ರಾಜು ವಿಚಾರಣೆ, ಸೇಬಿ ಅರ್ಜಿ ಪುರಸ್ಕರಿಸಿದ ಕೋರ್ಟ್
ನವದೆಹಲಿ, ಫೆ. 3 : ಸತ್ಯಂ ಕಂಪನಿಯ ಹಗರಣಕ್ಕೆ ಸಂಬಂಧಿಸಿದಂತೆ ಏಳು ಸಾವಿರ ಕೋಟಿ ರುಪಾಯಿಗಳನ್ನು ಗೋಲ್ ಮಾಲ್ ಮಾಡಿರುವ ಸತ್ಯಂ ಮಾಜಿ ಮುಖ್ಯಸ್ಥ ರಾಮಲಿಂಗರಾಜು ಅವರನ್ನು ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಸೆಬಿ (ಮಾರುಕಟ್ಟೆ ನಿಯಂತ್ರಣ ಸಂಸ್ಥೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ಪುರಸ್ಕರಿಸಿದೆ. ಸತ್ಯಂ ಹಗರಣ ಹೊರಬಂದಾಗಿನಿಂದಲೂ ರಾಜು ಅವರ ವಿಚಾರಣೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಭಾರಿ ಪ್ರಯತ್ನಪಟ್ಟಿದ್ದ ಸೆಬಿಗೆ ಕೊನೆಗೂ ಜಯ ದೊರೆತಂತಾಗಿದೆ.
ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ನೇತೃತ್ವದ ಏಕ ಸದಸ್ಯ ಪೀಠ ಸತ್ಯಂ ಮಾಜಿ ಮುಖ್ಯಸ್ಥ ರಾಮಲಿಂಗರಾಜು ಹಾಗೂ ಅವರ ಸಹೋದರ ರಾಮರಾಜು ಅವರನ್ನು ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಅವಕಾಶ ನೀಡಿದೆ. ರಾಜು ವಿಚಾರಣೆಗೆ ಅವಕಾಶ ನೀಡಬೇಕು ಎಂದು ಸೋಮವಾರ ಸೆಬಿ ಸುಪ್ರಿಂಕ್ರೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ಪೊಲೀಸರ ಸಹಾಯದೊಂದಿಗೆ ನಿಗದಿತ ಕಾಲಾವಕಾಶದೊಳಗೆ ವಿಚಾರಣೆ ನಡೆಸಬಹುದು ಎಂದು ಆದೇಶ ನೀಡಿದೆ. ರಾಮಲಿಂಗರಾಜು ಹಾಗೂ ರಾಮರಾಜು ಅವರ ವಿಚಾರಣೆಗೆ ಕೋರಿ ಸೆಬಿ ಸಲ್ಲಿಸಿದ್ದ ಅರ್ಜಿಯನ್ನು ಹೈದರಾಬಾದ್ ಹೈಕೋರ್ಟ್ ಫೆಬ್ರುವರಿ 9ಕ್ಕೆ ಮುಂದೂಡಿತ್ತು.
(ದಟ್ಸ್ ಕನ್ನಡ ವಾರ್ತೆ)
ರಾಜು ಪಂಗಡಕ್ಕೆ ಜಾಮೀನು ಸಾಧ್ಯವಿಲ್ಲ ;ಕೋರ್ಟ್












Click it and Unblock the Notifications