ಈ ಸ್ಪರ್ಶ 'ಪ್ರತ್ಯೇಕವಾಗಿ ಮಹಿಳೆಯರಿಗೆ' ಮಾತ್ರ
ಬೆಂಗಳೂರು, ಜನವರಿ 30: ಬೆಂಗಳೂರಿನಲ್ಲಿ ಇತ್ತೀಚೆಗೆ ಕಿಮಯಾ ಫ್ಯಾಷನ್ ಮಳಿಗೆ ಆರಂಭವಾದ ಬೆನ್ನಲ್ಲೇ ಕಮರ್ಶಿಯಲ್ ಸ್ಟ್ರೀಟ್‌ನ ಬಳಿಯ ಕಾಮರಾಜ್ ರಸ್ತೆಯಲ್ಲಿ ವೈವಿಧ್ಯಮಯ ವಿನ್ಯಾಸ ಹೊತ್ತ ಮದುವೆ ಸೀರೆಗಳ ಮಳಿಗೆ ಸ್ಪರ್ಶ್ ಗುರುವಾರ ಆರಂಭವಾಗಿದೆ. ಸ್ಪರ್ಶ್ ವಿನ್ಯಾಸದ ಮನಮೋಹಕ ಉಡುಗೆಯನ್ನು ಧರಿಸಿದ ಬೆಡಗಿಯರು 'ಪ್ರತ್ಯೇಕವಾಗಿ ಮಹಿಳೆಯರಿಗೆ' ಎಂಬ ಧ್ಯೇಯದೊಂದಿಗೆ ಕ್ಯಾಟ್ ವಾಕ್ ಮಾಡಿ ನೆರೆದವರ ಗಮನ ಸೆಳೆದರು.

ಸ್ಪರ್ಶ್ ವಿನ್ಯಾಸ ಮತ್ತು ಮದುವೆಯ ಸೀರೆಗಳಿಗಾಗಿರುವ ಪ್ರತ್ಯೇಕ ಮಳಿಗೆಯಾಗಿದ್ದು, ತಮಗೆ ಉತ್ತಮವಾದುದ್ದೇ ಬೇಕೆಂದು ಬಯಸುವವರಿಗೆ ಪರಿಹಾರವನ್ನೊದಗಿಸಲಿದೆ. ಸರ್ವಕಾಲಿಕ ಉಡುಗೆಗಳನ್ನು ಧರಿಸಿ ಬೇಸರವೆನ್ನಿಸಿದವರಿಗೆ, ಪಾಶ್ಚಾತ್ಯ ಮತ್ತು ದೇಶಿಯ ವಸ್ತ್ರಗಳು ಸ್ಪರ್ಶ್‌ನಲ್ಲಿ ಲಭಿಸಲಿದೆ. ಡಿಸೈನರ್ ವೇರ್ ಎಲ್ಲಾ ಸಂದರ್ಭಗಳಲ್ಲೂ, ಎಲ್ಲಾ ವಯಸ್ಸಿನವರೂ ಧರಿಸಬಹುದ್ದಾಗಿದ್ದು ಪತ್ನಿಯರು ತಮ್ಮ ಪತಿಯಂದಿರನ್ನು ಸೆಳೆಯಲು ಒಂದು ಅಸ್ತ್ರವಾಗಲಿದೆ ಎಂದು ಆನಂದ್ ಹೇಳಿದರು.
'ಸಿಲ್ಕ್, ಭರ್ಜರಿ ಎಂಬ್ರಾಯಿಡರಿ, ಪಾರ್ಟಿ ವೇರ್‌ನಿಂದ ಕ್ಯಾಶುಯಲ್ ಸೀರೆ ತನಕ ಎಲ್ಲಾ ಮಾದರಿಯ ವಸ್ತ್ರಗಳು ಸ್ಪರ್ಶ್ ನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲದೆ ಮಹಿಳೆಯರಿಗಾಗಿಯೇ ಹೊಸ ವಿನ್ಯಾಸದ ಪರಿಸರ ಸ್ನೇಹಿ ಬ್ಯಾಗ್‌ಗಳು, ಆಭರಣ, ಫುಟ್‌ವೇರ್‌ಗಳ ಸಂಗ್ರಹವೂ ಸ್ಪರ್ಶ್‌ನಲ್ಲಿದೆ. ಅಪರೂಪದ, ಎಲ್ಲರೂ ಬಯಸುವ, ಉತ್ತಮ ಗುಣಮಟ್ಟದ, ಸ್ಪರ್ಧಾತ್ಮಕ ಹಾಗೂ ಆಕರ್ಷಕ ಬೆಲೆಗಳುಳ್ಳ ಉತ್ಪನ್ನಗಳು ಸ್ಪರ್ಶ್‌ನಲ್ಲಿ ಲಭ್ಯ'ಎಂದು ಸ್ಪರ್ಶ್‌ನ ಇನ್ನೊರ್ವ ಮಾಲಿಕ ಸಚಿನ್ ಕುಮಾರ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಇತ್ತ ಕೂಡ ಕಣ್ಣಾಯಿಸಿ:ಇದು ಮಹಿಳೆಯರಿಗೆ ಮಾತ್ರ












Click it and Unblock the Notifications