39477http://kannada.oneindia.com/img/2009/10/02-thailand-police1.jpgnews"> ಮೈಸೂರು ನಗರದ ಐದು ಕಡೆ ಸಬ್‌ವೇ: ಶೋಭಾ | Mysore City to get 5 Sub ways soon : Minister Shobha - ಮೈಸೂರು ನಗರದ ಐದು ಕಡೆ ಸಬ್‌ವೇ: ಶೋಭಾ - Kannada Oneindia

ಮೈಸೂರು ನಗರದ ಐದು ಕಡೆ ಸಬ್‌ವೇ: ಶೋಭಾ

ಮೈಸೂರು, ಫೆ.4: ಮೈಸೂರು ನಗರದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯ ಬಾಟಾ ಮುಂಭಾಗ ಸೇರಿದಂತೆ ಐದು ಕಡೆ ತಲಾ ಒಂದು ನೂರು ಲಕ್ಷ ವೆಚ್ಚದಲ್ಲಿ ಸಬ್‌ವೇ ನಿರ್ಮಿಸಲಿದ್ದು , ಈಗಾಗಲೇ ಟೆಂಡರ್ ಕರೆಯಲಾಗಿದೆ. 20 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು ನಂತರದ ಹತ್ತು ದಿನಗಳಲ್ಲಿ ಕಾಮಗಾರಿ ಮುಗಿಯುವ ಸೂಚನೆ ಇದೆ ಎಂದು ಮೈಸೂರು ಜಿಲ್ಲಾ ಉಸ್ತವಾರಿ ಸಚಿವೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಅವರು ಇಂದು ಮೈಸೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಡನೆ ಮಾತನಾಡುತ್ತಿದ್ದರು.

ಫೆ.13 ರಂದು ಮೈಸೂರಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿಗಳು ಮೇಲ್ಕಂಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವರು. ಸುತ್ತಮುತ್ತಲ ಪ್ರಮುಖ ಜಿಲ್ಲೆ ಪಟ್ಟಣಗಳಿಗೆ ಕೇಂದ್ರ ಬಿಂದುವಾದ ಮೈಸೂರು ಕೆ.ಆರ್. ಆಸ್ಪತ್ರೆ ನವೀಕರಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮೂರು ಕೋಟಿ ವೆಚ್ಚ ಮಾಡಲಾಗಿದೆ. ಅಲ್ಲದೆ ಹೊರರೋಗಿಗಳ ವಿಭಾಗ ಕೂಡ ನವೀಕರಣಗೊಂಡಿದ್ದು , ಕಂಟ್ರೋಲ್ ರೂಂ ಸುಸಜ್ಜಿತವಾಗಿದ್ದು, ಇವುಗಳನ್ನು ಮುಖ್ಯಮಂತ್ರಿಗಳು ಉಸ್ಘಾಟಿಸುವರು. ಇದಲ್ಲದೆ ಕೆ.ಆರ್. ಆಸ್ಪತ್ರೆಯಲ್ಲಿ ಕಿಡ್ನಿ ಕೇಂದ್ರ , ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಹಾಗೂ ಕ್ಯಾನ್ಸರ್ ಆಸ್ಪತ್ರೆಗಳ ಶಾಖೆ ತೆರೆಯುವ ಪ್ರಯತ್ನ ನಡೆದಿದೆ. ಬಜೆಟ್ ಅವಲಂಬಿಸಿ ಹಂತ ಹಂತವಾಗಿ ಇವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವೆ ಕರಂದ್ಲಾಜೆ ಹೇಳಿದರು.

ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರ ಜೊತೆ ಮಾತುಕತೆ ಯಶಸ್ವಿಯಾಗಿದ್ದು ಅವರು ದರ ಇಳಿಸಲು ಒಪ್ಪಿದ್ದಾರೆ. ನರ್ಮ್ ಯೋಜನೆ 2012ಕ್ಕೆ ಪೂರ್ಣಗೊಳಿಸಬೇಕಿದೆ. ವರ್ತುಲ ರಸ್ತೆ ನಿರ್ಮಾಣ ನ್ಯಾಯಾಲಯದಲ್ಲಿದ್ದು , ತ್ವರಿತ ಇತ್ಯರ್ಥಕ್ಕೆ ಖುದ್ದಾಗಿ ಹಾಜರಾಗಿ ವಾದ ಮಂಡಿಸಲು ಅಡ್ವೋಕೇಟ್ ಜನರಲ್ ಅವರಲ್ಲಿ ಕೋರಲಾಗಿದೆ. ಪಂಚಲಿಂಗ ದರ್ಶನದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ - ಮಹದೇಶ್ವರ ಬೆಟ್ಟದ 24.3 ಕಿ.ಮೀ.ಯಿಂದ 39.4ರವರೆಗೆ, 41.3 ಕಿ.ಮೀ. ಯಿಂದ 48 ಕಿ.ಮೀ.ವರೆಗೆ ಒಟ್ಟು 22 ಕಿಲೋ ಮೀಟರ್ ರಸ್ತೆ ಕಾಮಗಾರಿ ಕೈಗೊಳ್ಳುತ್ತಿದ್ದು 20 ಕೋಟಿ ರೂ ವೆಚ್ಚ ಮಾಡಲಾಗುವುದು. ಅಲ್ಲದೆ ಮಾದಾಪುರ-ತಲಕಾಡು-ಸರಗೂರು ಟ್ಯಾಂಕ್ ಪೋಸ್ಟ್ ನಡುವಿನ 0-8 ಕಿ.ಮೀ. ರಸ್ತೆಗೆ ಕಾಮಗಾರಿ ಟೆಂಡರ್ ಕರೆಯಲಾಗಿದ್ದು, 10 ಕೋಟಿ ರೂ ವೆಚ್ಚ ಮಾಡಲಾಗುವುದು.

ಮೈಸೂರು ನಗರದಲ್ಲಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ನಿರ್ಮಿಸಲು 19 ಎಕರೆ ಜಮೀನು ಮಂಜೂರು ಮಾಡಲಾಗಿದೆ. ನಗರ ಬಸ್ ನಿಲ್ದಾಣವನ್ನು ದಸರಾ ವಸ್ತುಪ್ರದರ್ಶನ ಆವರಣದ ಮುಂದಿನ ಮೈದಾನಕ್ಕೆ ಎರಡು ದಿನಗಳಲ್ಲಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ನಾಗರಹೊಳೆ ಅಭಯಾರಣ್ಯದಿಂದ ಹೊರಬರಲು 10 ಗಿರಿಜನ ಕುಟುಂಬ ಮುಂದೆ ಬಂದಿವೆ. ಅವರುಗಳಿಗೆ ನೀಡುವ ಸೌಕರ್ಯಗಳನ್ನು ಆ ಹತ್ತು ಕುಟುಂಬಗಳು ವಿವರಿಸಿ ಉಳಿಕೆ 300 ಕುಟುಂಬಗಳನ್ನು ಕಾಡಿನಿಂದ ಹೊರಕ್ಕೆ ಸ್ಥಳಾಂತರಿಸಲು ಮನ:ಪರಿವರ್ತನೆಗೆ ಯತ್ನಿಸಲು ಉದ್ದೇಶಿಸಲಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸತ್ ಸದಸ್ಯ ಸಿ.ಹೆಚ್. ವಿಜಯಶಂಕರ್, ವಿಧಾನ ಪರಿಷತ್ ಸದಸ್ಯರಾದ ಸಿದ್ಧರಾಜು ಹಾಗೂ ತೋಂಟದಾರ್ಯ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)
ಫೆಬ್ರವರಿ ಅಂತ್ಯಕ್ಕೆ ರಾಜ್ಯ ಬಜೆಟ್ : ಯಡಿಯೂರಪ್ಪ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+