ಮನಮೋಹನ್ ಸಿಂಗ್ ಗೆ ಬೈಪಾಸ್ ಶಸ್ತ್ರಚಿಕಿತ್ಸೆ ಆರಂಭ

ನವದೆಹಲಿ, ಜ.24: ಪ್ರಧಾನಿ ಮನಮೋಹನ್ ಸಿಂಗ್(76) ಅವರಿಗೆ ಬೈಪಾಸ್ ಗ್ರಾಫ್ಟ್ ಶಸ್ತ್ರ ಚಿಕಿತ್ಸೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಏಮ್ಸ್) ಶನಿವಾರ (ಜ.24) ಬೆಳಗ್ಗೆಯಿಂದ ಆರಂಭವಾಗಿದೆ. 1991ರಲ್ಲಿ ಅವರ ಹೃದಯಕ್ಕೆ ಜೋಡಿಸಿದ್ದ ಹಳೆ ಗ್ರಾಫ್ಟ್ ಗಳನ್ನು ತೆಗೆದು ಹೊಸ ಗ್ರಾಫ್ಟ್ ಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಇಂದು ಜೋಡಿಸಲಾಗುತ್ತದೆ. ಏಮ್ಸ್ ಮತ್ತು ಮುಂಬೈ ಏಷ್ಯನ್ ಹಾರ್ಟ್ ಸಂಸ್ಥೆಯ 11 ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ. ಖ್ಯಾತ ಹೃದಯ ಚಿಕಿತ್ಸಾ ತಜ್ಞ ಡಾ.ಪಿ.ಕೆ.ಪಾಂಡಾ ಈ ತಂಡದ ನೇತೃತ್ವ ವಹಿಸಿದ್ದಾರೆ.

ಇಂದು ಮುಂಜಾನೆ 7 ಗಂಟೆಗೆ ಆರಂಭವಾದ ಶಸ್ತ್ರ ಚಿಕಿತ್ಸೆ ಹಲವಾರು ಗಂಟೆಗಳ ಬಳಿಕ ಪೂರ್ಣವಾಗುತ್ತದೆ ಎಂದು ಏಮ್ಸ್ ಆಸ್ಪತ್ರೆ ಮೂಲಗಳು ತಿಳಿಸಿವೆ. ಪ್ರಧಾನಿ ಮನಮೋಹನ್ ಸಿಂಗ್ ಅವರು 18 ವರ್ಷಗಳ ಹಿಂದೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರು ವರ್ಷಗಳ ಹಿಂದೆ ಮುಚ್ಚಿದ ರಕ್ತನಾಳಗಳ ಸುಸ್ಥಿತಿಗೆ ಆಂಜಿಯೋಪ್ಲಾಸ್ಟಿ ಮಾಡಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಹೃದಯ ಶಸ್ತ್ರ ಚಿಕಿತ್ಸೆಗೆ ಮನಮೋಹನ್ ಸಿಂಗ್ ಒಳಗಾಗುತ್ತಿದ್ದಾರೆ.

2007ರಲ್ಲಿ ಪ್ರಾಸ್ಟೇಟ್(ಪುರುಷ ಜನನೇಂದ್ರಿಯಕ್ಕೆ ಸಂಬಂಧಿಸಿದ ಒಂದು ಗ್ರಂಥಿ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೇ, 2008ರಲ್ಲಿ ಕಣ್ಣಿನ ಪೊರೆ ತೆಗೆಯಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಪ್ರಧಾನಿಗಳು ಬೈಪಾಸ್ ಸರ್ಜರಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಅನುಪಸ್ಥಿತಿಯಲ್ಲಿ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದೆ. ಪ್ರಧಾನಿ ಅವರ ಕರ್ತವ್ಯಗಳನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನಿರ್ವಹಿಸಲಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+