ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕಲ ಧರ್ಮಗಳನ್ನು ಪ್ರೀತಿಸಿ, ಶಿವಕುಮಾರ ಶ್ರೀಗಳು

By Staff
|
Google Oneindia Kannada News

siddaganga seer birthday celebration in tumkur
ತುಮಕೂರು, ಫೆ. 3 : ಇಂದಿನ ರಾಜಕೀಯ ನಾಯಕರಲ್ಲಿ ಬೌದ್ಧಿಕ ದಾರಿದ್ರ್ಯ ಎದ್ದು ಕಾಣುತ್ತಿದ್ದು, ದೇಶಪ್ರೇಮಕ್ಕಿಂತ ಸ್ವಾರ್ಥ ಪ್ರೀತಿಯೇ ಮುಖ್ಯವಾಗಿರುವುದು ವಿಷಾದನೀಯ. ಇದರ ಜತೆಗೆ ಜಾತೀಯತೆ, ಭಯೋತ್ಪಾದನೆ ಭೀತಿಯಿಂದ ನರಳುವಂತಾಗಿರುವುದು ಆತಂಕಕಾರಿ ಎಂದು ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ಧಗಂಗಾ ಮಠಾಧೀಶ ಡಾ ಶಿವಕುಮಾರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ ಕ್ಷೇತ್ರದಲ್ಲಿ ತಮ್ಮ ಜನ್ಮಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ದೇಶದ ಸ್ಥಿತಿ ಇಂದು ಹೇಳಿಕೊಳ್ಳುವಂತಿಲ್ಲ. ಕಾರಣಗಳು ಅನೇಕ ಇವೆ. ಗಾಂಧೀಜಿಯವರ ಕನಸಿನ ದೇಶ ಇದಾಗಲಿಲ್ಲ ಎಂದು ಅತೀವ ಬೇಸರ ವ್ಯಕ್ತಪಡಿಸಿದ ಶ್ರೀಗಳು, ಶ್ರಮ ಸಂಸ್ಕೃತಿ ಮರೆತಿದ್ದು, ಅಲ್ಪಶ್ರಮ, ಅಧಿಕ ಲಾಭದಾಸೆ ಎಲ್ಲೆಲ್ಲೂ ಎದ್ದು ಕಾಣುತ್ತಿದೆ. ಬಸವಾದಿ ಶರಣರು ಆಚರಿಸಿ ತೋರಿಸಿದ ಕಾಯಕ-ದಾಸೋಹ ತತ್ವಗಳಿಂದ ದೂರ ಸರಿದಿದ್ದೇವೆ ಎಂದು ವಿಷಾದಿಸಿದರು.

ವಿಜ್ಞಾನವೇನೋ ಅದ್ಭುತವಾಗಿ ಬೆಳೆದಿದೆ. ಅದರೆ, ಅದು ವಿನಾಶಮುಖಿಯಾಗಿತ್ತಿರುವುದು ಶುಭ ಲಕ್ಷಣವಲ್ಲ. ಅದು ವಿಕಾಸಮುಖಿಯಾಗಿ ನಡೆಯಬೇಕಾಗಿದೆ ಎಂದು ಕಿವಿ ಮಾತು ಹೇಳಿದರು. ಎಲ್ಲ ಧರ್ಮಗಳ ಗುರಿಯೂ ಒಂದೇ. ನದಿಗಳೆಲ್ಲ ಹರಿದು ಸೇರುವುದು ಸಮುದ್ರವನ್ನು, ನಮಗಿಂದು ಬೇಕಾಗಿರುವುದು ಆ ಧರ್ಮ, ಈ ಧರ್ಮಗಳಲ್ಲ, ಮಾನವ ಧರ್ಮ, ಸಕಲ ಧರ್ಮದವರಿಗೆ ಲೇಸನ್ನು ಬಯಸುವ ಪರಮಧರ್ಮ ಎಂದು ಶ್ರೀಗಳು ನುಡಿದರು.

(ದಟ್ಸ್ ಕನ್ನಡ ವಾರ್ತೆ)
ಶಿವಕುಮಾರ ಸ್ವಾಮಿಗಳ ಜನ್ಮಶತಮಾನೋತ್ಸವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X