ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ವೈಮಾನಿಕದಾಳಿ ಸಂಭವ, ಬಿಗಿ ಭದ್ರತೆ

By Staff
|
Google Oneindia Kannada News

ನವದೆಹಲಿ, ಜ. 25 : ಗಣರಾಜ್ಯೋತ್ಸವ ದಿನದಂದು ಭಯೋತ್ಪಾದಕರು ವೈಮಾನಿಕ ದಾಳಿ ನಡೆಸುವ ಸಂಭವವಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಗರದಾದ್ಯಂತ ಭಾರೀ ಕಟ್ಟೆಚ್ಚರ ಏರ್ಪಡಿಸಿದೆ. ನವದೆಹಲಿ ಹಾಗೂ ಚಂಡೀಗಡ ನಗರಗಳ ಮೇಲೆ ಎರಡು ದಿನಗಳ ಕಾಲ ಹೆಲಿಕಾಪ್ಟರ್ ಹಾರಾಟವನ್ನು ನಿಷೇಧಗೊಳಿಸಲಾಗಿದೆ.

ಹೆಲಿಕಾಪ್ಟರ್ ಗಳನ್ನು ಅವಶ್ಯವಾಗಿ ಹಾರಾಟ ಮಾಡಬೇಕಾದ ಸಂದರ್ಭ ಎದುರಾದಲ್ಲಿ ಭದ್ರತಾ ಸಿಬ್ಬಂದಿಯ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಎಂದು ವೈಮಾನಿಕ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಗಣರಾಜ್ಯೋತ್ಸವ ಅಂಗವಾಗಿ ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಅಹಿತಕರ ಘಟನೆಗೆ ಅಸ್ಪದವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ. ದೆಹಲಿ ನಗರವೊಂದರಲ್ಲಿ ಸುಮಾರು 198 ದೆಹಲಿ ಪೊಲೀಸ್ ಪಡೆ, 56 ಅರೆ ಸೇನಾಪಡೆ ತುಕಡಿಗಳನ್ನು ಗಸ್ತು ನಿಯೋಜಿಸಲಾಗಿದೆ.

ಬಾಂಗ್ಲಾದೇಶದ ಕಡೆಯಿಂದ ಅಸ್ಸಾಂ ಮೂಲಕ ದೆಹಲಿ ನಗರದೊಳಗೆ ಆರು ಉಗ್ರರು ನುಸುಳಿದ್ದಾರೆ. ವೈಮಾನಿಕ ದಾಳಿ ನಡೆಸುವ ಸಂಭವವಿದ್ದು, ಸೂಕ್ತ ರಕ್ಷಣೆಯನ್ನು ನಿಯೋಜನೆಗೆ ಗುಪ್ತಚರ ಇಲಾಖೆ ತಿಳಿಸಿತ್ತು. ದೇಶದ ಗಡಿ ಪ್ರದೇಶದಲ್ಲಿ ಭಾರಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರೂ ಉಗ್ರರು ಉಪಾಯದ ಮೂಲಕ ಭಾರತದೊಳಗೆ ಕಾಲಿಸಿದ್ದಾರೆ. ಯಾವುದೇ ಕಾರಣಕ್ಕೂ ಕೈಕಟ್ಟಿ ಕುಳಿತುಕೊಳ್ಳಬೇಡಿ ಎಂದು ಗಡಿ ರಾಜ್ಯಗಳ ಪೊಲೀಸ್ ಇಲಾಖೆಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಮಣಿಪುರ್ ಮತ್ತು ತ್ರಿಪುರದಲ್ಲಿಯೂ ಉಲ್ಫಾ ಸೇರಿ ನಾಲ್ಕು ವಿಧ್ವಂಸಕ ಸಂಘಟನೆಗಳು ಗಣರಾಜ್ಯೋತ್ಸವವನ್ನು ಬಹಿಷ್ಕರಿಸಿದ್ದು, ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಈ ರಾಜ್ಯದಲ್ಲಿೂ ಭಾರಿ ಕಟ್ಟೆಚ್ಚರ ನಿಯೋಜಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಮಾಣಿಕ್ ಷಾ ಮೈದಾನದ ಪ್ರವೇಶ ಮಾಹಿತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X